• Home  
  • ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ (Srikshetra Bandakallu: Sharannavaratri cultural festival begins)
- ಧಾರ್ಮಿಕ

ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ (Srikshetra Bandakallu: Sharannavaratri cultural festival begins)

Share: ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ  “ಶರನ್ನವರಾತ್ರಿ ಗೌರವ” ಸ್ವೀಕರಿಸಿದ -ಪದ್ಮನಾಭ ನಾಯಕ್  (Shirva) ಶಿರ್ವ: ಅಸುರ ಶಕ್ತಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ದೇವತೆಗಳು, ತ್ರಿಮೂರ್ತಿಗಳು ಸೇರಿದಂತೆ ಶ್ರೀದೇವಿಯಲ್ಲಿ ಪ್ರಾರ್ಥಿಸಿದಾಗ ಅಭಯ ನೀಡಿದ ದುರ್ಗೆ, ಉಗ್ರರೂಪ ತಾಳಿ ಸಮಸ್ತ ರಾಕ್ಷಸ ಸಂತಾನವನ್ನೇ ಸರ್ವ ನಾಶ ಮಾಡಿದ  ನಂತರವೂ  ಉಗ್ರ ರೂಪದಲ್ಲಿದ್ದ ದೇವಿಯ ಕೋಪ  ಕಡಿಮೆಯಾಗಲಿಲ್ಲ.  ದೇವಾದಿದೇವತೆಗಳು ಎಷ್ಟು ಪ್ರಾರ್ಥಿಸಿದರೂ ಶಾಂತವಾಗದಿದ್ದ ಸಂದರ್ಭದಲ್ಲಿ ವಿಘ್ನ ನಿವಾರಕ ಗಣಪತಿಯ ಮೊರೆಹೋದಾಗ ನಾಟ್ಯದಲ್ಲಿ ಪ್ರವೀಣರಾದ ಯಕ್ಷರು ಮತ್ತು ಗಾನದಲ್ಲಿ ಪ್ರವೀಣರಾದ ಗಂದರ್ವರನ್ನು […]

 (Shirva) ಶಿರ್ವ: ಅಸುರ ಶಕ್ತಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ದೇವತೆಗಳು, ತ್ರಿಮೂರ್ತಿಗಳು ಸೇರಿದಂತೆ ಶ್ರೀದೇವಿಯಲ್ಲಿ ಪ್ರಾರ್ಥಿಸಿದಾಗ ಅಭಯ ನೀಡಿದ ದುರ್ಗೆ, ಉಗ್ರರೂಪ ತಾಳಿ ಸಮಸ್ತ ರಾಕ್ಷಸ ಸಂತಾನವನ್ನೇ ಸರ್ವ ನಾಶ ಮಾಡಿದ  ನಂತರವೂ  ಉಗ್ರ ರೂಪದಲ್ಲಿದ್ದ ದೇವಿಯ ಕೋಪ  ಕಡಿಮೆಯಾಗಲಿಲ್ಲ.  ದೇವಾದಿದೇವತೆಗಳು ಎಷ್ಟು ಪ್ರಾರ್ಥಿಸಿದರೂ ಶಾಂತವಾಗದಿದ್ದ ಸಂದರ್ಭದಲ್ಲಿ ವಿಘ್ನ ನಿವಾರಕ ಗಣಪತಿಯ ಮೊರೆಹೋದಾಗ ನಾಟ್ಯದಲ್ಲಿ ಪ್ರವೀಣರಾದ ಯಕ್ಷರು ಮತ್ತು ಗಾನದಲ್ಲಿ ಪ್ರವೀಣರಾದ ಗಂದರ್ವರನ್ನು ಕರೆಸಿ ನಾಟ್ಯಗಾಯನ ಮಾಡಿದರೆ ದೇವಿ ಶಾಂತವಾಗುತ್ತಾಳೆ ಎಂದು ಸಲಹೆ ನೀಡುತ್ತಾನೆ.  ದೇವತೆಗಳು,  ಯಕ್ಷರು ಮತ್ತು ಗಂಧರ್ವರನ್ನು ಕರೆಸಿ  ನಾಟ್ಯಗಾಯನ ಮಾಡಿಸಿದಾಗ ದೇವಿಯ ಕೋಪ ನಿಧಾನವಾಗಿ ಕಡಿಮೆಯಾಗಿ ಶಾಂತರೂಪ ತಾಳುತ್ತಾಳೆ. ದೇವಿಯು ಶಾಂತರೂಪಕ್ಕೆ ಬರಲು ಕಾರಣವಾದ ಈ ಕಲೆಗೆ ಮುಂದೆ  “ಯಕ್ಷಗಾನ” ಎಂಬ ಹೆಸರಾಯಿತು  ಎಂದು ನಿವೃತ್ತ ಶಿಕ್ಷಕರು, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದರಾದ ಪದ್ಮನಾಭ ನಾಯಕ್ ಮೂಡುಬೆಳ್ಳೆ ನುಡಿದರು.

