ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಬ್ರಹ್ಮಕಲಶೋತ್ಸವದ ಪ್ರಥಮ ಧಾರ್ಮಿಕ ಸಭೆ
(Photo credit : ravi digitals , Padubidri)
(Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ. ಡಾ. ಕೆ. ಪ್ರಕಾಶ್ ಶೆಟ್ಟಿ ನಾಯಕತ್ವದಲ್ಲಿ ಭಕ್ತಾಧಿಗಳು ವಿಶ್ವಾಸ ಇರಿಸಿದ್ದರಿಂದ 11 ತಿಂಗಳಲ್ಲಿಯೇ ಅದ್ಭುತ ದೇಗುಲ ಮೂಡಿಬಂದಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವ ಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಂಗಳೂರು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರೂ ಒಗ್ಗಟ್ಟಿನಿಂದ ಮಹಾಕ್ಷೇತ್ರವನ್ನು ನಿರ್ಮಿಸಿದ್ದು, ಸಂಸ್ಕಾರ -ಸಂಸ್ಕೃತಿಯು ಮಹಾ ಪ್ರವಾಹವಾಗಿ ಹರಿಯಲಿ ಎಂದರು.
ಮಹಾ ಮಹೋಪಾಧ್ಯಾಯ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಸಮಿತಿಯ ಗೌರವಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀ ಕ್ಷೇತ್ರದ ತಂತ್ರಿ ವೇದಮೂರ್ತಿ ಕಂಬ್ಳೆಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಅನುವಂಶಿಕ ಮೊಕ್ತಸರ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳ, ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಪಡುಬಿದ್ರಿ ಉದಯಾದ್ರಿ ಶ್ರೀ ಬಾಲಗಣಪತಿ ಪ್ರಸನ್ನಪಾರ್ವತಿ ದೇವಸ್ಥಾನದ ಮೊಕ್ತೇಸರ ಜಗದಾಭಿರಾಮಸ್ವಾಮಿ, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಪ್ರಶಾಂತ ಶೆಣೈ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ಶೆಟ್ಟಿ ಆಡಳಿತ ಮೊಕ್ತಸರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಶಿಧರ ಶೆಟ್ಟಿ ಎಲ್ಲೂರು, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ದುರ್ಗಾದೇವಿ ಭಜನಾ ಮಂದಿರದ ಅಧ್ಯಕ್ಷ ಸಂಪತ್ ಆಚಾರ್ಯ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ನಡಿಪಟ್ಟ ಮೊಗವೀರ ಸಭಾ ಅಧ್ಯಕ್ಷ ಹರೀಶ್ ಪುತ್ರನ್, ಪಡುಬಿದ್ರಿ ಕಾಡಿಪಟ್ಟ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ದೇವಾಡಿಗ ಸಂಘದ ಅಧ್ಯಕ್ಷ ಭರತ್ ದೇವಾಡಿಗ, ಭಂಡಾರಿ ಸಮಾಜ ಅಧ್ಯಕ್ಷ ವಿನಯ ಡಿ. ಭಂಡಾರಿ, ಶ್ರೀ ವೀರಭದ್ರ ದೇವಸ್ಥಾನದ ಮೊಕ್ತೇಸರ ಸುಂದರ ಶೆಟ್ಟಿಗಾರ್, ಕೊರಗ ಸಮಾಜ ಅಧ್ಯಕ್ಷ ಸೋಮಶೇಖರ, ದೈವರಾಜ ಕೋರಟ್ಟು ಏಳುಮಾಗಣೆ ಮುಂಡಾಲ ಸಮಾಜದ ಅಧ್ಯಕ್ಷ ಸದಾನಂದ ಬೊಫ್ಲೋರಿ ಲಚ್ಚಿಲ್, ಬ್ರಹ್ಮಮುಗ್ಗೆರ್ಕಳ ಸಮಾಜದ ಅಧ್ಯಕ್ಷ ವಿಠಲ ಕೋಟ್ಯಾನ್, ಮೂಲ್ಯ ಸಮಾಜದ ಅಧ್ಯಕ್ಷ ಅಣ್ಣು ಮೂಲ್ಯ, ಪಾಣರ ಸಮಾಜದ ಮುಖಂಡ ರಮೇಶ್, ಉಡುಪಿ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಡುಬಿದ್ರಿ ಸುಜ್ಞಾನ್, ಸೆಜ್ ಆರ್ಥಿಕ ವಲಯದ ಹಿರಿಯ ಮಹಾಪ್ರಬಂಧಕ ಅಶೋಕ ಕುಮಾರ ಶೆಟ್ಟಿ, ಆರ್ಥಿಕ ಸಮಿತಿಯ ಇನ್ನಾ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ ಪೂನಾ, ಧಾರ್ಮಿಕ ಚಿಂತಕ ದಾಮೋದರ ಶರ್ಮಾ ಬಾರ್ಕೂರು ವೇದಿಕೆಯಲ್ಲಿದ್ದರು.
ಡಾ. ರಾಘವೇಂದ್ರ ರಾವ್, ಶ್ರೀಧರ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜಯ ಶೆಟ್ಟಿ ಪದ್ರ ಸಹಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿನಾಥ ಶೆಟ್ಟಿ ವಂದಿಸಿದರು.

