Tag: Karavali

ಮನೋರಂಜನೆ

ರಂಗಭೂಮಿ ಆನಂದೋತ್ಸವ 2023 ಕಾರ್ಯಕ್ರಮಕ್ಕೆ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಚಾಲನೆ

ರಂಗಭೂಮಿ ರಿ. ಉಡುಪಿ ಇದರ ವತಿಯಿಂದ ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಆಯೋಜಿಸಿದ್ದ  ರಂಗಭೂಮಿ ಆನಂದೋತ್ಸವ 2023 ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೆರವೇರಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಬ್ಯಾಂಕಿನ ನಿವೃತ್ತ ಎಂಡಿ ಶ್ರೀ ಮಹಾಬಲೇಶ್ವರ ಎಂ. ಎಸ್ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಫ್ಯಾಷನ್ ಶಾಲಾ ಕಾಲೇಜು

 ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಅಭಿಕ್ಯ ಕಾರ್ಯಕ್ರಮ

ವಿದ್ಯಾಗಿರಿ (ಮೂಡುಬಿದಿರೆ): ‘ಫ್ಯಾಷÀನ್ ಲೋಕದ ಸಾಧನಗೆ ಆಕಾಶವೇ ಮಿತಿ. ಇಲ್ಲಿ ಹಿಂಜರಿಕೆ ಇಲ್ಲದೇ ಹೆಜ್ಜೆ ಇಟ್ಟರೆ, ಯಶಸ್ಸು ಸಾಧ್ಯ’ ಎಂದು ವಸ್ತç ವಿನ್ಯಾಸಕಿ ಸ್ಥಿತಿ ಮಯ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗವು ಹಮ್ಮಿಕೊಂಡ ‘ಅಭಿಕ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫ್ಯಾಷನ್ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ  ಎಂದರು. ಉದ್ಯಮಿ ಉದಯ ಪೂಜಾರಿ ಮಾತನಾಡಿ, ಫ್ಯಾಷÀನ್ ಜಗತ್ತಿನಲ್ಲಿ ಮೂಲಜ್ಞಾನವು ಬಹಳ ಮುಖ್ಯ. ಇಲ್ಲಿ ಸೃಜನಶೀಲತೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲ, […]

ರಾಜಕೀಯ

ರಾಜ್ಯ ಗೃಹ ಮಂತ್ರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವರರಿಗೆ ಹೆಜಮಾಡಿಯ ಗಡಿಭಾಗದಲ್ಲಿ ಅದ್ದೂರಿ ಸ್ವಾಗತ

 ನೂತನ ಗೃಹ ಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಅಗಮಿಸಿದ ಡಾ.ಜಿ.ಪರಮೇಶ್ವರ್‌ರವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಗಡಿ ಭಾಗವಾದ ಹೆಜಮಾಡಿಯಲ್ಲಿ ಮಂಗಳವಾರ ಸಂಜೆ ೪ ಗಂಟೆಯ ಸುಮಾರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.  ಹೆಜಮಾಡಿ ಟೋಲ್‌ಗೇಟ್ ಬಳಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನವೀನ್‌ಚಂದ್ರ ಸುವರ್ಣ ಹಾಗೂ ಸಂತೋಷ್ […]

ಕರಾವಳಿ

  ಮುಂಗಾರು ವಿಳಂಬ ; ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಳ

  ಮಂಗಳೂರು:  ಜೂನ್ ಬಾರಿಯೂ 5 ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಿದೆ.  ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿದ್ದು ಜನರು ಕರಾವಳಿ ಭಾಗದಲ್ಲಿ ತತ್ತರಿಸುವಂತಾಗಿದೆ. 2019ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೂನ್ ಆರಂಭದಲ್ಲಿ ನಿಧಾನವಾಗಿ ಆಗಮಿಸಿತ್ತು.    ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ.4ರ ವೇಳೆಗೆ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಸ್ಥಿತಿ ಪ್ರಕಾರ, ಕೇರಳದಲ್ಲಿ ಮಳೆಯಾಗಲು  ಇನ್ನೂ 4-5 ದಿನ ಕಾಯಬೇಕಿದೆ. ಹೀಗಾಗಿ ರಾಜ್ಯ […]

ಕರಾವಳಿ ವ್ಯವಹಾರ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ ತೆಂಕ ಎರ್ಮಾಳು ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟಿರುವ ಅದಮಾರು ಮಠದ ಶ್ರೀ ವಿಬುದೇಶ ತೀರ್ಥ ಶ್ರೀಪಾದರ ಸಂಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ  ನಾಡೋಜ ಡಾ.ಜಿ.ಶಂಕರ್ ಉದ್ಘಾಠಿಸಿದರು. ಅವರು ಈ ಸಂದರ್ಭ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಧಿಕವಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲು ಸಾಧ್ಯವಿದೆ ಎಂದರು.   ಮುಖ್ಯ […]

