• Home  
  • ಕಾಪು: ಸ್ಫೂರ್ತಿ ನೀಡಿದ ಸಿ. ಐ. ಓ. ವಿಜ್ಞಾನ ಪರೀಕ್ಷೆ (Kapu: Inspiring CIO Science Exam)
- ವ್ಯವಹಾರ - ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಕಾಪು: ಸ್ಫೂರ್ತಿ ನೀಡಿದ ಸಿ. ಐ. ಓ. ವಿಜ್ಞಾನ ಪರೀಕ್ಷೆ (Kapu: Inspiring CIO Science Exam)

Share: ಕಾಪು: ಸ್ಫೂರ್ತಿ ನೀಡಿದ ಸಿ. ಐ. ಓ. ವಿಜ್ಞಾನ ಪರೀಕ್ಷೆ ಕಾಪು ಜೇಸಿ ಭವನದಲ್ಲಿ ನಡೆದ ಪರೀಕ್ಷೆ (Kaup) ಕಾಪು  : ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿದ್ದ  ಸಿ. ಐ. ಓ.  ಸೈನ್ಸ್ ಒಲಿಂಪಿಯಾಡ್  ಪರೀಕ್ಷೆಯ  ಅಂಗವಾಗಿ ಕಾಪು ವಲಯದ ಪರೀಕ್ಷೆ ಕಾಪು ಜೇಸಿ ಭವನದಲ್ಲಿ ನಡೆದಿದ್ದು, ಇದರಲ್ಲಿ ವಿವಿಧ ಪ್ರಾಥಮಿಕ ಹಾಗೂ ಹೈಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದರು.   ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಅಭಿಪ್ರಾಯದಂತೆ, ಸಿ. ಐ. ಓ.  ವತಿಯಿಂದ ನಡೆದ ಈ ಪರೀಕ್ಷೆಯು ನಮಗೆ ಸ್ಫೂರ್ತಿಯನ್ನು […]

(Kaup) ಕಾಪು  : ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿದ್ದ  ಸಿ. ಐ. ಓ.  ಸೈನ್ಸ್ ಒಲಿಂಪಿಯಾಡ್  ಪರೀಕ್ಷೆಯ  ಅಂಗವಾಗಿ ಕಾಪು ವಲಯದ ಪರೀಕ್ಷೆ ಕಾಪು ಜೇಸಿ ಭವನದಲ್ಲಿ ನಡೆದಿದ್ದು, ಇದರಲ್ಲಿ ವಿವಿಧ ಪ್ರಾಥಮಿಕ ಹಾಗೂ ಹೈಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿದರು.

  ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಅಭಿಪ್ರಾಯದಂತೆ, ಸಿ. ಐ. ಓ.  ವತಿಯಿಂದ ನಡೆದ ಈ ಪರೀಕ್ಷೆಯು ನಮಗೆ ಸ್ಫೂರ್ತಿಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಪರೀಕ್ಷೆಯಲ್ಲಿ ಭಾಗವಹಿಸಲು ಆತ್ಮ ಸ್ಟೈರ್ಯವನ್ನು ಉಂಟು ಮಾಡಿದೆ ಎಂದರು.

  ಪ್ರಾರಂಭದಲ್ಲಿ ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿಯವರು  ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿ, ಪರೀಕ್ಷೆ ಬರೆಯುವ ಸುಲಭೋಪಾಯದ  ಗುರುತುಗಳನ್ನು ವಿವರಿಸಿದರು.

  ಸಂಘಟನೆಯ ಸಂಚಾಲಕಿ ಶೇಹೆನಾಜ್ ರವರು ಪರೀಕ್ಷೆಯ ಮೇಲ್ವಿಚಾರಕರಾಗಿದ್ದು ಪರೀಕ್ಷೆ ಸಾಂಗವಾಗಿ ನಡೆಯುವಂತೆ ನೋಡಿಕೊಂಡರು.  

  ಪರೀಕ್ಷಾ ಕೊಠಡಿಯಲ್ಲಿ ಅಂಜುಮ್ ಅಲಿ, ಬೀಬಿ ಬತುಲ್, ಫಝಿಲತ್ ಬಾನು, ಮನ್ಸೂರ್ ಅಹಮದ್ ಉಪಸ್ಥಿತರಿದ್ದರು.

  ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯ ವಿತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.