Tag: padubidri

ಕರಾವಳಿ

ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ

ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ   ಪಡುಬಿದ್ರಿ ಕಂಚಿನಡ್ಕದಲ್ಲಿ ಭಾನುವಾರ ಬೀಸಿದ ಬಾರೀ ಗಾಳಿ ಮಳೆಗೆ ಇಲ್ಲಿನ ನಿವಾಸಿ ಇಂದಿರಾ ಅವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದ್ದು, ಭಾನುವಾರ  ಇಲಾಖಾಧಿಕಾರಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದ್ದಾರೆ.   ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಶಾಸಕ ಗುರಮೆಯವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.  ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ […]

ಕರಾವಳಿ ವಿಡಿಯೋ

BREAKING NEWS……………… ಅಂತರಾಷ್ಟ್ರೀಯ ಮಾನ್ಯತೆ ಪಡೆದ  ಪಡುಬಿದ್ರಿಯ   ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲ್ಕೊರೆತದ  ಭೀತಿ: ಪ್ರವಾಸಿಗರಿಗೆ ನಿರ್ಬಧ  

ಅಂತರಾಷ್ಟ್ರೀಯ ಮಾನ್ಯತೆ ಪಡೆದ  ಪಡುಬಿದ್ರಿಯ   ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲ್ಕೊರೆತದ  ಭೀತಿ: ಪ್ರವಾಸಿಗರಿಗೆ ನಿರ್ಬಧ   ಪಡುಬಿದ್ರಿ : ಅಂತರಾಷ್ಟ್ರೀಯ ಮಾನ್ಯತೆ ಪಡೆದ  ಪಡುಬಿದ್ರಿಯ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್  ಕಡಲ್ಕೊರೆತದ  ಭೀತಿಯಲ್ಲಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.  ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ಎರಡು ದಿನಗಳಿಂದ ಕಡಲ್ಕೊರೆತ ಜಾಸ್ತಿ ಇರುವುದರಿಂದ ಪ್ರವಾಸಿಗರಿಗೆ ಸಮುದ್ರ ದಡಕ್ಕೆ ಹೋಗಲು ನಿಬಂ೯ಧ ವಿಧಿಸಿದ್ದೆವೆ.  ಒಳಗಿನ […]

Uncategorised

ಪಡುಬಿದ್ರಿ ಕಡಲತಡಿಯಲ್ಲಿ ಮತ್ತೆ ಮರುಕಳಿಸಿದ ಕಡಲ್ಕೊರೆತ.

 ಪಡುಬಿದ್ರಿಯಲ್ಲಿ ಮತ್ತೆ ಕಡಲ್ಕೊರೆತ ಪ್ರಾರಂಭಗೊಂಡಿದ್ದು, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ೧.೫ ಕೋಟಿ ವೆಚ್ಚದ ಬೀಚ್ ಅಭಿವೃದ್ಧಿ ಕಾಮಗಾರಿ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಇದೇ ರೀತಿ ಸಮುದ್ರ ಕೊರೆತ ಮುಂದುವರಿದಲ್ಲಿ ಬೀಚ್ ಅಭಿವೃದ್ಧಿಗೆ ಮಾಡಿದ ರಂಗವೇದಿಕೆ, ಅಳವಡಿಸಿದ ಇಂಟರ್ಲಾಕ್ ಟೈಲ್ಸ್ ಗಳು, ಇಲೆಕ್ಟ್ರಿಕ್ ಪೋಲ್ ಗಳು, ಅತ್ಯುತ್ತಮ ಶೌಚಾಲಯ , ವಾಚಿಂಗ್ ಟವರ್, ವಿಶ್ರಾಂತಿ ಕೊಠಡಿ, ಹಟ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಗಳು ಸಮುದ್ರ ಪಾಲಾಗುವ ಸಾಧ್ಯತೆ ಇದೆ.   ಮಾಜಿ ಸಚಿವ ವಿನಯ್ ಕುಮಾರ್ […]

