ಫೆ. 28 – ಮಾ. 2 : ಕಾಪು ಹೊಸ ಮಾರಿಗುಡಿಯಲ್ಲಿ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ
“ಮಾತೃ ವೈಭವ” ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಪ್ಪರ ಮಹೂರ್ತ
(Kaup) ಕಾಪು: ಫೆಬ್ರವರಿ 28 ರಿಂದ ಮೊದಲ್ಗೊಂದು ಮಾರ್ಚ್ 2ರವರೆಗೆ ಮೂರು ದಿನಗಳ ಪರ್ಯಂತ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿರುವ ಕಾಪುವಿನ ಹೊಸ ಮಾರಿಗುಡಿಯ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ – “ಮಾತೃ ವೈಭವ” ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುಧವಾರ ಹೊಸ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೆ ಪಿ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಉಚ್ಚಂಗಿ ಸಹಿತ ಮಾರಿಯಮ್ಮನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಚಪ್ಪರ ಮಹೂರ್ತವನ್ನು ನೆರವೇರಿಸಲಾಯಿತು.
ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗೌರವಾಧ್ಯಕ್ಷ ಲಾಲಾಜಿ ಆರ್ ಮೆಂಡನ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶೇಖರ ಸಾಲ್ಯಾನ್, ಮನೋಹರ ರಾವ್, ಚರಿತ ದೇವಾಡಿಗ, ಮಾಧವ ಆರ್. ಪಾಲನ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಗಣ್ಯರಾದ ಯೋಗೀಶ್ ವಿ. ಶೆಟ್ಟಿ, ಭಗವಾನ್ ದಾಸ್, ಪ್ರಭಾಕರ ಎಸ್. ಪೂಜಾರಿ, ಲಕ್ಷ್ಮೀಶ ತಂತ್ರಿ , ವಿಕ್ರಂ ಕಾಪು, ನಿರ್ಮಲ್ ಕುಮಾರ್ ಹೆಗ್ಡೆ, ಶ್ರೀಕರ ಶೆಟ್ಟಿ ಕಲ್ಯ, ಜಯರಾಮ್ ಆಚಾರ್ಯ, ಗೀತಾಂಜಲಿ ಎಂ ಸುವರ್ಣ, ಸುಧಾಕರ ಶೆಟ್ಟಿ ಮಕರ, ಕೆ ವಿಶ್ವನಾಥ್, ಬೀನಾ ವಾಸುದೇವ ಶೆಟ್ಟಿ, ಸಾವಿತ್ರಿ ಗಣೇಶ್, ಡಾ. ಪ್ರಶಾಂತ್ ಶೆಟ್ಟಿ, ಅನಿಲ್ ಕುಮಾರ್ ಕಾಪು, ಕಿರಣ್ ಆಳ್ವ, ರವಿರಾಜ್ ಶೆಟ್ಟಿ ಪಂಜಿತ್ತೂರು, ಉದಯ ಹೆಗ್ಡೆ ಮಲ್ಲಾರು , ಸುನಿಲ್ ಎಸ್. ಪೂಜಾರಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

