• Home  
  • ಬೆಳಪು : ಬುರ್ಕಾ ದಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ (Belapu: Burqa-clad women attempt to kidnap children, stab child’s mother and flee)
- ಅಪರಾಧ

ಬೆಳಪು : ಬುರ್ಕಾ ದಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ (Belapu: Burqa-clad women attempt to kidnap children, stab child’s mother and flee)

Share: ಬೆಳಪು : ಬುರ್ಕಾ ದಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ (Belapu) ಬೆಳಪು : ಬೆಳಪು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಕಾದಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದೆ. ಇದೇ ಸಂದರ್ಭ ಮಗುವಿನ ತಾಯಿಗೆ ಚೂರಿ ಇರಿದು ಪರಾರಿ ಆದ ಘಟನೆ ಶುಕ್ರವಾರ ಮದ್ಯಾಹ್ನ ಸಂಭವಿಸಿದೆ.  ಬೆಳಪು ಜನತಾ ಕಾಲನಿಯ ಮೊಹಮ್ಮದ್‌ ಆಲಿ  ಎಂಬುವರ ಮನೆಗೆ ಇಬ್ಬರು […]

(Belapu) ಬೆಳಪು : ಬೆಳಪು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಕಾದಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದೆ. ಇದೇ ಸಂದರ್ಭ ಮಗುವಿನ ತಾಯಿಗೆ ಚೂರಿ ಇರಿದು ಪರಾರಿ ಆದ ಘಟನೆ ಶುಕ್ರವಾರ ಮದ್ಯಾಹ್ನ ಸಂಭವಿಸಿದೆ.

 ಬೆಳಪು ಜನತಾ ಕಾಲನಿಯ ಮೊಹಮ್ಮದ್‌ ಆಲಿ  ಎಂಬುವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನನಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಒಬ್ಬ ಮಹಿಳೆ ಮನೆಯ ಒಳಗೆ ಪ್ರವೇಶಿಸಿದ್ದಾಳೆ. ಒಳಗೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೊರಗೆ ಓಡಿ ಹೋಗಲು ಪ್ರಯತ್ನಿಸಿದಾಗ, ಮಗುವಿನ ತಾಯಿ ತಾಬುರಿಸ್ ತಡೆದಿದ್ದಾರೆ. ಆಕೆ ಬೊಬ್ಬೆ ಹೊಡೆದಾಗ ಮಗುವನ್ನು ನೆಲದಲ್ಲಿ ಬಿಟ್ಟು ತಡೆಯಲು ಬಂದ ತಬ್ಬಿರ್ಸ್ ಗೆ ಚೂರಿಯಿಂದ ಗಾಯಗೊಳಿಸಿ ಪರಾರಿಯಾಗಿದ್ದಾರೆ.

ಮಹಿಳೆಯರ ಬುರ್ಖಾ ಬೆಳಪು ರೈಲ್ವೇ ನಿಲ್ದಾಣದ ಹಳಿಯ ಬಳಿ ಪತ್ತೆ ಆಗಿದ್ದು, ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಈ ಮಹಿಳೆಯರು ಬೆಳಪು ಆಸುಪಾಸಿನಲ್ಲಿ ಇರುವ ಶಂಶಯವಿದ್ದು, ಯಾರಿಗಾದರೂ ಮಹಿಳೆಯರು ಕಂಡು ಬಂದಲ್ಲಿ ತಕ್ಷಣ ಶಿರ್ವ ಠಾಣೆಗೆ 9480805450ಗೆ ತಿಳಿಸಲು ಕೋರಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.