• Home  
  • ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ  ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ (Uchilla: A well hidden in the ground has opened up and is waiting for a victim, but the Highway Department, Bada Grama Panchayath, is unconcerned)
- PROBLEMS - ವಿಡಿಯೋ

ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ  ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ (Uchilla: A well hidden in the ground has opened up and is waiting for a victim, but the Highway Department, Bada Grama Panchayath, is unconcerned)

Share:  ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ  (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದು ಎರಡು ದಿನಗಳಿಂದ ಬಲಿಗಾಗಿ ಕಾಯುತ್ತಿದ್ದರೂ, ಹೆದ್ದಾರಿ ಇಲಾಖೆಯಾಗಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಇನ್ನೂ ನಿದ್ರೆಯಿಂದ ಎಚ್ಚೆತ್ತಿಲ್ಲ.  ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ […]

 (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದು ಎರಡು ದಿನಗಳಿಂದ ಬಲಿಗಾಗಿ ಕಾಯುತ್ತಿದ್ದರೂ, ಹೆದ್ದಾರಿ ಇಲಾಖೆಯಾಗಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಇನ್ನೂ ನಿದ್ರೆಯಿಂದ ಎಚ್ಚೆತ್ತಿಲ್ಲ.

 ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು ಮಣ್ಣು, ಉಸುಕು ಹಾಕಿ ಮುಚ್ಚಲಾಗಿತ್ತು. ಬಾವಿ ಮುಚ್ಚಿದ ಜಾಗ ಈಗ ಸರ್ವಿಸ್ ರಸ್ತೆಯಾಗಿದೆ‌. ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಗೆ ಸರ್ವಿಸ್ ರಸ್ತೆಯಲ್ಲಿ ಮಣ್ಣು ಮುಚ್ಚಲಾದ ಬಾವಿ ಮತ್ತೆ ಬಾಯ್ದೆರೆದಿದೆ. ಪರಿಸರದಿಂದ ಹರಿದು ಬಂದ ಮಳೆ ನೀರು ಇದೇ ಬಾವಿಯಲ್ಲಿ ತುಂಬಿಕೊಳ್ಳುತ್ತಿದೆ.

ಈಗಾಗಲೇ ಉಚ್ಚಿಲ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್‌ ಉಚ್ಚಿಲರವರು ಮತ್ತು ಬದ್ದಿಂಜೆ ಕಾಂಪ್ಲೆಕ್ಸ್ ಮಾಲೀಕರಾದ ದ್ಯುಮಣಿ ಆರ್‌ ಭಟ್ ರವರು ಟೋಲ್‌ ಗೇಟ್‌ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪ್ಲಾಸ್ಟಿಕ್‌ ಸೇಫ್ಟಿ ಕೋನ್‌ಗಳನ್ನು ಇಟ್ಟು ಕೈತೊಳುದು ಕೋಡಿದ್ದಾರೆ.

  ರಾ.ಹೆ.ಇಲಾಖೆಯವರು ಬಲಿ ತೆಗೆದು ಕೊಂಡ ಬಳಿಕ ಆಬಳಿಕ ಬಾವಿಯನ್ನು ಮುಚ್ಚುತ್ತಾರೋ ಎಂದು ಕಾದು ನೋಡಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.