• Home  
  • ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯಿಂದ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ (Fire Safety Demonstration by Adani Power Limited as part of Fire Safety Week)
- social service

ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯಿಂದ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ (Fire Safety Demonstration by Adani Power Limited as part of Fire Safety Week)

Share: ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯಿಂದ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ ಮುಲ್ಕಿ ವಿಜಯ ಕಾಲೇಜು ಹಾಗೂ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾತ್ಯಕ್ಷಿಕೆ (Padubidri) ಪಡುಬಿದ್ರಿ: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಸ್ಥಳೀಯ ವಿವಿಧ ಶಾಲಾ -ಕಾಲೇಜು , ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕರಿಗೆ ನಡೆಸುತ್ತಿರುವ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಮುಲ್ಕಿಯ ವಿಜಯ ಕಾಲೇಜು ಹಾಗೂ ಮಹಾಲಕ್ಷ್ಮೀ […]

(Padubidri) ಪಡುಬಿದ್ರಿ: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಸ್ಥಳೀಯ ವಿವಿಧ ಶಾಲಾ -ಕಾಲೇಜು , ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕರಿಗೆ ನಡೆಸುತ್ತಿರುವ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಮುಲ್ಕಿಯ ವಿಜಯ ಕಾಲೇಜು ಹಾಗೂ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆ ಉಚ್ಚಿಲದಲ್ಲಿ ನಡೆಸಲಾಯಿತು.

    ಅದಾನಿ ಪವರ್ ಲಿಮಿಟೆಡ್ ನ ಅಗ್ನಿ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ತೇಜೇಶ್ವರ ಬೆಟಗೇರಿಯವರ ಮಾರ್ಗದರ್ಶನದಲ್ಲಿ ಅಗ್ನಿ ಸುರಕ್ಷತಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಕಾರ್ತಿಕ್ ಎಮ್ ಐ, ಅಸಿಸ್ಟೆಂಟ್ ಮ್ಯಾನೇಜರ್ ಗಳಾದ ಅಜಿತ್ ಕುಮಾರ್ ಸಿಂಗ್, ಅಶ್ವಿನಿ ಕುಮಾರ್ ಸಿಂಗ್ ಹಾಗೂ ಸಹ ಫೈರ್ ಅಧಿಕಾರಿ ಶರಣ್ ಕುಮಾರ್ ಮಟ್ಟು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

   ಈ ಸಂದರ್ಭದಲ್ಲಿ ಮುಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೆಂಕಟೇಶ ಭಟ್, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನವ್ಯ ಉಪಸ್ಥಿತರಿದ್ದರು.

  ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.