• Home  
  • ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ ( Press Day Celebration at Shankarapura Sai Mukhayaprana Temple)
- ಪ್ರಚಲಿತ

ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ ( Press Day Celebration at Shankarapura Sai Mukhayaprana Temple)

Share: ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ (Shankarapura) ಶಂಕರಪುರ ಜು.೨:ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರವಲ್ಲಿ ದಿಟ್ಟ ವರದಿಯನ್ನು ನೀಡಲು ರಿಸ್ಕ್ ಎದುರಿಸಿಕೊಂಡು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸುವ ಪತ್ರಕರ್ತರ ಶ್ರಮ ಬೆಲೆ ಕಟ್ಟಲಾಗದ್ದು. ಅಂತಹ ಪತ್ರಕರ್ತರ ಶ್ರೇಯೋಭಿವೃದ್ಧಿಯಾಗಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು. ಅವರು ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭ […]

ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ

(Shankarapura) ಶಂಕರಪುರ ಜು.೨:ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರವಲ್ಲಿ ದಿಟ್ಟ ವರದಿಯನ್ನು ನೀಡಲು ರಿಸ್ಕ್ ಎದುರಿಸಿಕೊಂಡು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸುವ ಪತ್ರಕರ್ತರ ಶ್ರಮ ಬೆಲೆ ಕಟ್ಟಲಾಗದ್ದು. ಅಂತಹ ಪತ್ರಕರ್ತರ ಶ್ರೇಯೋಭಿವೃದ್ಧಿಯಾಗಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು.

ಅವರು ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭ ಪತ್ರಕರ್ತರ ಒಳಿತಿಗಾಗಿ ಪ್ರಾರ್ಥಿಸಿ ದೀಪ ಬೆಳಗಿಸಿ ಆಶೀರ್ವದಿಸಿದರು.

ಸಮಾರಂಭದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಅವರನ್ನು ಸಮ್ಮಾನಿಸಿ, ಪತ್ರಕರ್ತರನ್ನು ಗೌರವಿಸಲಾಯಿತು.

ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ,  ಕಾರ್ಯದರ್ಶಿ ಪ್ರಮೋದ್ ಸುವರ್ಣ, ಕಾರ್ಯಕಾರಿ ಸಮಿತಿಯ ವಿಜಯ ಆಚಾರ್ಯ ಉಚ್ಚಿಲ, ಪ್ರಭಾಕರ್ ಆಚಾರ್ಯ ಬ್ರಹ್ಮಾವರ, ಗಣ್ಯರಾದ ಗೀತಾಂಜಲಿ ಎಂ. ಸುವರ್ಣ, ವೀಣಾ ಎಸ್. ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು, ದಾಮೋದರ ಶರ್ಮಾ, ಅರ್ಚಕ ಉಮೇಶ್ ಉಡುಪ, ಗುರೂಜಿ ಆಪ್ತ ಸಹಾಯಕ ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನೀಲೇಶ್, ಪ್ರದೀಪ್, ರಿತೇಶ್, ರಾಜೇಶ್, ಸುಪ್ರೀತಾ, ಶ್ರೀಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.