• Home  
  • ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ (Pandeshwara-Poster relese Kalibail Shree Kshetra)
- ಕರಾವಳಿ - ದೈವ - ದೇವರು

ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ (Pandeshwara-Poster relese Kalibail Shree Kshetra)

Share: ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ ಕಲಿಯುಗದ ಕಾರಣಿಕ ದೈವ ಕೊರಗಜ್ಜ : ಆನಂದ್ ಸಿ ಕುಂದರ್ (Anand C Kundar) ಕೋಟ: ಕಲಿಯುಗದ ಕಾರಣಿಕ ದೈವ ಕೊರಗಜ್ಜ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಭಕ್ತರ ಇಷ್ಟಾರ್ಥ ನೆರವೆರಿಸುತ್ತಿದ್ದಾನೆ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಮಂಗಳವಾರ ಪಾಂಡೇಶ್ವರ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ […]

ಪಾಂಡೇಶ್ವರಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ

ಕಲಿಯುಗದ ಕಾರಣಿಕ ದೈವ ಕೊರಗಜ್ಜ : ಆನಂದ್ ಸಿ ಕುಂದರ್ (Anand C Kundar)

ಕೋಟ: ಕಲಿಯುಗದ ಕಾರಣಿಕ ದೈವ ಕೊರಗಜ್ಜ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಭಕ್ತರ ಇಷ್ಟಾರ್ಥ ನೆರವೆರಿಸುತ್ತಿದ್ದಾನೆ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

ಮಂಗಳವಾರ ಪಾಂಡೇಶ್ವರ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಇದರ ಜೀರ್ಣೋದ್ದಾರದ ಅಭಿವೃದ್ಧಿಯ ಸಲುವಾಗಿ ಪಾಕಶಾಲೆ ಮತ್ತು ಭೋಜನ ಶಾಲೆಯ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಅನಾವಣಗೊಳಿಸಿ ಅವರು ಮಾತನಾಡಿದರು.

 ಈ ದೇಶ ಧಾರ್ಮಿಕವಾಗಿ ನಾನಾ ರೀತಿಯ ಪರಂಪರೆಗಳಿಂದ ಸಂರಕ್ಷಿತವಾಗಿದೆ ಒಂದೊಂದು ರೀತಿಯಲ್ಲಿ ಶ್ರದ್ಧಾ ಭಕ್ತಿಯ ಕ್ಷೇತ್ರ ತಾಣಗಳು ಕಾಲಕ್ಕೆ ಅನುಗುಣವಾಗಿ ಅವತಾರ ತಾಳಿ ಪ್ರಸಿದ್ಧಿ ಪಡೆಯುತ್ತಿವೆ. ಆದರೆ ಕೊರಗಜ್ಜನ ತಾಣಗಳು ಈ ಕಲಿಯುಗದಲ್ಲಿ ಭಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾನೆ. ಇದೊಂದು ವಿಶೇಷತೆಯಲ್ಲಿ ವಿಶೇಷವಾಗಿದೆ. ಇಂತಹ ಕ್ಷೇತ್ರಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ ಆ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿ ಎಂದು ಹಾರೈಸಿದರು.

ಇದೇ ವೇಳೆ ದೈವಸ್ಥಾನದ ವತಿಯಿಂದ ಆನಂದ್ ಸಿ ಕುಂದರ್‌ರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಸ್ಥಾನದ ಮೊಕ್ತೇಸರ ಎಮ್ ಸಿ ಚಂದ್ರಶೇಖರ್ ಪಾಂಡೇಶ್ವರ ವಹಿಸಿದ್ದರು.

 ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠಲ್  ಪೂಜಾರಿ, ಯಕ್ಷ ಕಲಾವಿದ ಪ್ರವೀಣ್ ಗಡಿಯಾರ ಬಾರ್ಕೂರು, ಮಲ್ಪೆ ಪೋಲಿಸ್ ಠಾಣಾಧಿಕಾರಿ ಗುರುನಾಥ್ ಹಾದಿಮನೆ, ಉಡುಪಿ ಟೌನ್ ಪೋಲಿಸ್ ಠಾಣೆಯ ಎಎಸ್‌ಐ ಜಯಕರ ಐರೊಡಿ, ಶ್ರೀ ಕ್ಷೇತ್ರದ ಪಾತ್ರಿಗಳಾದ ನವೀನ್ ಪಾತ್ರಿ ಕುಂಜಿಬೆಟ್ಟು, ನಿವೃತ್ತ ಬ್ಯಾಂಕ್ ಅಧಿಕಾರಿ ಪಂಜು ಪೂಜಾರಿ ಯಡಬೆಟ್ಟು, ದೈವಸ್ಥಾನದ ಗೌರವ ಸಲಹೆಗಾರ ಶಶಿಧರ್ ರಾವ್ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ರಾಘವೇಂದ್ರರಾಜ್ ಸ್ವಾಗತಿಸಿ ನಿರೂಪಿದರು. ದೈವಸ್ಥಾನದ ಪ್ರದಾನ ಅರ್ಚಕ  ಅಭಿಜಿತ್ ಪಾಂಡೇಶ್ವರ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.