ಶಿರ್ವ : ಸ್ಥಳೀಯ ಯುವಕರಿಂದ ಶ್ಲಾಘನೀಯ ಸಮಾಜಸೇವೆ
ಶಿರ್ವ ರಸ್ತೆಯ ಡಾನ್ ಬಾಸ್ಕೋ – ಶಿರ್ವ ಮಸೀದಿ ಎದುರಿನ ಗುಂಡಿಗೆ ಮೋಕ್ಷ ಕಾಣಿಸಿದ ಯುವಕರು
(Shirva) ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಡಾನ್ ಬಾಸ್ಕೋ– ಶಿರ್ವ ಮಸೀದಿ ಸಮೀಪ, ಶಿರ್ವ ದಿಂದ ಉಡುಪಿ ಕಡೆಗೆ ಸಾಗುವ ರಸ್ತೆಯಲ್ಲಿದ್ದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದ್ದ ಗುಂಡಿಯನ್ನು ಸ್ಥಳೀಯ ಯುವಕರು ಸ್ವಯಂಪ್ರೇರಿತರಾಗಿ ಮುಚ್ಚಿ ಸಮಾಜಸೇವೆಗೆ ಮಾದರಿಯಾಗಿದ್ದಾರೆ.
ಈ ಕಾರ್ಯದಿಂದ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

