ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ ಚೆಂಡು ಉತ್ಸವ ಸಂಪನ್ನ
photo credit : RAVI DIGITALS PADUBIDRI
(Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕವಾಗಿ ಜರಗುವ ಒಂದು ದಿನದ ಚೆಂಡು ಉತ್ಸವಕ್ಕೆ ದೇವಳದ ಪ್ರಧಾನ ಅರ್ಚಕರಾದ ಗುರುರಾಜ್ ಭಟ್ ಎರ್ಮಾಳು ಪ್ರಾರ್ಥಿಸಿ, ಚೆಂಡಿನ ಸೇವಾಕರ್ತರಾದ ನಡ್ಸಾಲು ಗ್ರಾಮದ ಪಾಂದೆ ಕರೆಯ ಬೇಬಿ ಪೂಜಾರ್ತಿ ಮನೆಯವರು ನಡ್ಸಾಲು ಗುತ್ತಿನಾರ್ ರವರಿಗೆ ಹಸ್ತಾಂತರಿಸುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.
ಪುರಾಣ ಪ್ರಸಿದ್ಧ ಪಡುಬಿದ್ರಿ ಚೆಂಡು ಉತ್ಸವ ವರ್ಷಂಪ್ರತಿ ವಾರ್ಷಿಕ ಜಾತ್ರಾ ಮಹೋತ್ಸವದ ಮರುದಿನ ಪಾದೆಬೆಟ್ಟು ಮತ್ತು ನಡ್ಸಾಲು ಕರೆಯ ಹಿರಿಯರು, ಕಿರಿಯರು ಸೇರಿ ಸಂಜೆಯಿಂದ ಸೂರ್ಯಾಸ್ತಮಾನದವರೆಗೆ ಆಡುವ ಪ್ರತೀತಿಯಿದೆ.
ಈ ಸಂದರ್ಭ ದೇವಳದ ಅನುವಂಶಿಕ ಮೊಕ್ತೇಸರ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ, ನಡ್ಸಾಲು ಗುತ್ತಿನಾರ್ ಶ್ರೀನಾಥ ಶೆಟ್ಟಿ, ಚೆಂಡು ಸೇವಾಕರ್ತ ಮನೆಯ ಶರತ್ ಪೂಜಾರಿ ಮತ್ತು ಕುಟುಂಬಸ್ಥರು, ಪೇಟೆಮನೆ ಅನಿಲ್ ಶೆಟ್ಟಿ, ಪ್ರಕಾಶ್ ದೇವಾಡಿಗ ಕಾರ್ಯನಿರ್ವಹಣಾಧಿಕಾರಿ ವೇ.ಮೂ.ಕೆ.ರಾಜಗೋಪಾಲ್ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
