• Home  
  • ಉಡುಪಿ: ಕಾರೊಂದು ಡಿವೈಡರ್ ಕಲ್ಲುಗಳಿಗೆ  ಡಿಕ್ಕಿಯಾಗಿ  ಪಲ್ಟಿ- ನಾಲ್ವರಿಗೆ ತೀವ್ರ ಗಾಯ (Udupi : A car collided with the devider stones and Overturned – Four seriously injured)
- ಅಪಘಾತ

ಉಡುಪಿ: ಕಾರೊಂದು ಡಿವೈಡರ್ ಕಲ್ಲುಗಳಿಗೆ  ಡಿಕ್ಕಿಯಾಗಿ  ಪಲ್ಟಿ- ನಾಲ್ವರಿಗೆ ತೀವ್ರ ಗಾಯ (Udupi : A car collided with the devider stones and Overturned – Four seriously injured)

Share: ಉಡುಪಿ: ಕಾರೊಂದು ಡಿವೈಡರ್ ಕಲ್ಲುಗಳಿಗೆ  ಡಿಕ್ಕಿಯಾಗಿ  ಪಲ್ಟಿ– ನಾಲ್ವರಿಗೆ ತೀವ್ರ ಗಾಯ  (Udupi) ಉಡುಪಿ: ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಘಟಿಸಿದೆ.      ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ.  ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಾಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.   ಕಾರು […]

ಉಡುಪಿ: ಕಾರೊಂದು ಡಿವೈಡರ್ ಕಲ್ಲುಗಳಿಗೆ  ಡಿಕ್ಕಿಯಾಗಿ  ಪಲ್ಟಿ– ನಾಲ್ವರಿಗೆ ತೀವ್ರ ಗಾಯ

 (Udupi) ಉಡುಪಿ: ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಘಟಿಸಿದೆ.  

   ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ.

 ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಾಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

  ಕಾರು ಪಲ್ಟಿಯಾಗುವ ಸಂದರ್ಭ ದೊಡ್ಡ ಕಲ್ಲೊಂದು ಬೈಕಿನತ್ತ ಚಿಮ್ಮಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ.

  ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿ ರಸ್ತೆ ಮಧ್ಯೆ ವಿಭಾಜಕವಾಗಿ ಕಲ್ಲುಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಆ ಕಲ್ಲುಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿದೆ. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

  ಟ್ರಾಫಿಕ್ ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಲಕ್ಷಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.