• Home  
  • ಅ. 16: ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ, ಹುಲಿವೇಷ (Oct 16: ‘Pili Pejje 5.0’ *Oodu Pooje* (Inaugural Ritual) by Team Maruti.)
- social work

ಅ. 16: ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ, ಹುಲಿವೇಷ (Oct 16: ‘Pili Pejje 5.0’ *Oodu Pooje* (Inaugural Ritual) by Team Maruti.)

Share: ಅ. 16 : ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ, ಹುಲಿವೇಷ – ಆಧಾರ ಕಳೆದುಕೊಂಡವರ ಬದುಕಿಗೆ ಆಸರೆಯಾಗುವ ಒಂದು ಸಣ್ಣ ಹೆಜ್ಜೆ  (Kaup) ಕಾಪು: ಅಕ್ಟೋಬರ್‌ 16 ರಂದು ಮೂಳೂರಿನ ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ ಮತ್ತು ಹುಲಿವೇಷ ನಡೆಯಲಿದೆ ಎಂದು ತಂಡದ ಧೀರೇಶ್‌ ಡಿಪಿಯವರು ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.   ಒಂಬತ್ತು ವರ್ಷಗಳ ಹಿಂದೆ, ಪುಟ್ಟ ಪುಟ್ಟ ಮಕ್ಕಳು […]

(Kaup) ಕಾಪು: ಅಕ್ಟೋಬರ್‌ 16 ರಂದು ಮೂಳೂರಿನ ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ ಮತ್ತು ಹುಲಿವೇಷ ನಡೆಯಲಿದೆ ಎಂದು ತಂಡದ ಧೀರೇಶ್‌ ಡಿಪಿಯವರು ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  ಒಂಬತ್ತು ವರ್ಷಗಳ ಹಿಂದೆ, ಪುಟ್ಟ ಪುಟ್ಟ ಮಕ್ಕಳು ಮೈತುಂಬಾ ವಾಟರ್‌ಕಲರ್ ಬಣ್ಣ ಹಚ್ಚಿಕೊಂಡು, ಹುಲಿವೇಷ ಧರಿಸಿ, ಕೈಯಲ್ಲಿ ಯಾವುದೇ ದೊಡ್ಡ ಶಕ್ತಿಯಿಲ್ಲದಿದ್ದರೂ ಹೃದಯದಲ್ಲಿ ದೊಡ್ಡ ಕನಸೊಂದನ್ನು ಹುಲಿವೇಷ ಧರಿಸಿ ಮನೆಮನೆಗೆ ತೆರಳುತ್ತಿದ್ದರು.

 ಆ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆ ಬೇಕಿತ್ತು. ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಅವಕಾಶ ಬೇಕಿತ್ತು.

 ಈ ಮಕ್ಕಳಿಗೆ ಸೂಕ್ತ ವೇದಿಕೆಯನ್ನು ನಿರ್ಮಿಸಿದ ಟೀಂ ಮಾರುತಿ ತಂಡವು ಸ್ಥಳೀಯ ಯುವಕರನ್ನು ಒಗ್ಗೂಡಿಸಿ, ತರಬೇತಿ ನೀಡಿ, ಸುಸಂಘಟಿತ ಹುಲಿವೇಷ ತಂಡವನ್ನಾಗಿ ರೂಪಿಸುವ ಉದ್ದೇಶದೊಂದಿಗೆ ಈ ಪಯಣ ಆರಂಭವಾಯಿತು.

  ಕೇವಲ ಕಲೆಗೆ ಅವಕಾಶ ಕಲ್ಪಿಸುವುದಷ್ಟೇ ಅಲ್ಲದೆ, ಈ ಮಕ್ಕಳು ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ, ಸಾಮಾಜಿಕ ಕಳಕಳಿಯುಳ್ಳ ಸಜ್ಜನ ವ್ಯಕ್ತಿಗಳಾಗಿ ಬೆಳೆಯಬೇಕು ಎಂಬ ದೂರದೃಷ್ಟಿಯೊಂದಿಗೆ ಸಮಾಜದ ಸಜ್ಜನರು ಇವರ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿದರು.

