• Home  
  • ಸಸಿಹಿತ್ಲು, ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Sasihithlu, Nadikudru : Kanthu Lakkana yane Yadhava Bangera passes away)
- ನಿಧನ

ಸಸಿಹಿತ್ಲು, ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Sasihithlu, Nadikudru : Kanthu Lakkana yane Yadhava Bangera passes away)

Share: ಸಸಿಹಿತ್ಲು ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Moolki) ಮೂಲ್ಕಿ : ಸಸಿಹಿತ್ಲು ನಿವಾಸಿ ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ(73) ರವರು ಶನಿವಾರ ಸಂಜೆ ನಡಿಕುದ್ರುವಿನ ಸಾನದ ಮನೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.   ಮುಲ್ಕಿ ಸೀಮೆಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೃತರ ಅಂತ್ಯ ಸಂಸ್ಕಾರ ಪಾರಂಪಾರಿಕ ಪದ್ಧತಿಯಲ್ಲಿ ಸಸಿಹಿತ್ಲು ಮೂಲ ಮನೆಯಲ್ಲಿ ನೆರವೇರಿತು. […]

ಸಸಿಹಿತ್ಲು ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ

(Moolki) ಮೂಲ್ಕಿ : ಸಸಿಹಿತ್ಲು ನಿವಾಸಿ ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ(73) ರವರು ಶನಿವಾರ ಸಂಜೆ ನಡಿಕುದ್ರುವಿನ ಸಾನದ ಮನೆಯಲ್ಲಿ ನಿಧನರಾದರು.

ಅವರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

  ಮುಲ್ಕಿ ಸೀಮೆಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೃತರ ಅಂತ್ಯ ಸಂಸ್ಕಾರ ಪಾರಂಪಾರಿಕ ಪದ್ಧತಿಯಲ್ಲಿ ಸಸಿಹಿತ್ಲು ಮೂಲ ಮನೆಯಲ್ಲಿ ನೆರವೇರಿತು. ಅಂತ್ಯ ಸಂಸ್ಕಾರ ಕಾರ್ಯ ಕ್ರಮದಲ್ಲಿ ವಿವಿಧ ಗರಡಿ, ದೈವಸ್ಥಾನಗಳ ಗುರಿಕಾರರು, ಗಡಿಕಾರರು ಮತ್ತು ನೂರಾರು ಮಂದಿ ಅಭಿಮಾನಿಗಳು, ಕುಟುಂಬಿಕರು ಅಂತಿಮ ನಮನ ಸಲ್ಲಿಸಿದರು.

ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ವಿನಯಕುಮಾರ್‌ ಸೊರಕೆ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ, ಕೆಪಿಸಿಸಿ ಕೋ- ಆರ್ಡಿನೇಟರ್ ವಸಂತ್ ಬೆರ್ನಾಡ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಸಸಿಹಿತ್ಲು, ಚಂದ್ರಕುಮಾರ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಮಾಜಿ ಅಧ್ಯಕ್ಷ ಗೋಪಿನಾಥ ಪಡಂಗ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಮುಲ್ಕಿ ವಿಜಯ ರೈತರ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಸಾರಂತಾಯ ಗೆರೋಡಿಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.