ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಪ್ರಾರಂಭೋತ್ಸವ
ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕಿಯರಿಂದ ವಿದ್ಯಾರ್ಥಿಗಳಿಗೆ ಪುಷ್ಪವೃಷ್ಠಿ
(Padubelle) ಪಡುಬೆಳ್ಳೆ: ಪಡುಬೆಳ್ಳೆ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಪ್ರಾರಂಭೋತ್ಸವ ಸೋಮವಾರ ಬೆಳಿಗ್ಗೆ ನೆರವೇರಿತು.
ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸಿಹಿತಿಂಡಿ ತಿನಿಸಿದರು. ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿ ಗೈದು ಮಕ್ಕಳನ್ನು ಆದರದಿಂದ ಸ್ವಾಗತಿಸಿದರು.
ಮೂಡಬಿದ್ರೆ – ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಪುಸ್ತಕವೇ ಜೀವನವಲ್ಲ. ಪುಸತಕದ ಹೊರಗೊಂದು ಜೀವನ ಇದೆ. ಹತ್ತು ಹಲವು ತಪ್ಪುಗಳು ಪುಸ್ತಕದಲ್ಲಿದೆ. ಆ ತಪ್ಪುಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಪುಸ್ತಕವನ್ನೇ ಜೀವನವನ್ನಾಗಿಸದೆ, ಹೊರ ಜಗತ್ತನ್ನೂ ಅರಿಯಿರಿ ಎಂಬ ಕಿವಿ ಮಾತನ್ನು ಹೇಳಿದರು.
ಮುಂಬಯಿ ಬಿಲ್ಲವರ ಅಸೋಶಿಯೇಶನ್ ಕಾರ್ಯದರ್ಶಿ ಹರೀಶ್ ಜಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಾಮ ಅಮೀನ್ ಪಚ್ಚನಾಡಿ, ಶಿವಾಜಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಪ್ರಕಾಶ್ ಪಾಲಮೆ, ಚಂದ್ರಶೇಖರ ಕಾಪು, ಸುರೇಶ್ ಪೂಜಾರಿ ಪಡುಬೆಳ್ಳೆ, ಸುಧಾಕರ ಪೂಜಾರಿ ಪಡುಬೆಳ್ಳೆ, ಪ್ರಸಾದ್ ಭಂಡಾರಿ, ಕುಸುಮಾ ಅಮೀನ್, ಪ್ರವೀಣ್ ಪೂಜಾರಿ, ಜ್ಯೋತಿ ಪ್ರವೀಣ್ ಪೂಜಾರಿ, ಮನ್ವಿತಾ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ರಾಘವೇಂದ್ರ ಸಾಲ್ಯಾನ್ ಸ್ವಾಗತಿಸಿದರು. ವೀಣಾ ನಾಯಕ್ ಮತ್ತು ಧೀಕ್ಷಾ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಉಷಾ ಎಸ್ ವಂದಿಸಿದರು.