ರಾಜಕೀಯ

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಜಾರಿಯಿಂದ ಬಿಜೆಪಿ ಆತಂಕದಲ್ಲಿದೆ – ವೆರೋನಿಕಾ ಕರ್ನೆಲಿಯೊ

 ಉಡುಪಿ: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಭರವಸೆಗಳನ್ನು ಜಾರಿಗೆಗೊಳಿಸಿದ ಬಳಿಕ ಸಂಪೂರ್ಣವಾಗಿ ಆತಂಕಗೊಂಡಿರುವ ಬಿಜೆಪಿ, ಪ್ರತಿಭಟನೆಯ ನೆಪದಲ್ಲಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಇವರ ಇಂತಹ ಬೇಜವಾಬ್ದಾರಿ ವರ್ತನೆಗೆ ಜನರೇ ದಂಗೆ ಏಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.  ತನ್ನ ಅಧಿಕಾರದ ಅವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ಕೇವಲ ಬಿಜೆಪಿ ಶಾಸಕರು ಮಂತ್ರಿಗಳು 40% ಕಮೀಷನ್ ಆಸೆಗೆ ಬಿದ್ದು ಜನರಿಂದ ತಿರಸ್ಕಾರವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ […]

ಅಪರಾಧ ಕರಾವಳಿ

ಕುಂದಾಪುರ: ಪಲ್ಟಿಯಾದ ಕಾರು -ಪ್ರಯಾಣಿಕರು ಪಾರು..!

ಕುಂದಾಪುರ: ಜಾಲಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸುರಿದ ಮೊದಲ ಮಳೆಯಲ್ಲಿ ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಆದರೆ ಕಾರಿನಲ್ಲಿದ್ದವರು ಪವಾಡ ಸದೃಶ ಪಾರಾಗಿದ್ದಾರೆ. ಸಿಗಂದೂರಿನಿಂದ ಬ್ರಹ್ಮಾವರಕ್ಕೆ ಪ್ರಯಾಣಿಸುತ್ತಿದ್ದ ಮಹಿಂದ್ರ ಕ್ವಾಂಟೋ ವಾಹನ ಜಾಲಾಡಿ ಎಂಬಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಇದೇ ಸಂದರ್ಭ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ರೆಡಿಗೋ ಕಾರಿಗೆ ಡಿಕ್ಕಿಯಾಗಿದೆ. ಆ ಕಾರು […]

Uncategorised ಕರಾವಳಿ

ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು  ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ ಕೆ ಭಾಗವಹಿಸಿದ್ದರು.    ಸಂಸ್ಥೆಯ ಪ್ರಾಂಶುಪಾಲರಾದ […]

ಕರಾವಳಿ ರಾಜಕೀಯ

ಕಾಪುವಿನಲ್ಲಿ ಬಿಜೆಪಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

 ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ   ಕಾಪು ಪೇಟೆಯಲಿ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರಕಾರದ ವಿರುಧ್ಧ ಪ್ರತಿಭಟನಾ ಸಭೆ ನಡೆಯಿತು.  ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಸರಕಾರ 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಹೆಚ್ಚು ಮಾತ್ರ ಉಚಿತ ಎಂದು ಹೇಳಿ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟ ರಾಗಿದ್ದಾರೆ.  ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ […]

ಕರಾವಳಿ ರಾಜಕೀಯ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರಿನ ತನಕ ವಿಸ್ತರಿಸಲು ಶಾಸಕ ಯಶಪಾಲ್ ಸುವರ್ಣ ಮನವಿ

ಉಡುಪಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಂಗಳೂರಿಗೆ ವಿಸ್ತರಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಅವರ ಮೂಲಕ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಮನವಿ ಸಲ್ಲಿಸಿದರು. ಶೀಘ್ರವೇ ಗೋವಾ – ಮುಂಬೈ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಗೊಳ್ಳಲಿದ್ದು ಇದನ್ನು ಮಂಗಳೂರಿನ ತನಕ ವಿಸ್ತರಿಸಿದ್ದಲ್ಲಿ ಈ ಉಡುಪಿ ಹಾಗೂ ಮಂಗಳೂರಿನ ಪ್ರಯಾಣಿಕರಿಗೆ ಇದರ ಪ್ರಯೋಜನ ಲಭಿಸಲಿದೆ. ಅಲ್ಲದೆ ಕಾರವಾರ ದಿಂದ ತಿರುಪತಿ […]

eMedia Kannada  @2025. All Rights Reserved.