• Home  
  • ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ (Malpe : Dead body of newborn found in toilet – Udupi SP statement)
- ಅಪರಾಧ

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ (Malpe : Dead body of newborn found in toilet – Udupi SP statement)

Share: ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ  (Udupi) ಉಡುಪಿ: ನವಜಾತ ಶಿಶುವಿನ ಮೃತದೇಹ ಮಲ್ಪೆಯ ಕಾಂಪ್ಲೆಕ್ಸ್ ವೊಂದರ ಶೌಚಾಲಯದಲ್ಲಿ ಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.  ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ನ  ಶೌಚಾಲಯದಲ್ಲಿ ಈ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಅರುಣ್ ಕೆ, ಈ ಮಗು ಸ್ಥಳೀಯರಾದ ಅಫ್ರೀನಾ ಎಂಬ ಯುವತಿಯದ್ದಾಗಿದೆ. ಏಳೂವರೆಯಿಂದ ಎಂಟು ತಿಂಗಳಲ್ಲಿ ಯುವತಿ ಅಬಾರ್ಶನ್ […]

 (Udupi) ಉಡುಪಿ: ನವಜಾತ ಶಿಶುವಿನ ಮೃತದೇಹ ಮಲ್ಪೆಯ ಕಾಂಪ್ಲೆಕ್ಸ್ ವೊಂದರ ಶೌಚಾಲಯದಲ್ಲಿ ಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

 ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ನ  ಶೌಚಾಲಯದಲ್ಲಿ ಈ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಅರುಣ್ ಕೆ, ಈ ಮಗು ಸ್ಥಳೀಯರಾದ ಅಫ್ರೀನಾ ಎಂಬ ಯುವತಿಯದ್ದಾಗಿದೆ. ಏಳೂವರೆಯಿಂದ ಎಂಟು ತಿಂಗಳಲ್ಲಿ ಯುವತಿ ಅಬಾರ್ಶನ್ ಗೆ ಪ್ರಯತ್ನ ಮಾಡಿದಾಗ ಈ ಘಟನೆ ಸಂಭವಿಸಿದೆ. ಯುವತಿ ಕೂಡ ಹೇಳಿಕೆ ನೀಡಿದ್ದಾರೆ. ಸದ್ಯ ಯುವತಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಡಿಸ್ ಚಾರ್ಜ್ ಆದ ನಂತರ ಮತ್ತೊಮ್ಮೆ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ.

  ಈ ಘಟನೆಗೆ ಸಂಬಂಧಿಸಿ ಸುಳ್ಳು  ಆಡಿಯೋಗಳನ್ನು ಹರಿಯಬಿಡಲಾಗುತ್ತಿದೆ. ಈ ರೀತಿ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.