• Home  
  • ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila: DC team inspects highway chaos)
- PROBLEMS - ವಿಡಿಯೋ

ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila: DC team inspects highway chaos)

Share: ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila) ಉಚ್ಚಿಲ : ಅವ್ಯವಸ್ಥೆಗಳ ಕುರಿತಾಗಿ ಮಳೆಗಾಲದ ಮುಂಚಿತವಾಗಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗೆಗೆ ಕಾಪು ತಾ. ತಹಶೀಲ್ದಾರ್ ನೀಡಿದ್ದ ವರದಿಗಳ ಪುನರ್ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಅವರು  ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿಯಿತ್ತರು.  ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರೊಂದಿಗೆ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಎಸ್‌ಪಿ ಡಾ. ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಜಾಧವ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮತ್ತಿತರರಿದ್ದರು. […]

(Uchila) ಉಚ್ಚಿಲ : ಅವ್ಯವಸ್ಥೆಗಳ ಕುರಿತಾಗಿ ಮಳೆಗಾಲದ ಮುಂಚಿತವಾಗಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗೆಗೆ ಕಾಪು ತಾ. ತಹಶೀಲ್ದಾರ್ ನೀಡಿದ್ದ ವರದಿಗಳ ಪುನರ್ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಅವರು  ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿಯಿತ್ತರು.

 ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರೊಂದಿಗೆ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಎಸ್‌ಪಿ ಡಾ. ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಜಾಧವ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮತ್ತಿತರರಿದ್ದರು.

  ತಂಡವು ಹೆಜಮಾಡಿ, ಪಡುಬಿದ್ರಿ, ಕಾಪು ಪಡು, ಕಟಪಾಡಿ ಸಹಿತ ವಿವಿಧ ಪ್ರದೇಶಗಳಲ್ಲಿನ ಪಂಚಾಯತ್ ಅಧ್ಯಕ್ಷರುಗಳು, ಗ್ರಾಮಾಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರೊಂದಿಗೆ ಭೇಟಿಯಿತ್ತು ಅಲ್ಲಿನ ಕೃತಕ ನೆರೆಬಾಧೆಯ ಪ್ರದೇಶಗಳಲ್ಲಿನ ಅವೈಜ್ಞಾನಿಕ ಕಾಮಗಾರಿ ಗಳನ್ನು ಸರಿಪಡಿಸುವಂತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ ಸೂಚಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿದ್ದ ಪರಂಬೋಕು ನೀರು ಹರಿವ ಚರಂಡಿಗಳನ್ನು ಗುರುತಿಸಿ ಬಿಡಿಸುವ ಕಾಮಗಾರಿಯೂ ಅವಶ್ಯವಾಗಿ ನಡೆಯಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿ ತಂಡಕ್ಕೆ ಗ್ರಾ. ಪಂ. ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಪಡುಬಿದ್ರಿಯ ಬಂಟರ ಸಂಘದ ಬಳಿಯ ಮನೆಗಳಿಗೆ ನುಗ್ಗುವ ಕೃತಕ ನೆರೆ, ಪರಂಬೋಕು ತೋಡಿನ ಮುಚ್ಚುಗಡೆಯಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದತ್ತ ಹಳೆ ಎಂಬಿಸಿ ರಸ್ತೆಗೆ ನುಗ್ಗುವ ಮಳೆನೀರು, ಬೀಡಿನ ಬಳಿ ಮಳೆ ನೀರು ಹರಿಯಲು ಅಳವಡಿಸಲಾದ ಸಣ್ಣಡೈನ್, ಹೆಜಮಾಡಿಯ ಶಿವನಗರ, ಟೋಲ್‌ಗೇಟ್ ಪ್ರದೇಶದಲ್ಲಿನ ಅವ್ಯವಸ್ಥೆಗಳನ್ನು ತುರ್ತು ನಿರ್ವಹಿಸಿ ನೆರೆ ಹಾವಳಿಯನ್ನು ತಪ್ಪಿಸುವಂತಾಗಬೇಕು ಎಂದು ಸೂಚಿಸಿದರು.

ಉಚ್ಚಿಲ ಹೆದ್ದಾರಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಉಚ್ಚಿಲದಲ್ಲಿ ಈಗಾಗಲೇ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಅದನ್ನುಇನ್ನಷ್ಟು ದೂರ ಮುಂದುವರಿಸಲು ಹೇಳಲಾಗಿದೆ. ಹೆದ್ದಾರಿ ಪಕ್ಕದಲ್ಲಿ ಸರಾಗವಾಗಿ ಮಳೆ ನೀರು ಹೋಗುವ ಚರಂಡಿಗಳನ್ನು ಸರಿ ಮಾಡಬೇಕಿದೆ. ಈಗ ಇರುವ ಡಿವೈಡರ್‌ ನಿಂದಾಗಿ ಅಪಘಾತ ಹೆಚ್ಚಿದೆ. ಅದನ್ನು ಮುಂದೆ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಆವಿಷಯವನ್ನು ಪೊಲೀಸರು ಮತ್ತು ಹೆದ್ದಾರಿ ಇಲಾಖೆ ಜಂಟಿಯಾಗಿ ಸರ್ವೇ ಮಾಡಿ, ರೋಡ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿಯ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.