ಹೆಜಮಾಡಿ ಮಟ್ಟು ನೂತನ ಶ್ರೀ ಪಾಂಡುರಂಗ ಭಜನಾ ಮಂದಿರಕ್ಕೆ ಶಿಲಾನ್ಯಾಸ
ಕರಾವಳಿಯ ಮೊಗವೀರ ಜನಾಂಗಕ್ಕೆ ಭಜನಾ ಮಂದಿರಗಳೇ ಆಶ್ರಯ : ನಾಡೋಜಾ ಡಾ. ಜಿ ಶಂಕರ್
(Hejamadi) ಹೆಜಮಾಡಿ: ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಶಿಲಾಮಯ ಹೆಜಮಾಡಿ ಮಟ್ಟು ಮೊಗವೀರ ಸಭಾ ಸಂಚಾಲಿತ ಶ್ರೀ ಪಾಂಡುರಂಗ ಭಜನಾ ಮಂದಿರ ಇದರ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.
ಸಭಾಕ್ರಮವನ್ನು ಅಂಬಲಪಾಡಿ ಜಿ ಶಂಕರ ಫ್ಯಾಮಿಲಿ ಟಸ್ಟ್ ಪ್ರವರ್ತಕ ನಾಡೋಜಾ ಡಾ. ಜಿ ಶಂಕರ್ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಕರಾವಳಿಯ ಮೊಗವೀರ ಜನಾಂಗಕ್ಕೆ ಭಜನಾ ಮಂದಿರಗಳೇ ಆಶ್ರಯ ತಾಣವಾಗಿದೆ. ಯಾವುದೇ ಸುನಾಮಿ, ಬಿರುಗಾಳಿಯ ವಿಷಮ ಪರಿಸ್ಥಿತಿ ಇದ್ದರೂ, ನಮ್ಮನ್ನು ಆ ದೇವರು ಕಾಯ್ದುಕೊಂಡು ಬಂದಿದ್ದಾರೆ. ನಾವೀಗ ಆಧುನಿಕ ಭಾರತದಲ್ಲಿದ್ದರೂ, ನಮ್ಮ ಮಕ್ಕಳಿಗೆ ಭಜನೆಯಂತಹಾ ಸಂಸ್ಕಾರ ನೀಡುತ್ತಿರುವುದು ಉತ್ತಮ ಕೆಲಸ.
ಈ ಭಜನಾ ಮಂದಿರಕ್ಕೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಹಿತ ನಮ್ಮೆಲ್ಲರ ಆರ್ಥಿಕ ಸಹಾಯ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಮಟ್ಟು ಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಶಿ ಜಿ. ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಶಾಸಕ ಲಾಲಾಜಿ ಆರ್. ಮೆಂಡನ್, ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಎರ್ಮಾಳು ಪುಚೊಟ್ಟು ಬೀಡು ಸೀತಾರಾಮ ಎಲ್. ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಅವರಾಲು ಕಂಕಣಗುತ್ತು ಯಜಮಾನ ಕೃಷ್ಣ ಶೆಟ್ಟಿ ಗುತ್ತಿನಾರ್, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆಲಡೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಸ್. ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಇದರ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆಲಡೆ ಹೆಜಮಾಡಿ ಇದರ ಆಡಳಿತ ಮೊಕ್ತೇಸರ ಸುರೇಶ್ ಕೆ. ಶೆಟ್ಟಿ, ಯುವ ಉದ್ಯಮಿ ಗೌತಮ್ ಕೋಡಿಕಲ್ ಮಂಗಳೂರು, ಅವರಾಲು ದಾರಡಗುತ್ತು ಯಜಮಾನ ಉದಯ ಹೆಗ್ಡೆ, ಮತ್ತೋದ್ಯಮಿ ಶಶಿಕುಮಾರ್ ಬೆಂಗ್ರೆ ಮಂಗಳೂರು, ಬಿಲ್ಲವರ ಸಂಘ ಹೆಜಮಾಡಿ ಇದರ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ, ಏಳೂರು ಮೊಗವೀರ ಮಹಾಸಭಾ ಹೆಜಮಾಡಿ ಅಧ್ಯಕ್ಷ ಎಸ್. ದಿವಾಕರ ಹೆಜ್ಮಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಿಲ್ಪಾ ಜಿ. ಸುವರ್ಣ, ಯುವ ಉದ್ಯಮಿ ಜಿತೇಂದ್ರ ಶೆಟ್ಟಿ ಉದ್ಯಾವರ, ಯುವ ಉದ್ಯಮಿ ಗಣೇಶ್ ಗುಜರನ್, ಗುತ್ತಿಗೆದಾರ ಲೋಕೇಶ್ ಅಮೀನ್, ಜಯರಾಮ ಗುರಿಕಾರ, ನಾರಾಯಣ ಕೆ ಮೆಂಡನ್, ಬಾಲಕೃಷ್ಣ ಸುವರ್ಣ ಪ್ರೇಮನಾಥ ಸಾಲ್ಯಾನ್, ಚೆನ್ನಕೇಶವ ಮೆಂಡನ್, ಶ್ರೀಮತಿ ಮಮತಾ, ಶ್ರೀಮತಿ ತೇಜಸ್ವಿನಿ ಚಂದ್ರಹಾಸ್, ಧನಂಜಯ್ ಬಂಗೇರ, ಶ್ರೀಧರ ವಿ ತಿಂಗಳಾಯ, ಅಮಿತ್ ಕುಮಾರ್ ಉಪಸ್ಥಿತರಿದ್ದರು.
ಶ್ರೀಮತಿ ಪವಿತ್ರ ಗಿರೀಶ್ ಸ್ವಾಗತಿಸಿದರು. ಶ್ರೀಮತಿ ವಿಮಲಾ ದಯಾನಂದ ಪ್ರಾರ್ಥಿಸಿದರು. ಶರಣ್ ಕುಮಾರ್ ಮಟ್ಟು ನಿರೂಪಿಸಿದರು.

