• Home  
  • ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ (Kaup: Massive blood donation camp by like-minded team)
- social service

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ (Kaup: Massive blood donation camp by like-minded team)

Share: ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ  ಒಂದು ಯುನಿಟ್ ರಕ್ತ 3 ಜನರ ಜೀವ ಉಳಿಸಬಲ್ಲದು : ಡಾ. ವೀಣಾ   (Kaup) ಕಾಪು : ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ಸ್ವಯಂ ಪ್ರೇರಿತ […]

  (Kaup) ಕಾಪು : ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಯಾಗಿದ್ದರು.

ಅವರು ಮಾತನಾಡಿ, ಆರೋಗ್ಯವಂತ ವ್ಯಕ್ತಿಯು ಕನಿಷ್ಠ4-5 ತಿಂಗಳಿಗೊಮ್ಮೆ ರಕ್ತವನ್ನು ನೀಡಬಹುದಾಗಿದೆ. ಪ್ರತೀ ಒಂದು ಯುನಿಟ್ ರಕ್ತವು ಕನಿಷ್ಠ ಮೂರು ಮಂದಿಯ ಜೀವ ಉಳಿಸಬಲ್ಲದು. ಶಿಬಿರಗಳಲ್ಲಿ ಅಥವಾ ದಾನಿಗಳಿಂದ ಪಡೆಯುವ ರಕ್ತವನ್ನು ಜಿಲ್ಲಾಸ್ಪತ್ರೆಯಲ್ಲಿ ಮಾರುವುದಿಲ್ಲ. ಅಗತ್ಯವುಳ್ಳವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಕೊಂಡೊಯ್ಯುವ ಸಂದರ್ಭದಲ್ಲಿ ಅದರ ತಪಾಸಣಾ ವೆಚ್ಚವನ್ನು ಮಾತ್ರ ಸಂಬಂಧಪಟ್ಟವರಿಂದ ಪಡೆದುಕೋಳ್ಳಲಾಗುತ್ತದೆ ಎಂದರು.

  ಶಿಬಿರವನ್ನು ಉದ್ಘಾಟಿಸಿದ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮಾತನಾಡಿ, ರಕ್ತದ ಕೊರತೆ ಮತ್ತು ಅಗತ್ಯತೆಯನ್ನು ಮನಗಂಡು ಕಾಪುವಿನ ಸಮಾನ ಮನಸ್ಕ ಸಂಘಟನೆಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ತರಬೇತಿಯ ಮೂಲಕವಾಗಿ ಯುವ ಜನರನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಜೇಸಿಐ ಸಂಸ್ಥೆಯು ಜನರ ಆರೋಗ್ಯದ ದೃಷ್ಠಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದಕ್ಕೆ ಸರ್ವರ ಸಹಕಾರದ ಅಗತ್ಯತೆಯಿದೆ ಎಂದರು.
 ಕಾಪು ಜೇಸಿಐನ ಅಧ್ಯಕ್ಷೆ ಅನಿತಾ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ವಿದ್ಯಾಲತಾ ಸುವರ್ಣ, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಅಧ್ಯಕ್ಷ ಸಚಿನ್ ಕುಮಾರ್, ನಿಯೋಜಿತ ಅಧ್ಯಕ್ಷ ಸಂತೋಷ್ ಕಾಪು, ಕಾಪು ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯ್ ಜಿ., ಉಳಿಯಾರಗೋಳಿ ಯಾರ್ಡ್ ಫ್ರೆಂಡ್ಸ್ ಅಧ್ಯಕ್ಷ ಸೂರ್ಯನಾರಾಯಣ್ ಸುವರ್ಣ, ಕಾಪು ಯುವವಾಹಿನಿ ಪ್ರತಿನಿಧಿ ಸುನೀಲ್ ಕುಮಾರ್, ಕಲ್ಯ ಜವನೆರ್ ಪ್ರತಿನಿಧಿ ರಂಜಿತ್ ದೇವಾಡಿಗ, ಕಾರ್ಯಕ್ರಮ ಸಂಘಟಕ ಸುಜಿತ್ ಶೆಟ್ಟಿ ಪಾದೂರು ಉಪಸ್ಥಿತರಿದ್ದರು.

 ಶಿಬಿರದಲ್ಲಿ 45 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಕಾಪು ಮೆಸ್ಕಾಂನ ಲೈನ್‌ಮ್ಯಾನ್ ಉದಯ್ ಪೂಜಾರಿ ಅವರನ್ನು ಸೆಲ್ಯುಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

 ಕಾಪು ಜೇಸಿಐನ ಪೂರ್ವಾಧ್ಯಕ್ಷ ರಾಕೇಶ್ ಕುಂಜೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರುತಿ ಎಸ್. ಶೆಟ್ಟಿ ವಂದಿಸಿದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.