ಕರಾವಳಿ

ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ

ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ  ಪಡುಬಿದ್ರಿ: ಜನನಿಬಿಡ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವ ಪಡುಬಿದ್ರಿ ಗ್ರಾಪಂ ವಿರುದ್ಧ ಅಬ್ಬೇಡಿ ಬಳಿಯ ಹಳೇ ಎನ್‌ಟಿಪಿಸಿ ಗೋದಾಮು ಸುತ್ತಲಿನ ನಿವಾಸಿಗಳು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ.   ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಗ್ರಾಪಂ ವ್ಯಾಪ್ತಿಯ ಹಳೇ ಎನ್‌ಟಿಪಿಸಿ ಗೋದಾಮು ಬಳಿಯ ೧೯ ಸೆಂಟ್ಸ್ ಜಾಗದಲ್ಲಿ ನಿರ್ಮಿಸಲು ಮುಂದಾಗಿತ್ತು. ಸುಜ್ಲಾನ್ ಪುನರ್ವಸತಿ ಪ್ರದೇಶ, ಅಬ್ಬೇಡಿ, ಅವರಾಲುಗಳ ಜನವಸತಿ […]

ಅಪರಾಧ

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವೆ: ತಹಶಿಲ್ದಾರ್ ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದ ಗೃಹಜ್ಯೋತಿ ಯೋಜನೆಯ ನೋಂದಾವಣಿಗೆ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ವಿರೋಧಿಸಿದ ಗ್ರಾ.ಪಂ. ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರ ಬಡವರಿಗಾಗಿ ನೀಡುವ  “ಗೃಹಜ್ಯೋತಿ” […]

ಕರಾವಳಿ

ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ ಪಡುಬಿದ್ರಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಶನಿವಾರ ಪಡುಬಿದ್ರೆಯ ಕಾಡಿ ಪಟ್ಣದ ಸಮುದ್ರ ಕೊರೆತ ಪ್ರದೇಶ ಕ್ಕೆ  ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿ ಪರಿಶೀಲಿಸಿದ ಬಳಿಕ ಮಾಧ್ಯಮ  ಪ್ರತಿನಿಧಿಗಳೊಂದಿಗೆ ಮಾತನಾಡಿದರು .   ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ ಕೊರೆತ  ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.  ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ  […]

ಕರಾವಳಿ

ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಮೀನುಗಾರಿಕಾ ಗೋದಾಮು, ಸಂಗ್ರಹಿಸಿಟ್ಟ ಸೀಮೆ ಎಣ್ಣೆ ಸಹಿತ ೫ ಲಕ್ಷದ ಸೊತ್ತು ನಷ್ಠ

ಕಳೆದ ೩ ದಿನಗಳಿಂದ ತೀವ್ರ ಸಮುದ್ರ ಕೊರೆತ ಉಂಟಾಗಿದ್ದ ಪಡುಬಿದ್ರಿ–ಕಾಡಿಪಟ್ಣ ಬೀಚ್ ಬಳಿ ಶುಕ್ರವಾರ ಸಮುದ್ರದ ಉಗ್ರ ಸ್ವರೂಪದ ಅಲೆಗಳು ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮನ್ನು ಅಪೋಶನಗೈದಿದೆ. ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮು ಒಳಗಡೆ ಸೀಮೆ ಎಣ್ಣೆ ಸಂಗ್ರಹದ ಕಾಂಕ್ರೀಟ್ ಟ್ಯಾಂಕ್ ಸಹಿತ ಸುಮಾರು ರೂ.೫ಲಕ್ಷದ ಸೊತ್ತುಗಳು ಸಮುದ್ರ ಪಾಲಾಗಿದೆ ಎಂದು ಸ್ಥಳೀಯ ಮೀನುಗಾರರು ಅವಲತ್ತುಕೊಂಡಿದ್ದಾರೆ.  ಕೊರೆತ ಸ್ಥಳದ ಪಕ್ಕದಲ್ಲೇ ಮೀನುಗಾರಿಕಾ ರಸ್ತೆ ಇದೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಮೀನುಗಾರಿಕಾ ರಸ್ತೆಯೂ ಸಮುದ್ರ ಪಾಲಾಗುವ ಭೀತಿ […]

