ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ, ಪ್ರಯಾಣಿಕರು ಪಾರು
ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ ಬಿ.ಸಿ ರೋಡ್ ನಲ್ಲಿ ನಡೆದ ಘಟನೆ
(Shirva) ಶಿರ್ವ: ಉಡುಪಿಯಿಂದ ಕಡೆಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ಮಹೇಂದ್ರ ಥಾರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟಕಲ್ ಬಿ.ಸಿ ರೋಡ್ ಮಧ್ಯೆ ಚರಂಡಿಗೆ ಉರುಳಿದ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ.
ಅಪಘಾತದ ರಭಸಕ್ಕೆ ವಾಹನದ ಮುಂಭಾಗ ನುಚ್ಚುಗುಜ್ಜಾಗಿದೆ.
ಕಾರಿನಲ್ಲಿ ಶಿರ್ವ ಪರಿಸರದ ಚಾಲಕ ಬಾಲಕೃಷ್ಣ (20), ಓರ್ವ ಸಹ ಪ್ರಯಾಣಿಕ ಹಾಗೂ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಅಪಘಾತ ನಡೆದ ತಕ್ಷಣ ಸ್ಪಂದಿಸಿದ ಬಂಟಕಲ್ ಬಿ ಸಿ ರೋಡ್ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಟೋನಿ ಮೊನಿಸ್ ಆಂಬುಲೆನ್ಸ್ ಹಾಗೂ ಶಿರ್ವ ಪೊಲೀಸರಿಗೆ ಕರೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಘಟನೆಗೆ ಸ್ಪಂದಿಸಿದ ಬಂಟಕಲ್ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಹಾಗೂ ವೀರೇಂದ್ರ ಪಾಟ್ಕರ್ ರವರು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಉಡುಪಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಪ್ರಾಣಾಯಾಪಾಯದಿಂದ ಪಾರಾಗಿದ್ದಾರೆ ಎಂದು ಎನ್ನಲಾಗಿದೆ.
ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

