• Home  
  • ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಿನಲ್ಲಿ ಅಜ್ಞಾತ ವ್ಯಕ್ತಿಗಳಿಂದ ಮೋಸ (Fraud by unknown persons in the name of booking a guest house in Dharmasthala)
- ಅಪರಾಧ

ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಿನಲ್ಲಿ ಅಜ್ಞಾತ ವ್ಯಕ್ತಿಗಳಿಂದ ಮೋಸ (Fraud by unknown persons in the name of booking a guest house in Dharmasthala)

Share: ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಿನಲ್ಲಿ ಅಜ್ಞಾತ ವ್ಯಕ್ತಿಗಳಿಂದ ಮೋಸ  ಖಾಸಗಿ ಏಜೆಂಟ್‌ಗಳು, ವಾಟ್ಸಾಪ್, ದೂರವಾಣಿ ಕರೆ ಮೂಲಕ  ಬುಕ್ಕಿಂಗ್ ವ್ಯವಸ್ಥೆ ಇಲ್ಲ ಸ್ಪಷ್ಟನೆ (Dharmasthala) ಧರ್ಮಸ್ಥಳ :ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಅಜ್ಞಾತ ವ್ಯಕ್ತಿಗಳು ನಕಲಿ ವೆಬ್‌ಸೈಟ್‌ಗಳನ್ನು ರಚಿಸಿಭಕ್ತರನ್ನು ಮೋಸಗೊಳಿಸುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಸ್ಪಷ್ಟನೆ ನೀಡಲಾಗಿದೆ.   ಗೂಗಲ್‌ನಲ್ಲಿ ಹುಡುಕಿದಾಗ ಈ ನಕಲಿ ವೆಬ್‌ಸೈಟ್‌ಗಳು […]

(Dharmasthala) ಧರ್ಮಸ್ಥಳ :ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಅಜ್ಞಾತ ವ್ಯಕ್ತಿಗಳು ನಕಲಿ ವೆಬ್‌ಸೈಟ್‌ಗಳನ್ನು ರಚಿಸಿಭಕ್ತರನ್ನು ಮೋಸಗೊಳಿಸುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಸ್ಪಷ್ಟನೆ ನೀಡಲಾಗಿದೆ.

  ಗೂಗಲ್‌ನಲ್ಲಿ ಹುಡುಕಿದಾಗ ಈ ನಕಲಿ ವೆಬ್‌ಸೈಟ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ತೆರೆಯುತ್ತಿದ್ದಂತೆಯೇ ವಾಟ್ಸಾಪ್ ಮೆಸೇಜ್ ಬಾಕ್ಸ್ ತೆರೆದುಕೊಳ್ಳುತ್ತದೆ. ಅಲ್ಲಿ ಅವರು ಕೊಠಡಿ ಬುಕ್ಕಿಂಗ್ ಮಾಡುವುದಾಗಿ ಭರವಸೆ ನೀಡಿ, ಮುಂಗಡ ಹಣವನ್ನು ಕೇಳುತ್ತಾರೆ. ಆದರೆ ಹಣ ಪಾವತಿಸಿದ ನಂತರ —ಕರೆಗಳು ಸ್ಥಗಿತಗೊಳ್ಳುತ್ತವೆ. ಸಂಪರ್ಕ ಸಂಖ್ಯೆಗಳು ಅಚಾನಕ್ ನಾಪತ್ತೆಯಾಗುತ್ತವೆ. ಅನೇಕ ಭಕ್ತರು ಈ ರೀತಿ ವಂಚನೆಗೆ ಒಳಗಾಗುತ್ತಿದ್ದಾರೆ.

ಭಕ್ತರು ದಯವಿಟ್ಟು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಗಮನಿಸಬೇಕು.

 ಧರ್ಮಸ್ಥಳದ ಅತಿಥಿ ಗೃಹ ಬುಕ್ಕಿಂಗ್ ನಡೆಯುವುದು

ಕೇವಲ ಒಂದೇ ಒಂದು ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ. ಅದು — www.shridharmasthala.org ಇದನ್ನು  ಹೊರತುಪಡಿಸಿ ಯಾವುದೇ ಅಧಿಕೃತ ವೆಬ್‌ಸೈಟ್ ಇಲ್ಲ. ಯಾವುದೇ ಖಾಸಗಿ ಏಜೆಂಟ್‌ಗಳು ಇಲ್ಲ. ವಾಟ್ಸಾಪ್ ಅಥವಾ ದೂರವಾಣಿ ಕರೆ ಮೂಲಕ ಯಾವುದೇ ಬುಕ್ಕಿಂಗ್ ವ್ಯವಸ್ಥೆ ಇಲ್ಲ.

 ಯಾರಾದರೂ ವೈಯಕ್ತಿಕ UPI ಖಾತೆಗೆ ಹಣ ಕಳುಹಿಸಲು ಕೇಳಿದರೆ, ಕ್ಷಣ ಹಣಪಾವತಿ ಮಾಡಲು ಒತ್ತಡ ಹಾಕಿದರೆ, ಅಥವಾ “ತುರ್ತು ಲಭ್ಯತೆ” ಎಂದು ಹೇಳಿದರೆ ಅದು ಸ್ಪಷ್ಟ ಮೋಸದ ಸೂಚನೆಯಾಗಿದೆ.

  ಧರ್ಮಸ್ಥಳವು ಸತ್ಯ, ಸೇವೆ ಮತ್ತು ಪಾರದರ್ಶಕತೆಯ ಸಂಕೇತ. ನಿಮ್ಮ ಭಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲು ವಂಚಕರಿಗೆ ಅವಕಾಶ ನೀಡಬೇಡಿ. ಈ ಮಹತ್ವದ ಮಾಹಿತಿಯನ್ನು ನಿಮ್ಮ ಕುಟುಂಬದ ಸದಸ್ಯರು ಮತ್ತು ಇತರ ಭಕ್ತರೊಂದಿಗೆ ಹಂಚಿಕೊಳ್ಳಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.