ಅಖಿಲ ಭಾರತೀಯ ರೈತ ಪಾರ್ಟಿ ಮಹಿಳಾ ರಾಜ್ಯಾಧ್ಯಕ್ಷೆಯಾಗಿ ಎಸ್.ಯಶೋಧ ಆಯ್ಕೆ
(Vijaya Nagara, Hoovina Hadagali) ವಿಜಯನಗರ, ಹೂವಿನ ಹಡಗಲಿ: ಅಖಿಲ ಭಾರತೀಯ ರೈತ ಪಾರ್ಟಿಯ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆಯಾಗಿ, ಹೂವಿನ ಹಡಿಗಲಿಯ ಎಸ್. ಯಶೋಧ ನೇಮಕವಾಗಿದ್ದಾರೆ.
ಈ ಕುರಿತು ಅಖಿಲ ಭಾರತೀಯ ರೈತ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಬಸಂತ್ ಕುಮಾರರವರು, ನೇಮಕಾತಿ ಆದೇಶ ಪ್ರತಿಯನ್ನು ಎಸ್.ಯಶೋಧರವರಿಗೆ ಹಸ್ತಾಂತರಿಸದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷ ಎಚ್ಕೆ ಸಂತೋಷ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಲಾವಣ್ಯ ಗೌಡ, ಮುಖಂಡರಾದ ಮಂಜೇ ಗೌಡರವರು ಈ ಸಂದರ್ಭ ಉಪಸ್ಥಿತರಿದ್ದರು.
ನೂತನ ಮಹಿಳಾ ರಾಜ್ಯಾಧ್ಯಕ್ಷೆ ಎಸ್. ಯಶೋಧ ರವರನ್ನು, ನೇಮಿಸಿರುವುದಾಗಿ ಅಧಿಕೃತ ಪ್ರಕಟಣೆ ಮೂಲಕ ಘೋಷಿಸಿದ್ದಾರೆ.
ಅಖಿಲ ಭಾರತೀಯ ರೈತ ಪಾರ್ಟಿಯನ್ನು ಎಲ್ಲಾ ಹಂತದಲ್ಲಿ ಸಂಘಟಿಸಿ, ಸರ್ವತೋಮುಖವಾಗಿ ಪ್ರಭಲಗೊಳಿಸಬೇಕು. ರೈತರ ಸಂಕಷ್ಟ ಗಳಿಗೆ ಧ್ವನಿಯಾಗಬೇಕು. ಪಾರ್ಟಿ ವತಿಯಿಂದ ರೈತರ ಪರ ಹೋರಾಟಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಮೂಲಕ ನಾಡಿನ ರೈತರ ಹಿತ ಕಾಪಾಡಬೆಕಿದೆ. ರೈತರಿಗೆ ನಷ್ಟವಾದಾಗ ಹಾಗೂ ಹಾನಿಯಾದಾಗ ಸೂಕ್ತ ಪರಿಹಾರ ಒದಗಿಸಬೇಕಿದೆ. ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ. ಜನ ವಿರೋಧಿ ನೀತಿಯ ವಿರುದ್ಧ, ಹಾಗೂ ಅವ್ಯವಸ್ಥೆಯ ವಿರುದ್ಧ ರೈತರ ಪರ ಸಂಘಟನೆಗಳ ಸಹಯೋಗದೊಂದಿಗೆ, ಹೋರಾಟಗಳನ್ನು ಮಾಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
ಅಖಿಲ ಭಾರತೀಯ ರೈತ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಬಸಂತ ಕುಮಾರವರು, ಪ್ರಕಟಣೆಯ ಮೂಲಕ ಮಹಿಳಾ ವಿಭಾಗದ ನೂತನ ರಾಜ್ಯಾಧ್ಯಕ್ಷೆ, ಎಸ್. ಯಶೋಧರವರಿಗೆ ಸೂಚಿಸಿದ್ದಾರೆ.

