• Home  
  • ಮಲ್ಪೆ: ಮಹಿಳೆಗೆ ಥಳಿತ ಪ್ರಕರಣ – ಮಲ್ಪೆ ಬಂದರು ಸ್ತಬ್ಧ, ಪ್ರತಿಭಟಿಸಿ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಮೀನುಗಾರರು (Malpe: Woman beaten up – Malpe port shut down, fishermen protest and attack police department)
- protest - ಅಪರಾಧ - ಕರಾವಳಿ

ಮಲ್ಪೆ: ಮಹಿಳೆಗೆ ಥಳಿತ ಪ್ರಕರಣ – ಮಲ್ಪೆ ಬಂದರು ಸ್ತಬ್ಧ, ಪ್ರತಿಭಟಿಸಿ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಮೀನುಗಾರರು (Malpe: Woman beaten up – Malpe port shut down, fishermen protest and attack police department)

Share: ಮಲ್ಪೆ: ಮಹಿಳೆಗೆ ಥಳಿತ ಪ್ರಕರಣ – ಮಲ್ಪೆ ಬಂದರು ಸ್ತಬ್ಧ,  ಪ್ರತಿಭಟಿಸಿ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಮೀನುಗಾರರು (Malpe) ಮಲ್ಪೆ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಕಳವುಗೈದ  ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಇಂದು ಮಲ್ಪೆಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಿಲ್ಲಿಸಿ, ಪ್ರತಿಭಟನೆ ನಡೆಸಿದರು. ಮೀನುಗಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ಬೋಟ್ ಗಳು ಸ್ಥಬ್ಧವಾಗಿದೆ. ಮೀನುಗಾರ ಮುಖಂಡರು ಮೀನುಗಾರಿಕಾ […]

(Malpe) ಮಲ್ಪೆ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಕಳವುಗೈದ  ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಇಂದು ಮಲ್ಪೆಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಿಲ್ಲಿಸಿ, ಪ್ರತಿಭಟನೆ ನಡೆಸಿದರು. ಮೀನುಗಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ಬೋಟ್ ಗಳು ಸ್ಥಬ್ಧವಾಗಿದೆ.

ಮೀನುಗಾರ ಮುಖಂಡರು ಮೀನುಗಾರಿಕಾ ಮಂತ್ರಿ, ಸರಕಾರ ಮತ್ತು ಉಡುಪಿ ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು. ಮಹಿಳೆಗೆ ಥಳಿಸಿದ ನೆಪದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ತಕ್ಷಣ ಅವರ ಮೇಲಿನ ಸೆಕ್ಷನ್ ಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.

ಘಟನೆಯಲ್ಲಿ ಭಾಗಿಯಾದ ಐವರು ಮೀನುಗಾರರ ಬಂಧನವಾಗಿದೆ. ಮಲ್ಪೆಯಲ್ಲಿ ಪ್ರತಿಭಟನಾ ಸಭೆ ನಡೆದು ಸಭೆಯಲ್ಲಿ ಅಪಪ್ರಚಾರದ ವಿರುದ್ಧ ಹೋರಾಟ ಎಂದು ಉಲ್ಲೇಖಿಸಿರುವ ಮೀನುಗಾರರು ಮೀನು ಕಳವು ಮಾಡಿದ ಮಹಿಳೆಗೆ ಥಳಿಸಿದ್ದನ್ನೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಮಲ್ಪೆಯಲ್ಲಿ ಜಾತಿಬೇಧ ಮರೆತು ಸಾವಿರಾರು ಜನ ದುಡಿಯುತ್ತಿದ್ದಾರೆ. ಇಂತಹ ಕಡೆ ಕಳವು ಮಾಡಿದವರಿಗೆ ಹೊಡೆಯುವುದು ಸಾಮಾನ್ಯ. ಆದರೆ ಪೊಲೀಸರು ಇದೇ ನೆಪದಲ್ಲಿ ಅಮಾಯಕ ಮೀನುಗಾರ ಮಹಿಳೆಯರನ್ನು‌ ಬಂಧಿಸಿರುವುದು ತಪ್ಪು ಎಂದು ಮೀನುಗಾರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

 ಮಲ್ಪೆ ಮೀನುಗಾರರ ಸಂಘ ಹಾಗೂ ಸಮಸ್ತ ಮೀನುಗಾರರ ವತಿಯಿಂದ ಮಲ್ಪೆ ಬಂದರಿನ ಮೀನುಗಾರರ ಬಗ್ಗೆ ಅಪಪ್ರಚಾರವಾಗಿದೆ ಎಂದು ಆರೋಪಿಸಿ ಮಲ್ಪೆಯ ಸಮಸ್ತ ಮೀನುಗಾರರು ಮಲ್ಪೆ ಬಂದರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.

 ಸಭೆಯುದ್ದಕ್ಕೂ ಶಾಸಕ, ಮಾಜಿ ಸಚಿವ, ಮಾಜಿ ಶಾಸಕರು ಸೇರಿದಂತೆ ಮೀನುಗಾರ ಮುಖಂಡರು ಜಿಲ್ಲಾ ಎಸ್ಪಿ ಡಾ. ಅರುಣ್ ಅವರ ವಿರುದ್ದ ಹರಿಹಾಯ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.