ನಂದಿ ಕೂರು ಮುದರಂಗಡಿ ಕ್ರಾಸ್ ಬಳಿ ಬಸ್ಸ್ ಬೈಕ್ ಭೀಕರ ಅಪಘಾತ: ಬೈಕ್ ಸವಾರ ಗಂಭೀರ
ಉಡುಪಿ: ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಬೀಕರ ಅಪಘಾತ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಅಡ್ವೆ ಕಡೆಯಿಂದ ಮುದರಂಗಡಿ ಕಡೆ ಚಲಿಸುತ್ತಿದ್ದ ಬೈಕ್ ಹಾಗೂ ಪಡುಬಿದ್ರಿಯಿಂದ ಕಾರ್ಕಳದ ಕಡೆ ಸಾಗುತ್ತಿದ್ದ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ.
ಬೈಕ್ ಸವಾರ ಅಡ್ವೆ ಕಡೆಯಿಂದ ಬರುತ್ತಿದ್ದು ಏಕಾಏಕಿ ನಂದಿಕೂರು ಜಂಕ್ಷನ್ ನಲ್ಲಿ ಮುದರಂಗಡಿ ಕಡೆ ಬೈಕನ್ನು ತಿರುಗಿಸಿದ ಪರಿಣಾಮ ಎದುರುಗಡೆ ಪಡುಬಿದ್ರಿ ಕಡೆಯಿಂದ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ .
ಬೈಕ್ ಹಾಗೂ ಬೈಕ್ ಸವಾರ ಬಸ್ಸಿನ ಅಡಿಭಾಗಕ್ಕೆ ಹೋಗಿ ಸಿಲುಕಿಕೊಂಡಿದ್ದು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್ ಸವಾರ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿ ಲಭಿಸಿಲ್ಲ.
