Tag: adamaru eshapriya theertha swamiji

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ, ಯೋಧ ನಮನ ಕಾರ್ಯಕ್ರಮ (Kargil Vijayothsava, Warrior tribute Program at Adamaru PPC Educational Institute)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ, ಯೋಧ ನಮನ ಕಾರ್ಯಕ್ರಮ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಇಂದು 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧ ನಮನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾಗವಹಿಸಿದ್ದ ಅದಮಾರು ಪೂರ್ಣಪ್ರಜ್ಞಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಆಗಿರುವ ಪ್ರಸ್ತುತ ಮಣಿಪಾಲ ಕೆಎಂಸಿಯಲ್ಲಿ ಉದ್ಯೋಗ ಮಾಡುತ್ತಿರುವ  ಮಾಜಿ ಸೈನಿಕ  ಅನಂತರಾಮ್ ರಾವ್ ಅವರು ಮುಖ್ಯ ಅತಿಥಿಯಾಗಿ ಯೋಧ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ […]

ಶಾಲಾ ಕಾಲೇಜು

ಅದಮಾರು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ (Leagal awareness program in Admaru PPC Education Institute)

ಅದಮಾರು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಉಡುಪಿಯ ವಕೀಲೆಯಾದ ಕುಮಾರಿ ಅಕ್ಷತಾ ಕುಲಾಲ್‌ರವರು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಅಕ್ಷತಾರವರು ಮಾತನಾಡಿ, ವಿದ್ಯಾರ್ಥಿಗಳ ರಕ್ಷಣೆಗೆ ಪ್ರಬಲವಾದ ಪೋಕ್ಸೋ ಕಾನೂನು ಇದೆ. ವಿದ್ಯಾರ್ಥಿಗಳು  ಲೈಂಗಿಕ ದೌರ್ಜನ್ಯ, ಬಲಾತ್ಕಾರ ಇತ್ಯಾದಿ  ತೊಂದರೆಗೊಳಗಾದರೆ ಆಗ ಅದನ್ನು ತಮ್ಮ ಹೆತ್ತವರಿಗೋ, ತಮ್ಮ ಅಧ್ಯಾಪಕರಿಗೊ ಅಥವಾ ವಕೀಲರಿಗೋ ತಿಳಿಸಬೇಕು, ಸುಮ್ಮನೆ ಮುಚ್ಚಿಡಬಾರದು. […]

ಶಾಲಾ ಕಾಲೇಜು

ಅದಮಾರು ಪಿಪಿಸಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ (Adamaru PPC Education Trust, Founders Day)

ಅದಮಾರು ಪಿಪಿಸಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ  ದತ್ತಿ ಉಪನ್ಯಾಸ ಹಾಗೂ ವಿದ್ಯಾರ್ಥಿ ಮಂಡಳಿ ಉದ್ಘಾಟನೆ  (Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ವಿಬುಧೇಶ ತೀರ್ಥ ಶ್ರೀಪಾದರ ಸಂಸ್ಮರಣೆ ಸಂಸ್ಥೆಯಲ್ಲಿ ನೆರವೇರಿತು. ಇದೇ ಸಂದರ್ಭ ಎರ್ಮಾಳು ಬೀಡು ಅಶೋಕ್ ರಾಜ್ ರವರು ತನ್ನ ತಾಯಿಯ ಸ್ಮರಣಾರ್ಥ ಸ್ಥಾಪಿಸಿದ ದತ್ತಿ ಉಪನ್ಯಾಸ, ಇಸ್ರೋದ ನಿವೃತ್ತ ವಿಜ್ಞಾನಿ ಶ್ರೀಶ ಉಡುಪರು ತಮ್ಮ ತಂದೆಯ ಹೆಸರಲ್ಲಿ ನೀಡುವ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಮಂಡಳಿ ಉದ್ಘಾಟನಾ […]

ಶಾಲಾ ಕಾಲೇಜು

ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಸ್ಥಾಪಕರ ಸಂಸ್ಮರಣೆ, ಗುರುವಂದನೆ (Guruvandane at padubidri Ganapathi School)

ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಸ್ಥಾಪಕರ ಸಂಸ್ಮರಣೆ, ಗುರುವಂದನೆ.  (Padubidri) ಪಡುಬಿದ್ರಿ:  ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಂಸ್ಮರಣೆ ಮತ್ತು ಗುರುವಂದನ ಕಾರ್ಯಕ್ರಮವನ್ನು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು. ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ನಾರಾಯಣ ಹೆಬ್ಬಾರರು ಮುಖ್ಯ ಅಭ್ಯಾಗತರಾಗಿ ಆಗಮಿಸಿ “ಶಿಕ್ಷಣ ಕ್ಷೇತ್ರಕ್ಕೆ ವಿಬುಧೇಶತೀರ್ಥರ ಕೊಡುಗೆ ಅನನ್ಯವಾದುದು. ಶಿಸ್ತುಬದ್ಧವಾದ, ದೇಶಪ್ರೇಮವನ್ನು ಬೆಳೆಸುವ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯವೆಂದು ಅವರು ಭಾವಿಸಿದ್ದರು” ಎಂದು […]

ಜೀವನಶೈಲಿ

ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ (International Yoga Day At Adamaru PPC Educational institution)

ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ಪಡುಬಿದ್ರಿ:  ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎನ್ ಎಸ್ ಎಸ್ ಆಶ್ರಯದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಯೋಗಾಸನಗಳ ಪ್ರಾತ್ಯಕ್ಷಿಕೆಯ ಮೂಲಕ ನೆರವೇರಿಸಲಾಯಿತು.  ಯೋಗ ಗುರುಗಳಾದ ಉಡುಪಿ ಜಿಲ್ಲಾ ಪತಂಜಲ ಯೋಗ ಸಮಿತಿಯ ಕಾರ್ಯದರ್ಶಿ ರಂಜಿತ್ ಕೆ ಎಸ್ ರವರು  ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.  ಅವರು ಯೋಗದ ಮಹತ್ವವನ್ನು ತಿಳಿಸುತ್ತಾ,  ಯೋಗವೆಂದರೆ ಕರ್ಮದ ಕೌಶಲ. ಕೇವಲ ಯೋಗಾಸನಗಳು ಮಾತ್ರ ಯೋಗವಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, […]

health Uncategorised

ಉಡುಪಿ : ಖ್ಯಾತ ನರರೋಗ ತಜ್ಞ ಡಾ. ರಾಜಾ ಹೃದಯಾಘಾತದಿಂದ ನಿಧನ (Udupi: Renowned neurologist Dr Raja died of heart attack)

ಉಡುಪಿ : ಖ್ಯಾತ ನರರೋಗ ತಜ್ಞ ಡಾ. ರಾಜಾ ಹೃದಯಾಘಾತದಿಂದ ನಿಧನ ಉಡುಪಿ: ಪ್ರಸಿದ್ಧ ನರರೋಗ ತಜ್ಞ ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ ಡಾ. ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.  ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.  ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆ ಸಮಾಜಕ್ಕೆ ಹಾಗೂ […]

ಧಾರ್ಮಿಕ

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಅದಮಾರು ಉಭಯ ಶ್ರೀಗಳಿಂದ ಸಂಸ್ಥಾನ ಪೂಜೆ, ಆಶೀರ್ವಚನ (Padubidri Temple Samsthana Pooje)

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಅದಮಾರು ಉಭಯ ಶ್ರೀಗಳಿಂದ ಸಂಸ್ಥಾನ ಪೂಜೆ, ಆಶೀರ್ವಚನ  ಪಡುಬಿದ್ರಿ, ಮೇ 13: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಪ್ರಾಯಃಶ್ಚಿತ್ತ ಕಾರ್ಯಕ್ರಮದ ಅಂಗವಾಗಿ ರವಿವಾರದಂದು ಶ್ರೀ ದೇಗುಲಕ್ಕೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಗಮಿಸಿ ಪಟ್ಟದ ದೇವರಾದ ಶ್ರೀ ಕಾಳೀಯಮರ್ದನ ಶ್ರೀ ಕೃಷ್ಣ ಹಾಗೂ ಶ್ರೀ ವೇಣುಗೋಪಾಲ ಕೃಷ್ಣ ದೇವರ ಸಂಸ್ಥಾನ ಪೂಜೆ, ಕೀರ್ತಿಶೇಷ ಶ್ರೀ ವಿಬುಧೇಶ […]

eMedia Kannada  @2025. All Rights Reserved.