Tag: padubidri

ಮನೋರಂಜನೆ

ಪಡುಬಿದ್ರಿಯಲ್ಲಿ ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್ ನ “ಪಿಸುಮಾತು”

 ಪಡುಬಿದ್ರಿಯಲ್ಲಿ ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್ ನ ಪಿಸುಮಾತು ಕನ್ನಡ ಮ್ಯೂಸಿಕ್ ವಿಡಿಯೋ ಅಲ್ಬಂ ಬಿಡುಗಡೆ ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಉಮೇಶ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ನಿರ್ಮಾಣದ ಪಿಸುಮಾತು ಕನ್ನಡ ಮ್ಯೂಸಿಕ್ ವಿಡಿಯೋದ ಬಿಡುಗಡೆಯು ಪಡುಬಿದ್ರಿಯ ಭಾರತ್‌ ಸಿನೇಮಾದಲ್ಲಿ ನಡೆಯಿತು.   ವಿನೂತನ ಕಥಾ ಹಂದರವನ್ನು ಹೊಂದಿರುವ ಮ್ಯೂಸಿಕ್ ವಿಡಿಯೋ ವನ್ನು  ಕಾಪು ವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭವಾನಿ ಶಂಕರ್ ಹೆಗ್ಡೆ, ಸಂಜಯ್ […]

ಕರಾವಳಿ

ಪಡುಬಿದ್ರಿಯಲ್ಲಿ ಉಚಿತ ನೇತ್ರ ತಪಾಸಣೆ , ದಂತ ಚಿಕಿತ್ಸೆ,  ವ್ಯೆದ್ಯಕೀಯ ತಪಾಸಣಾ ‌ಶಿಬಿರ”

ಪಡುಬಿದ್ರಿಯ ಆತ್ಮ ಶಕ್ತಿ ವಿವಿದ್ದೋದೇಶ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಪಡುಬಿದ್ರಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಡುಬಿದ್ರಿ ಬೋರ್ಡ್ ಶಾಲೆಯಲ್ಲಿ  “ಉಚಿತ ನೇತ್ರ ತಪಾಸಣೆ , ದಂತ ಚಿಕಿತ್ಸೆ ಮತ್ತು ಸಾಮಾನ್ಯ ವ್ಯೆದ್ಯಕೀಯ ತಪಾಸಣಾ ಶಿಬಿರ ಗುರುವಆರ ನೆರವೇರಿತು. ಶಿಬಿರವನ್ನು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ  ಅಧ್ಯಕ್ಷ   ವೈ ಸುಧೀರ್ ಕುಮಾರ್ ಉದ್ಘಾಠಿಸಿದರು. ಅವರು ಈ ಸಂದರ್ಭ ಮಾತನಾಡಿ, ಸಹಕಾರಿ ಸಂಸ್ಥೆಗಳು ಕೇವಲ  ಲಾಭದ ದೃಷ್ಟಿಯನ್ನುಹೊಂದದೆ ಜೊತೆಗೆ  ಜನರ ಅರೋಗ್ಯ ದೃಷ್ಟಿಯಿಂದ  ಉಚಿತವಾಗಿ ಸಾರ್ವಜನಿಕರಿಗೆ   ವ್ಯೆದಕೀಯ […]

ಕರಾವಳಿ

ಪಡುಬಿದ್ರಿ ಸಿ ಎ ಬ್ಯಾಂಕ್ ಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿಯೋಗ ಭೇಟಿ

 ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ನಿಯೋಗ ಮಂಗಳವಾರ ಸಂಜೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭೇಟಿ ನೀಡಿದರು. ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್ ಮಾತನಾಡಿ  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ತಂಡ ಬಂದಿದ್ದು ಇಲ್ಲಿಯ  ಕಾರ್ಯ ವೈಖರಿಯನ್ನು ಪರಿಶೀಲಿಸಿದ್ದಾರೆ. ಮಳವಳ್ಳಿಯಲ್ಲೂ ಇದೇ ರೀತಿ ಸಹಕಾರಿ ಸಂಘವನ್ನು ಸುಧಾರಣೆಗೊಳಿಸುವುದಾಗಿ […]