ಕರಾವಳಿ

ಪಡುಬಿದ್ರಿ ಕಡಲ್ಕೊರೆತ ಪ್ರದೇಶಕ್ಕೆ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಭೇಟಿ: ತುರ್ತು ಕ್ರಮಕ್ಕೆ ಆಗ್ರಹ

ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗಿ, ಅಪಾಯದ ಅಂಚಿಗೆ ತಲುಪಿರುವ  ಕಾಡಿಪಟ್ನ –  ಪಡುಬಿದ್ರಿ ಬೀಚ್ ಗೆ ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ   ವಿನಯ್ ಕುಮಾರ್ ಸೊರಕೆ ಯವರು ಬುಧವಾರ ಮದ್ಯಾಹ್ನ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀವ್ರ ಕಡಲ್ಕೊರೆತ ಪ್ರದೇಶ ವೀಕ್ಷಿಸಿದ ಬಳಿಕ, ಸಂಬಂಧ ಪಟ್ಟ ಇಲಾಖೆಯ ಅಭಿಯಂತರ ರಿಗೆ ಕರೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.     ಈ ಸಂದರ್ಭ ಮಾಜಿ ಸಚಿವರೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, […]

ಕರಾವಳಿ

ಪಡುಬಿದ್ರಿಯಲ್ಲಿಮುಂದುವರಿದ ಕಡಲ್ಕೊರೆತ : ಮತ್ತೆ ೫ ತೆಂಗಿನ ಮರಗಳು ಸಮುದ್ರ ಪಾಲು

  ಮುಂದುವರಿದ ಭಾರೀ ಗಾಳಿ ಮಳೆಯಿಂದ ಪಡುಬಿದ್ರಿ-ಕಾಡಿಪಟ್ಣ ಬೀಚ್ ಬಳಿ ಕಡಲ್ಕೊರೆತ ಮುಂದುವರಿದಿದ್ದು, ಮಂಗಳವಾರ ಮತ್ತೆ  ಐದು ತೆಂಗಿನ ಮರಗಳು, ಬೀಚ್ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಪಾಲಾಗಿದ್ದು, ಮತ್ತಷ್ಟು ಹಾನಿ ಸಂಭವಿಸುವ ಭೀತಿ ಎದುರಾಗಿದೆ. ಮಂಗಳವಾರ ಮಧ್ಯಾಹ್ನ ಸಮುದ್ರದ ಅಬ್ಬರದ ಅಲೆಗಳಿಗೆ ಕಾಡಿಪಟ್ಣದ ಸುಶೀಲ್ ಕಾಂಚನ್ ಎಂಬವರಿಗೆ ಸೇರಿದ ೫ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ೬ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಇದೆ.   ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ ಯುವಕರ […]

ಕರಾವಳಿ

ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ: ತೆಂಗಿನ ಮರಗಳು  ಸಮುದ್ರ ಪಾಲು

  ಭಾರೀ ಮಳೆ, ಗಾಳಿಗೆ ಕಡಲ ತಡಿಯ ಉಸುಕಿನಲ್ಲಿ ಉಂಟಾಗಿರುವ ಭಾರೀ ಗುಳಿಯ ಪರಿಣಾಮವಾಗಿ ಸೋಮವಾರ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು ೫೦ ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದೆ.  ಕಡಲಿನ ಅಬ್ಬರದ ತೆರೆಗಳಿಗೆ ಈಗಾಗಲೇ ಸುಮಾರು ೪ ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ವಿದ್ಯುತ್ ಕಂಬವು ನೆಲಕಚ್ಚಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ ಭಾಗ, ಹಲವು ತೆಂಗಿನ ಮರಗಳು ಹಾಗೂ ಕಾಡಿಪಟ್ಣ […]

eMedia Kannada  @2025. All Rights Reserved.