• Home  
  • ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ (Yermal: Bus hits scooter, scooter rider suffers serious leg injury)
- ಅಪಘಾತ

ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ (Yermal: Bus hits scooter, scooter rider suffers serious leg injury)

Share: ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ  (Padubidri) ಪಡುಬಿದ್ರಿ : ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯವಾದ  ಘಟನೆ ಬುಧವಾರ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ಘಟಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಅದಮಾರು ನಿವಾಸಿ  ರಾಘವೇಂದ್ರ (67) ಎಂದು ಗುರುತಿಸಲಾಗಿದೆ. ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ, ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ತಡೆರಹಿತ ಬಸ್ […]

 (Padubidri) ಪಡುಬಿದ್ರಿ : ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯವಾದ  ಘಟನೆ ಬುಧವಾರ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ಘಟಿಸಿದೆ.

ಗಾಯಗೊಂಡ ವ್ಯಕ್ತಿಯನ್ನು ಅದಮಾರು ನಿವಾಸಿ  ರಾಘವೇಂದ್ರ (67) ಎಂದು ಗುರುತಿಸಲಾಗಿದೆ.

ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ, ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ತಡೆರಹಿತ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ. ಹೆಲ್ಮಟ್ ಧರಿಸಿದ್ದರಿಂದ ಪ್ರಾಣಪಾಯವಾಗಿಲ್ಲ.

 ಗಾಯಾಳುವನ್ನು ಸ್ಥಳೀಯರಾದ ಜಲಾಲುದ್ದೀನ್ ನೇತೃತ್ವದಲ್ಲಿ ಎಸ್‌ಡಿಪಿಐ ಆಂಬುಲೆನ್ಸ್ ಮೂಲಕ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.