ಹಾವೇರಿ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಹಾವೇರಿ ನಗರದ ಹುಕ್ಕೇರಿ ಮಠದಲ್ಲಿ ನಡೆದ ಕಾರ್ಯಕ್ರಮ
(Haveri) ಹಾವೇರಿ ಕರವೇ ಸ್ವಾಭಿಮಾನಿ ಸೇನೆ, ಹಾವೇರಿ ಜಿಲ್ಲಾ ಸಮಿತಿ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಹಾವೇರಿ ನಗರದ ಹುಕ್ಕೇರಿ ಮಠದಲ್ಲಿ ಸೋಮವಾರ, ಬೃಹತ್ ಸೇರ್ಪಡೆ ಕಾರ್ಯಕ್ರಮ ಜರುಗಿತು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ದಾನಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ , ರಾಮು ತಳವಾರ, ಉದ್ಘಾಟಿಸಿದರು.
ಅವರು ಮಾತನಾಡಿ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಬರಗಾಲದ ಛಾಯೆ ಕಾಣಿಸಿಕೊಂಡಿದ್ದು, ಮುಂಗಾರು ಪಸಲು ಇಳುವರಿ ಗಣನೀಯವಾಗಿ ಕುಸಿತ ಕಂಡು ರೈತರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಕ್ತವಾದ ಮಾಹಿತಿಯನ್ನು ಸಲ್ಲಿಸಿ ರೈತರಿಗೆ ನೆರವಾಗಬೇಕು. ಸಂಕಷ್ಟದಲ್ಲಿರುವ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ಸಹ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ಪಡೆಯಲು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಗೌರವಾಧ್ಯಕ್ಷರಾದ ಎಮ್ ಕೆ ತಿಮ್ಮಾಪುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಮಾ ಕೆ ಪುರದ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಶ್ರೀಮತಿ ವಿಜಯ ಬಳ್ಳಾರಿ , ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕಾಗದ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಪ್ರಕಾಶ್ ಹರಳಹಳ್ಳಿ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಪ್ರೇಮ ಮುದಿಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರ, ಹಾವೇರಿ ತಾಲೂಕ ಅಧ್ಯಕ್ಷರಾದ, ಮಂಜುನಾಥ ಬಡಿಗೇರ, ಶಿಗ್ಗಾವಿ ತಾಲೂಕ ಅಧ್ಯಕ್ಷರಾದ ಸುರೇಶ್ ವನಹಳ್ಳಿ, ಹಾನಗಲ್ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ್ರು ಮುದಿಗೌಡ್ರು, ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರ, ಹಾವೇರಿ, ಜಿಲ್ಲಾ ಕಾರ್ಯದರ್ಶಿ, ಮಾಂತೇಶ್ ಕಾಳಿ, ವಿರುಪಾಕ್ಷಪ್ಪ ಮುರುಡೂರ, ಮೈಲಾರಪ್ಪ ಹಿರೇಕಣಗಿ, ರೇಣುಕಾ ಗಡಿಯಣ್ಣನವರ, ಮಂಗಳ ಗಾಣಿಗೇರ, ಮಂಜುಳಾ ತಳವಾರ, ಗೀತಾ ಜಿಂಗಿ, ಆಶಾ ಜೋಶಿ, ಶಿವಾನಂದ ಪೂಜಾರ, ಬಸವರಾಜ್ ಕೊಂಚಿಗೇರಿ ಮಂಜುನಾಥ ಇಂಗಳಗಿ, ಮಂಜುನಾಥ ಬಸಳ್ಳಿ, ನಿಂಗನಗೌಡ ಇಂಗಳಗಿ, ಗಿರೀಶ್ ಮುಗಲಿ, ಶ್ರೀಮತಿ ಲಲಿತಾ ಬ್ಯಾಡಗಿ, ಶ್ರೀಮತಿ ಗೀತಾ ಹಳಕೊಪ್ಪ ಸೇರಿದಂತೆ ಅನೇಕರು ಜಿಲ್ಲಾ ಸಮಿತಿಗೆ ಪದಾಧಿಕಾರಿಗಳಾಗಿ ನೇಮಕಗೊಂಡರು.

