ಕಾಪು: ಆಸ್ಟ್ರೇಲಿಯಾದ ಸಂಸದ ಜಾನ್ ಮುಲ್ಲಾಹೆ ಕಾಪು ಹೊಸಮಾರಿಗುಡಿ ಭೇಟಿ, ಅನುಗ್ರಹ ಪ್ರಸಾದ ಸ್ವೀಕಾರ
ಮಾರಿಯಮ್ಮನಿಗೆ ಆರತಿ ಎತ್ತಿದ ಜಾನ್ ಮುಲ್ಲಾಹೆ
(Kaup) ಕಾಪು: ಆಸ್ಟ್ರೇಲಿಯಾದ ವಿಕ್ಟೋರಿಯನ್ ಸಂಸದರಾಗಿರುವ ಜಾನ್ ಮುಲ್ಲಾಹೆ ಅವರು ಬುಧವಾರ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿದರು.
ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜೆ ಸಲ್ಲಿಸಿ, ಜಾನ್ ಮುಲ್ಲಾಹೆಯವರಿಗೆ ಅನುಗ್ರಹ ಪ್ರಸಾದ ನೀಡಿದರು.
ದೇವಳದ ಜೀರ್ಣೋದ್ಧಾರ ಸಮಿತಿ ವತಿಯಿಂದ ಜಾನ್ ಮುಲ್ಲಾಹೆರವರನ್ನು ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಜೀರ್ಣೋದ್ಧಾರ ಸಮತಿ ಸದಸ್ಯರುಗಳಾದ ಡಾ. ದೇವಿಪ್ರಸಾದ್ ಶೆಟ್ಟಿ, ಮನೋಹರ ಶೆಟ್ಟಿ, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಯೋಗೀಶ್ ಶೆಟ್ಟಿ, ಮಾಧವ ಪಾಲನ್ ಮತ್ತಿತರರು ಉಪಸ್ಥಿತರಿದ್ದರು.
