ಉಚ್ಚಿಲ ದಸರಾ ೨೦೨೩ ಮನೋಹರ ಎಸ್ ಕುಂದರ್ (Manohar s kundar) ರವರಿಂದ ಛಾಯಾಚಿತ್ರ ಪ್ರದರ್ಶನ
(Udupi\ Uchila)(Uchila dasara 2023) ದಸರಾ ಪ್ರಯುಕ್ತ ಹಿರಿಯ ಛಾಯಾಗ್ರಾಹಕ ಮನೋಹರ್ ಎಸ್ ಕುಂದರ್‌ರವರು ತನ್ನ 40 ವರ್ಷಗಳ ಅಧ್ಯಯನ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಹಿರಿಯ ಛಾಯಾಗ್ರಹಕ ಮನೋಹರ್‌ರವರು ತನ್ನ ಛಾಯಾಚಿತ್ರ ಸಂಶೋಧನೆಯ ೪೦ ಸಂವತ್ಸರಗಳಿಂದ ಸಂಗ್ರಹಿಸಿದ ಅತ್ಯಪೂರ್ವ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಯುವಕರಿಗೆ, ಕಲಾ ಆಸಕ್ತಿ ಇರುವವರಿಗೆ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ಮನೋಹರ್ ಕುಂದರ್, ಎಲ್ಲವನ್ನೂ ನಮ್ಮೆದುರು ಬಿಚ್ಚಿಡುತ್ತಾರೆ.
ಒಂದು ಛಾಯಾಚಿತ್ರ ತೆಗೆಯಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದನ್ನು ಕಟ್ಟಿಕೊಡುತ್ತಾರೆ.
40 ಲಕ್ಷಕ್ಕೂ ಅಧಿಕ ಛಾಯಾಚಿತ್ರವನ್ನು ಸಂಗ್ರಹಿಸಿ ಇಡುವುದು ಸುಲಭದ ಮಾತೇನಲ್ಲ, ಛಾಯಾಗ್ರಾಹಕರಾಗಿ, ತಾಳಮದ್ದಲೆ ಕಲಾವಿದರಾಗಿ ಕಲೆಯ ಒಳಹರವನ್ನು ಬಲ್ಲವರು ಮನೋಹರ್.
e MEDIA ಕನ್ನಡ ಸಂಸ್ಥೆಗೆ ಮನೋಹರ್ ಕುಂದರ್ (Manohar s. kunder) ಸಂಪೂರ್ಣ ಮಾಹಿತಿ ನೀಡಿದ್ದಾರೆ. ತಮ್ಮ ಜೀವನ ಛಾಯಾಚಿತ್ರದಂತೆ ಸುಂದರವಾಗಲಿ ಮನು ಅಣ್ಣಾ.
