ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಶಾಲೆಯಲ್ಲಿ ಉಸಿರಿಗಾಗಿ ಹಸಿರು ಕಾರ್ಯಕ್ರಮ
(Shankarapura) ಶಂಕರಪುರ: ಉಸಿರಿಗಾಗಿ ಹಸಿರು ಸಂಘಟನೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಹಾಗೂ ಸೈಂಟ್ ಜೋನ್ಸ್ ಅಕಾಡೆಮಿ ಹೈಸ್ಕೂಲ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ “ಉಸಿರಿಗಾಗಿ ಹಸಿರು” ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಸಾಂಕೇತಿಕವಾಗಿ ವಿಧ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು.
ಇದೇ ಸಂದರ್ಭ ವಿವಿಧ ಹಣ್ಣಿನ ಗಿಡಗಳು ಮತ್ತು ಔಷಧಿಯ ಗಿಡಗಳ ವಿತರಣೆ ಮತ್ತು ನೆಡುವ ಕಾರ್ಯಕ್ರಮವು ಸೈಂಟ್ ಜೋನ್ಸ್ ಅಕಾಡೆಮಿ ಹೈಸ್ಕೂಲ್ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಂಕರಪುರ ಸೈಂಟ್ ಜೋನ್ಸ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ಪ್ರಕಾಶ್ ಅನಿಲ್ ಕಾಸ್ತಲೀನೊ, ಕಾಪು ತಹಶೀಲ್ದಾರರಾದ ಡಾ. ಪ್ರತೀಭಾ ಆರ್, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳಾದ ಅನುಷಾ ಭಟ್, ಕಾಪು ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಸೈಂಟ್ ಜೋನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಿಯಾ ಕೆ ಡೆ’ಸಾ, ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಸದಸ್ಯರಾದ ಸಂತೋಷ್ ಎಂ ಶೆಟ್ಟಿಗಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

