• Home  
  • (Uchila Dasara -2023)  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ
- ಕರಾವಳಿ - ವಿಡಿಯೋ

(Uchila Dasara -2023)  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ

Share:   ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ (Udupi- Uchila) ಉಡುಪಿ\ ಉಚ್ಚಿಲ: ಮೊಗವೀರ ಮಹಾಜನ ಸಂಘ ಉಚ್ಚಿಲ ಆಯೋಜಿತ ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಉತ್ತರ ಪ್ರದೇಶದ ಕಾಶಿಯಿಂದ (varanashi) ಆಗಮಿಸಿದ 11 ಜನ ಪುರೋಹಿತರಿಂದ ದೀಪಾರತಿ, ಶಂಖನಾದ, ಡಮರೂ, ಪುಷ್ಪಾರ್ಚನೆ ನೆರವೇರಿತು.  ಕಾಶಿಯ ಗಂಗಾ ನದಿಯ ದಡದಲ್ಲಿ ಇದೇ ಅರ್ಚಕರು ಗಂಗಾರತಿ ಬೆಳಗಿಸುತ್ತಾರೆ ಎನ್ನುವುದು ವಿಶೇಷ.  ಉಚ್ಚಿಲ ದೇವಳದ ಆಡಳಿತ […]

  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ

(Udupi- Uchila) ಉಡುಪಿ\ ಉಚ್ಚಿಲ: ಮೊಗವೀರ ಮಹಾಜನ ಸಂಘ ಉಚ್ಚಿಲ ಆಯೋಜಿತ ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಉತ್ತರ ಪ್ರದೇಶದ ಕಾಶಿಯಿಂದ (varanashi) ಆಗಮಿಸಿದ 11 ಜನ ಪುರೋಹಿತರಿಂದ ದೀಪಾರತಿ, ಶಂಖನಾದ, ಡಮರೂ, ಪುಷ್ಪಾರ್ಚನೆ ನೆರವೇರಿತು.

 ಕಾಶಿಯ ಗಂಗಾ ನದಿಯ ದಡದಲ್ಲಿ ಇದೇ ಅರ್ಚಕರು ಗಂಗಾರತಿ ಬೆಳಗಿಸುತ್ತಾರೆ ಎನ್ನುವುದು ವಿಶೇಷ.

 ಉಚ್ಚಿಲ ದೇವಳದ ಆಡಳಿತ ಅಲ್ಲಿಯ ಪುರೋಹಿತರನ್ನು ಕರೆಸಿ ದೀಪಾರತಿ ಮಾಡಿಸಲಾಗಿದೆ.  ಸಾವಿರಾರು ಭಕ್ತಾದಿಗಳು ದೀಪಾರತಿ ಸೇವೆಯಲ್ಲಿ ಪಾಲ್ಗೊಂಡಿದ್ದರು.

 ಈ ಸಂದರ್ಭ ದೇವಳದ ಗೌರವ ಸಲಹೆಗಾರರಾದ ಡಾ. ಜಿ ಶಂಕರ್, (Nadoja Dr G. Shankar) ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ,  ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ದೇವಳದ ಕ್ಷೇತ್ರಾಡಳಿತ  ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಸಹಿತ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.