ಪ್ರಚಲಿತ

ಪಡುಬಿದ್ರಿ ಬಂಟರ ಭವನದಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ

ವಿಶ್ವಯೋಗ ದಿನಾಚರಣೆಯ ಅಂಗವಾಗಿ ಹಟ ಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಜೆ.ಸಿ.ಐ ಪಡುಬಿದ್ರಿ, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಇದರ  ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ ಬಂಟರ ಭವನದಲ್ಲಿ ಬುಧವಾರ ಬೆಳಿಗ್ಗೆ ವಿಶ್ವಯೋಗ ದಿನಾಚರಣೆಯನ್ನು ಉಡುಪಿ ಆಯುಷ್ ಫೆಡರೇಶನ್ ಅಧ್ಯಕ್ಷ      ಡಾ.ಎನ್.ಟಿ. ಅಂಚನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಯೋಗ ಅಮೂಲ್ಯವಾದ ಕೊಡುಗೆ. ಇದನ್ನು ಇಂದು ವಿಶ್ವದಾದ್ಯಂತ ಆಚರಿಸುತ್ತಾರೆ. ಇಂದಿನ […]

ಕರಾವಳಿ

ಪಡುಬಿದ್ರಿ ಯುವವಾಹಿನಿ ‌ಘಟಕದ ಕುಟುಂಬ ‌ಕಲರವ – 2023 ಸಂಪನ್ನ

ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ಕುಟುಂಬ ಕಲರವ – 2023   ಪಡುಬಿದ್ರಿ ಸುಜ್ಲಾನ್ ಕಾಲೋನಿಯ ಸಭಾಗೃಹದಲ್ಲಿ ಜರಗಿತು.  ಮುಖ್ಯ ಅತಿಥಿಯಾಗಿ ‌ಆಗಮಿಸಿದ ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ಸೌಮ್ಯ ನಿತೇಶ್ ಮಾತನಾಡಿ, ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗಲು ಕುಟುಂಬ ಕಲರವದಂತಹ ಕಾರ್ಯಗಳು ಅನಿವಾರ್ಯ. ಹಿರಿಯರ ಜೊತೆ ಕಿರಿಯರು ಸೇರಿದಾಗ ಸಂಸ್ಥೆಯ ಭವಿಷ್ಯಕ್ಕೆ ಅದು ಭದ್ರಬುನಾದಿ. ಯುವವಾಹಿನಿ ಪಡುಬಿದ್ರಿ ಘಟಕದಿಂದ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದರು.  ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು […]

ಕರಾವಳಿ

ಪಡುಬಿದ್ರಿಯಲ್ಲಿ ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್  ಪಿ.ಎ. ಮೊಹಿದ್ದೀನ್ ರವರಿಗೆ ಸನ್ಮಾನ

ಪಡುಬಿದ್ರಿ: ಗಡಿ ಭದ್ರತಾ ಪಡೆಯಲ್ಲಿ ಸುಮಾರು ೩೫ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಿವೃತ್ತ ಹೊಂದಿದ ಪಡುಬಿದ್ರಿ ಜಮಾಅತ್ ಸದಸ್ಯರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜಮಾಅತ್ ಸಮಿತಿಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಬಿಎಸ್‌ಎಫ್‌ನಲ್ಲಿ ೩೫ ವರ್ಷಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಇತ್ತೀಚೆಗೆ ನಿವೃತ್ತರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಜುಮ್ಮಾ ಮಸೀದಿ ಖತೀಬ್ ಎಸ್.ಎಮ್. ಅಬ್ದುಲ್ […]

ಕರಾವಳಿ ರಾಜಕೀಯ

ಪಡುಬಿದ್ರಿ ಬಂಟರ ಭವನದ ಬಳಿಯ ಸಮಸ್ಯೆ ಪರಿಶೀಲನೆಗೆ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

 ಪಡುಬಿದ್ರಿ ಬಂಟರ ಭವನದ ಬಳಿ ರಾಷ್ಟಿçÃಯ ಹೆದ್ದಾರಿ ೬೬ರ ಬದಿಯಲ್ಲಿ ನಿರ್ಮಾಣಗೊಂಡ ಅರೆಬರೆ ಡ್ರೆÊನೇಜ್ ಕಾಮಗಾರಿ ಮತ್ತು ಅಪಘಾತ ತಾಣವಾಗಿರುವ, ರಾಷ್ಟಿçÃಯ ಹೆದ್ದಾರಿ ೬೬ರ ಪಡುಬಿದ್ರಿ ಜಂಕ್ಷನ್ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಭೇಟಿ ನೀಡಿದರು. ಹೆಚ್ಚುತ್ತಿರುವ ಅಪಘಾತಗಳು, ವಾಹನ ಸವಾರರು, ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು  ಸಚಿವರ ಗಮನಕ್ಕೆ ತಂದಿದ್ದು, ಪರಿಹಾರವನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಹಾಗೂ ಜನತೆಗೆ ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ […]

eMedia Kannada  @2025. All Rights Reserved.