  ಅವರು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ  ಶರನ್ನವರಾತ್ರಿ ಮಹೋತ್ಸವದ ಹತ್ತುದಿನಗಳ  ಸಾಂಸ್ಕೃತಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನೀಡಿದ  “ಶರನ್ನವರಾತ್ರಿ ಗೌರವ” ಸ್ವೀಕರಿಸಿ ಮಾತನಾಡಿದರು.

  ಶ್ರೀಕ್ಷೇತ್ರ  ಕಟ್ಟಿಗೇರಿ ಬ್ರಹ್ಮಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.

   ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರಾದ ಗಂಪದಬೈಲು ಜಯರಾಮ ಪ್ರಭು ವಹಿಸಿ ಶುಭ ಹಾರೈಸಿದರು.

  ಮುಖ್ಯ ಅತಿಥಿಗಳಾಗಿ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರು, ಸಾಮಾಜಿಕ ಸಂಘಟಕರೂ ಆದ ಮಾಧವ ಕಾಮತ್ ಭಾಗವಹಿಸಿ ಶುಭ ಹಾರೈಸಿದರು.

   ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ವನಿತಾ ದೇವೇಂದ್ರ ನಾಯಕ್, ಬಂಟಕಲ್ಲು ಶ್ರೀದುರ್ಗಾ ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು,  ಉಷಾ ಪಿ. ಮರಾಠೆ, ವಿಶ್ವನಾಥ್ ಬಾಂದೇಲ್ಕರ್ ಉಪಸ್ಥಿತರಿದ್ದರು.

   ಕ್ಷೇತ್ರದಲ್ಲಿ  ಹಲವು ವರ್ಷಗಳಿಂದ ಶರನ್ನವರಾತ್ರಿ ಪ್ರಥಮ ದಿನದ  ಸೇವಾದಾರರರಾದ ಬಿ. ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸನ್ಮಾನಿತರನ್ನು ಪರಿಚಯಿಸಿದರು.

   ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಶ್ರೀರಾಮ್ ಪಿ. ಮರಾಠೆ ಪ್ರಾರ್ಥಿಸಿದರು. ರಾಜಾಪುರ ಸಾರಸ್ವತ ಸೇವಾವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

   ನಂತರ ಉಡುಪಿ ಸುಬ್ರಹ್ಮಣ್ಯ ನಗರದ “ಕಲ್ಯಾಣಿ ಕಲಾ ಕೇಂದ್ರ” ದ ಸಂಸ್ಥಾಪಕರಾದ ನಿರಂಜನ್ ಭಟ್ ನೇತೃತ್ವದಲ್ಲಿ ಕುಮಾರಿ ಆದ್ಯತಾ ಭಟ್ ನಿರ್ದೇಶನದಲ್ಲಿ “ಶ್ರೀರಾಮ ದರ್ಶನ” ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.