ಉಚ್ಚಿಲ: ಟೆಂಪೋ–ಬೈಕಿನ ನಡುವೆ ಅಪಘಾತ, ಬೈಕ್ ಸವಾರ ಗಂಭೀರ
ಉಚ್ಚಿಲ ಟೆಂಪೋ ನಿಲ್ದಾಣದ ಮುಂಭಾಗ ಸಂಭವಿಸಿದ ಘಟನೆ
(Uchila) ಉಚ್ಚಿಲ : ಮಂಗಳೂರಿನಿಂದ ಕಾಪು ಕಡೆಗೆ ಚಲಿಸುತ್ತಿದ್ದ ಬೈಕಿಗೆ ಪಿಕಪ್ ಟೆಂಪೊವೊಂದು ಢಿಕ್ಕಿ ಹೊಡೆದ ಘಟನೆ ರಾಷ್ಟೀಯ ಹೆದ್ದಾರಿ 66 ರ ಉಚ್ಚಿಲ ಟೆಂಪೋ ನಿಲ್ದಾಣದ ಮುಂಭಾಗ ಭಾನುವಾರ ಸಂಜೆ ಸಂಭವಿಸಿದೆ.
ದ್ವಿಚಕ್ರ ಸವಾರ ತೀವ್ರ ಗಾಯಗೊಂಡಿದ್ದು, ಅವರನ್ನು ದ್ದಾರೆ. ಕಾಪುವಿನ ಸದಾನಂದ ಎಂದು ಗುರುತಿಸಲಾಗಿದೆ.
ಈ ಸಂದರ್ಭದಲ್ಲಿ ತುರ್ತು ಸ್ಪಂಧಿಸಿದ ಸಮಾಜ ಸೇವಕ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗೂ ಹಮೀದ್ ರವರಯ ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಎಸ್ಡಿಪಿಐ ಆ್ಯಂಬುಲೆನ್ಸ್ ನಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

