• Home  
  • ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ
- social service

ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ

Share: ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ “ಮಂಜಣ್ಣನ ನೆನಪು ಹದಿಮೂರು” ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ (Udyavara) ಉದ್ಯಾವರ : ರಾಜಕೀಯ ಎಂದರೆ ಹೇವರಿಕೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಮುಳುಗಿದ್ದರೂ, ತನ್ನ ಸೂಕ್ಷ್ಮಪ್ರಜ್ಞೆಯನ್ನು ಕಳಕೊಳ್ಳದೆ ಭಿನ್ನ ಧ್ವನಿಯಿಂದ ವರ್ತಿಸುತ್ತಿದ್ದವರು ಮಂಜುನಾಥ್ ಉದ್ಯಾವರ್ ಎಂದು ಕಾಪು ಸಿ . ಎ ಬ್ಯಾಂಕಿನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಹೇಳಿದ್ದಾರೆ.  ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ […]

(Udyavara) ಉದ್ಯಾವರ : ರಾಜಕೀಯ ಎಂದರೆ ಹೇವರಿಕೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಮುಳುಗಿದ್ದರೂ, ತನ್ನ ಸೂಕ್ಷ್ಮಪ್ರಜ್ಞೆಯನ್ನು ಕಳಕೊಳ್ಳದೆ ಭಿನ್ನ ಧ್ವನಿಯಿಂದ ವರ್ತಿಸುತ್ತಿದ್ದವರು ಮಂಜುನಾಥ್ ಉದ್ಯಾವರ್ ಎಂದು ಕಾಪು ಸಿ . ಎ ಬ್ಯಾಂಕಿನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಹೇಳಿದ್ದಾರೆ.

 ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಉದ್ಯಾವರ ಶ್ರೀ ವಿಠೋಬ ರುಕುಮಾಯಿ ನಾರಾಯಣ ಗುರು ಮಂದಿರದಲ್ಲಿ ಜರಗಿದ, ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ಉದ್ಯಾವರ ಗ್ರಾಮದ ಅಭಿವೃದ್ಧಿಯ ಹರಿಕಾರರೂ ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಮಂಜುನಾಥ ಉದ್ಯಾವರ್ ಅವರ ಪುಣ್ಯ ಸ್ಮರಣೆ  ‘ಮಂಜಣ್ಣನ ನೆನಪು ಹದಿಮೂರುʼ ಇದರ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

 ಮಂಜುನಾಥ ಉದ್ಯಾವರ್  ಅವರ ಧ್ವನಿ ಯಾವತ್ತೂ ಜನಸಾಮಾನ್ಯರ ಪರವಾಗಿತ್ತು. ಜನಸಾಮಾನ್ಯರ ಮಧ್ಯೆ ಅವರ ಏಳಿಗೆಗಾಗಿ ಅವಿರತವಾಗಿ ಹೋರಾಟವನ್ನು ಮಾಡುತ್ತಿದ್ದರು. ತನ್ನ ಬಳಿ ಸಮಸ್ಯೆಗಳನ್ನು ಹಿಡಿದು ಕೊಂಡು ಜನರು ಬಂದಾಗ ಅವರಿಗೆ ನೋವಾಗದಂತೆ ವರ್ತಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರು. ಇದು ನಿಜವಾಗಿಯೂ ರಾಜಕೀಯದಲ್ಲಿ ಬೇರೆದೇ ಆದ ಮಾರ್ಗ. ಹೀಗಾಗಿ ಮಂಜಣ್ಣ ಇಂದು ಕೂಡ ಜನರ ಮನಸ್ಸಲ್ಲಿ ಇದ್ದಾರೆ. ಅದಕ್ಕೆ ನಿದರ್ಶನ ಈ ರಕ್ತದಾನ ಶಿಬಿರ. ಓರ್ವ ಸಮಾಜ ಸೇವಕನ ನೆನಪಲ್ಲಿ ಇದಕ್ಕಿಂತ ಉತ್ತಮ ಸೇವೆಯನ್ನು ಮಾಡಲು ಸಾಧ್ಯವಿಲ್ಲ ಎಂದರು.   

 ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ  ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ,  ಮಂಜುನಾಥ್ ಉದ್ಯಾವರ ಕಾಲದಲ್ಲೂ ನಾವು ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದೆವು. ಅವರ ಕಾಲ ನಂತರ ಅವರ ನೆನಪಲ್ಲಿ ಮುಂದುವರಿಸುತ್ತಿದ್ದೇವೆ. ದಯಮಾಡಿ   ರಕ್ತದಾನ ಮಾಡಲು ಅರ್ಹತೆಯಿರುವವರು ಮತ್ತಷ್ಟು ರಕ್ತದಾನ ಮಾಡಿ. ರಕ್ತ ಮತ್ತೋರ್ವ ವ್ಯಕ್ತಿಗೆ ಉಪಯೋಗ ಆಗುತ್ತೆ. ಬ್ಲಡ್ ಬ್ಯಾಂಕ್ ಅಲ್ಲಿ ಎಷ್ಟು ರಕ್ತ ಇದ್ದರೂ ಕೂಡ ಅದಕ್ಕೆ ಬೇಡಿಕೆ  ಇದೆ . ಹಾಗಾಗಿ ನಮ್ಮಲ್ಲಿ ರಕ್ತದಾನದ ಬಗ್ಗೆ ಜಾಗೃತಿಯನ್ನು ಹೆಚ್ಚಿಸೋಣ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥರಾದ ಡಾ. ವೀಣಾ ಕುಮಾರಿಯವರು  ರಕ್ತದಾನದ ಮಹತ್ವ ವಿವರಿಸಿದರು.

  ಕಾಪು ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೀರ್ತಿ ಶೆಟ್ಟಿ ಅಂಬಲಪಾಡಿ ಮಾತನಾಡಿದರು.  

  ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ   ಸ್ವಾಗತಿಸಿದರು.  ಮಾಜಿ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲಾ ವಂದಿಸಿದರು.

 ಈ ಶಿಬಿರದಲ್ಲಿ 75 ಯೂನಿಟ್ ರಕ್ತ ಸಂಗ್ರಹವಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.