• Home  
  •   ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ ಪೂಜೆ ಸಂಪನ್ನ (Vara Mahalakshmi Vrat Puja at Uchila Sri Mahalakshmi Temple is complete)
- ಧಾರ್ಮಿಕ

  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ ಪೂಜೆ ಸಂಪನ್ನ (Vara Mahalakshmi Vrat Puja at Uchila Sri Mahalakshmi Temple is complete)

Share:   ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ ಪೂಜೆ ಸಂಪನ್ನ ಮಹಾಲಕ್ಷ್ಮೀ ಪೂಜೆಗೆ ಸಾವಿರಾರು ಮಹಿಳೆಯರ ಉಪಸ್ಥಿತಿ.   (Uchila) ಉಚ್ಚಿಲ : ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ   ಶುಕ್ರವಾರ ಮಹಾಲಕ್ಷ್ಮೀ ಸಭಾಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.   ಬೆಳಿಗ್ಗೆ 9.30 ಗಂಟೆಗೆ ಕಲಶ ಪ್ರತಿಷ್ಠೆ ನೆರವೇರಲಿದ್ದು, ನಂತರ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿ […]

  (Uchila) ಉಚ್ಚಿಲ : ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ   ಶುಕ್ರವಾರ ಮಹಾಲಕ್ಷ್ಮೀ ಸಭಾಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.

  ಬೆಳಿಗ್ಗೆ 9.30 ಗಂಟೆಗೆ ಕಲಶ ಪ್ರತಿಷ್ಠೆ ನೆರವೇರಲಿದ್ದು, ನಂತರ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ಸಂಪನ್ನಗೊಂಡಿತು.

  ಮಧ್ಯಾಹ್ನ 12.00 ಗಂಟೆಗೆ  ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ ಅಮ್ಮನ, ಶ್ರೀ ಭದ್ರಕಾಳಿ ಅಮ್ಮನ ಮಹಾಪೂಜೆ ನೆರವೇರಿತು. ಇದೇ ಸಂದರ್ಭ ಭದ್ರಕಾಳಿ ಅಮ್ಮನ ದರ್ಶನ ಸೇವೆ ನೆರವೇರಿತು.

  ಮಹಾ ಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ರತ್ನಾಕರ್ ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ಗುಂಡು ಬಿ. ಅಮೀನ್ ಕಿದಿಯೂರು, ವಿನಯ್ ಕರ್ಕೇರ ಮಲ್ಪೆ, ವಾಸುದೇವ ಸಾಲ್ಯಾನ್ ಕಟಪಾಡಿ, ಸುಧಾಕರ್ ಕುಂದರ್ ಬಂಕೇರ್ ಕಟ್ಟ, ಶ್ರೀಮತಿ ಜಯಾ ಶೆಟ್ಟಿ ಕಟಪಾಡಿ, ದಿನೇಶ್ ಎರ್ಮಾಳ್, ಅನಿಲ್ ಕುಮಾರ್ ಬೊಕ್ಕಪಟ್ಟಣ, ಸತೀಶ್ ಸಾಲ್ಯಾನ್ ಎರ್ಮಾಳ್, ಮನೋಜ್ ಕಾಂಚನ್ ಎರ್ಮಾಳ್, ಶಿವರಾಮ್ ಕೋಟ, ಸುಧಾಕರ್ ಸುವರ್ಣ ಎರ್ಮಾಳು, ಮೋಹನ್ ಬಂಗೇರ ಕಾಪು, ಸರ್ವೋತ್ತಮ ಕುಂದರ್,  ಶಿವಪ್ಪ ಕಾಂಚನ್ ಮಲ್ಪೆ, ಸತೀಶ್ ಕುಂದರ್ ಮಲ್ಪೆ, ನಾರಾಯಣ ಸಿ. ಕರ್ಕೇರ, ಶ್ರೀಮತಿ ಸುಗುಣ ಎಸ್ ಕರ್ಕೇರ, ಶ್ರೀಮತಿ ಕವಿತಾ ಕಾಂಚನ್, ವಿನಯ್ ಕರ್ಕೇರ ಮಲ್ಪೆ, ಗುಂಡು ಬಿ ಅಮೀನ್ ಕಿದಿಯೂರ್, ಸತೀಶ್ ಸಾಲ್ಯಾನ್ ಎರ್ಮಾಳ್, ಸುಧಾಕರ ಸುವರ್ಣ ಎರ್ಮಾಳು, ಸುಗುಣ ಎಸ್. ಕರ್ಕೇರ, ಪೂರ್ಣಿಮಾ ಚಂದ್ರಶೇಖರ, ಮೋಹನ್ ಬಂಗೇರ ಕಾಪು ದೇವಳದ ಪ್ರಬಂಧಕ ಸತೀಷ್‌ ಅಮೀನ್  ಮುಂತಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.