  ಇಂದು ಆ ಪುಟ್ಟ ಕನಸು ಹೆಮ್ಮೆಯ ಸಮಾಜಮುಖಿ ಪಯಣವಾಗಿ ಬೆಳೆದಿದೆ. ಅದುವೇ ಟೀಮ್ ಮಾರುತಿ ಮೂಳೂರು.

ವಿದ್ಯಾರ್ಥಿ ಆಸರೆ – ಪುಟ್ಟ ಮನಸ್ಸಿನ ದೊಡ್ಡ ಕನಸು

 ತಂದೆಯನ್ನು ಕಳೆದುಕೊಂಡು ತಾಯಿ ಅಥವಾ ಪೋಷಕರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಈ ಪುಟ್ಟ ಮನಸ್ಸುಗಳ ದೊಡ್ಡ ಕನಸು ಇಂದು “ವಿದ್ಯಾರ್ಥಿ ಆಸರೆ”ಎಂಬ ಅರ್ಥಪೂರ್ಣ ಯೋಜನೆಯಾಗಿ ಬೆಳೆದಿದೆ.

ಸಾರ್ವಜನಿಕರ ಸಹಕಾರ ಮತ್ತು ಉದಾರ ಮನಸ್ಸಿನ ನೆರವಿನಿಂದ ಇದುವರೆಗೆ ಟೀಂ ಮಾರುತಿ ಸಂಸ್ಥೆಯಿಂದ ಸುಮಾರು 112 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ನೀಡಲು ಸಾಧ್ಯವಾಗಿದೆ.

  ವರ್ಷದಿಂದ ವರ್ಷಕ್ಕೆ ನಮ್ಮ ತಂಡದ ಮೇಲೆ ಜನರು ತೋರಿಸುತ್ತಿರುವ ಪ್ರೀತಿ ಮತ್ತು ಪ್ರೋತ್ಸಾಹ ಹೆಚ್ಚಾಗುತ್ತಿದ್ದು, ಅದರೊಂದಿಗೆ ಸಮಾಜದ ಬಗೆಗಿನ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ.

  ಈ ವರ್ಷವೂ ನಮ್ಮ ಐದನೇ ವರ್ಷದ ಕಲಾ ಪರಂಪರೆ ಹಾಗೂ ಸಮಾಜಸೇವಾ ಕಾರ್ಯಕ್ರಮವಾದ “ಪಿಲಿ ಪೆಜ್ಜೆ 5.0”ರ ಅಂಗವಾಗಿ, ಸುಮಾರು 92 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಂಕಲ್ಪದೊಂದಿಗೆ  ಮುನ್ನಡೆಯುತ್ತಿದ್ದೇವೆ.

 ಜನರ ಸಹಕಾರದ ಫಲವಾಗಿ ಈಗಾಗಲೇ ಒಟ್ಟು ₹6,79,000 ಮೌಲ್ಯದ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಮಗೆ ಸಾಧ್ಯವಾಗಿದೆ.

 ಸ್ಥಳೀಯ ಯುವಕರಿಗೆ ಹುಲಿವೇಷ ತರಬೇತಿ ನೀಡುವುದು ಹಾಗೂ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದು. ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಹಕರಿಸುವುದು. ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು. ವೃದ್ಧರು, ಅಶಕ್ತರು ಹಾಗೂ ಒಂಟಿ ಮಹಿಳೆಯರಿಗೆ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸುವುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡುವುದು. ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸುವುದು.

 ನಮ್ಮ ಈ ಸೇವಾ ಪಯಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನಿಮ್ಮೆಲ್ಲರ ಸಹಕಾರವನ್ನು ಟೀಂ ಮಾರುತಿ ಸಂಸ್ಥೆ ಯಾಚಿಸುತ್ತಿದೆ ಎಂದು ಧೀರೇಶ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಧೀರೇಶ್‌ ಡಿಪಿ, ಪ್ರಹಾರ್‌, ಗಗನ್‌ ಮೆಂಡನ್‌, ಆಕಾಶ್‌ ಪೂಜಾರಿ, ವಿಕಾಸ್‌ ಪೂಜಾರಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.