ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಗೆ ಎಂ ಆರ್ ಪಿ ಎಲ್ ನಿಂದ ಸ್ಕೂಲ್ ಬಸ್ ಕೊಡುಗೆ
ಮೂಡಬಿದ್ರೆ – ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ರವರ ಶಿಫಾರಸ್ಸಿನ ಮೇರೆಗೆ ಬಸ್ಸು ಕೊಡುಗೆ
(Padubelle) ಪಡುಬೆಳ್ಳೆ : ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಗೆ ಎಂ ಆರ್ ಪಿ ಎಲ್ ಸಂಸ್ಥೆಯುಮೂಡಬಿದ್ರೆ ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ರವರ ಶಿಫಾರಸ್ಸಿನ ಮೇರೆಗೆ ಶಾಲಾ ಬಸ್ಸನ್ನು ಸೋಮವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
ಎಮ್ ಆರ್ ಪಿ ಎಲ್ ಅಧಿಕಾರಿ ಕೇಶವ ಪಾಟಾಳಿಯವರು ಶಾಸಕ ಉಮಾನಾಥ ಎ ಕೋಟಿಯಾನ್ ರವರಿಗೆ ಬಸ್ಸಿನ ಕಿಲಿ ಕೈಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಉಮಾನಾಥ ಕೋಟ್ಯಾನ್ ಮಾತನಾಡಿ, ಪಡುಬೆಳ್ಳೆ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯವರು ನನ್ನನ್ನು ನಿರಂತರ ಸಂಪರ್ಕಿಸಿ ಶಾಲಾ ಬಸ್ಸಿಗಾಗಿ ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ಎಆರ್ಪಿಎಲ್ ಸಂಸ್ಥೆಯವರಿಗೆ ಬಸ್ಸನ್ನು ನೀಡುವಂತೆ ಮನವರಿಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ಎಂ ಆರ್ ಪಿ ಎಲ್ ನಿಂದ ಸಿಗುವಂತಾಗಲಿ ಎಂದರು.
ಎಂ ಆರ್ ಪಿ ಎಲ್ ಸಂಸ್ಥೆಯ ಅಧಿಕಾರಿ ಕೇಶವ ಪಾಟಾಳಿಯವರು ಮಾತನಾಡಿ, ನಾವು ಮೊದಲ ಬಾರಿಗೆ ಶಾಸಕ ಉಮಾನಾಥ ಕೋಟಿಯಾನ್ ರವರ ಬೇಡಿಕೆಯಂತೆ ಉಡುಪಿ ಜಿಲ್ಲೆಗೆ ಶಾಲಾ ವಾಹನ ನೀಡಿದ್ದೇವೆ. ಮುಂದಿನ ದಿನಗಳಲ್ಲಿಆದಷ್ಟು ಸಹಾಯ ನೀಡುತ್ತೇವೆ ಎಂದರು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಎಂ ಆರ್ ಪಿ ಎಲ್ ಸಂಸ್ಥೆಯ ಅಧಿಕಾರಿ ಕೇಶವ ಪಾಟಾಳಿ ಮತ್ತು ಸಮಾಜ ಸೇವಕ ರಾಮ ಅಮೀನ್ ಪಚ್ಚನಾಡಿಯವರನ್ನು ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮುಂಬಯಿ ಬಿಲ್ಲವರ ಅಸೋಶಿಯೇಶನ್ ಕಾರ್ಯದರ್ಶಿ ಹರೀಶ್ ಜಿ ಪೂಜಾರಿ, ರಾಮ ಅಮೀನ್ ಪಚ್ಚನಾಡಿ, ಶಿವಾಜಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಪ್ರಕಾಶ್ ಪಾಲಮೆ, ಚಂದ್ರಶೇಖರ ಕಾಪು, ಸುರೇಶ್ ಪೂಜಾರಿ ಪಡುಬೆಳ್ಳೆ, ಸುಧಾಕರ ಪೂಜಾರಿ ಪಡುಬೆಳ್ಳೆ, ಶಾಲಾ ಪ್ರಾಂಶುಪಾಲ ರಾಘವೇಂದ್ರ ಸಾಲ್ಯಾನ್, ಮುಖ್ಯೋಪಾಧ್ಯಾಯಿನಿ ಉಷಾ ಎಸ್, ಪ್ರಸಾದ್ ಭಂಡಾರಿ, ಜ್ಯೋತಿ ಪ್ರವೀಣ್ ಪೂಜಾರಿ, ಕುಸುಮಾ ಅಮೀನ್, ಪ್ರವೀಣ್ ಪೂಜಾರಿ, ಮನ್ವಿತಾ ಮತ್ತಿತರರು ಉಪಸ್ಥಿತರಿದ್ದರು.

