• Home  
  • ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ (Inter-state sports festival MRG Trophy 2024 launched in Padubidri)
- ಕ್ರೀಡೆ - ವಿಡಿಯೋ - ಸಂಘ, ಸಂಸ್ಥೆಗಳು

ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ (Inter-state sports festival MRG Trophy 2024 launched in Padubidri)

Share: ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ   ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ : ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್   (Padubidri) ಪಡುಬಿದ್ರಿ : ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ ಮೂಡುತ್ತದೆ. ಬಂಟ ಸಮಾಜಕ್ಕೆ ಸಮಾಜದ ನೇತೃತ್ವ ವಹಿಸುವ ವಿಶೇಷ ಶಕ್ತಿಯಿದೆ. ಇಂತಹ ಅವಕಾಶಗಳ ಮೂಲಕ ಮತ್ತಷ್ಟು ಕಾರ್ಯಗಳಾಗಲಿ ಎಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.  ಅವರು ಭಾನುವಾರ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಪಡುಬಿದ್ರಿ ಬಂಟರ […]

ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ

  ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ : ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್

  (Padubidri) ಪಡುಬಿದ್ರಿ : ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ ಮೂಡುತ್ತದೆ. ಬಂಟ ಸಮಾಜಕ್ಕೆ ಸಮಾಜದ ನೇತೃತ್ವ ವಹಿಸುವ ವಿಶೇಷ ಶಕ್ತಿಯಿದೆ. ಇಂತಹ ಅವಕಾಶಗಳ ಮೂಲಕ ಮತ್ತಷ್ಟು ಕಾರ್ಯಗಳಾಗಲಿ ಎಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.

 ಅವರು ಭಾನುವಾರ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಪಡುಬಿದ್ರಿ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ದಿ. ಮಹಾಬಲ ಶೆಟ್ಟಿ ಕ್ರೀಡಾಂಗಣದ ಪುಚ್ಚೊಟ್ಟು ಬೀಡು ದಿ. ರತ್ನ ಲೋಕಯ್ಯ ಶೆಟ್ಟಿ ವೇದಿಕೆಯಲ್ಲಿ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಇದರ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

 ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024  ಅಂತರ್‌ ರಾಜ್ಯ ಕ್ರೀಡಾಕೂಟವನ್ನು ಎಂ ಆರ್ ಜಿ ಗ್ರೂಪ್ ಬೆಂಗಳೂರು ಇದರ ಸಿ.ಎಂ.ಡಿ. ಡಾ. ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.

 ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಂಟರಿಗೆ ಗುರುಗಳಿಲ್ಲ ಎನ್ನುತ್ತಾರೆ. ಬಂಟರಿಗೆ ಗುರುಗಳ ಅವಶ್ಯಕತೆಯಿಲ್ಲ. ಅವರು ಏಕಲವ್ಯರಂತೆ. ಗುರು ಇಲ್ಲದೆಯೂ ವಿದ್ಯೆ ಕಲಿಯುವ ತಾಕತ್ತು ಬಂಟ ಸಮಾಜಕ್ಕಿದೆ. ಭೂ ಸುಧಾರಣೆ ಕಾನೂನಿನ ಮೂಲಕ ಸಮಾಜದಲ್ಲಿ ಅತೀ ಹೆಚ್ಚು ಭೂಮಿಯನ್ನು ಬಂಟ ಸಮಾಜ ಕಳೆದು ಕೊಂಡರೂ, ಪರ ಊರಿಗೆ ತೆರಳಿ ಆರ್ಥಿಕ ಸದೃಢತೆಯನ್ನು ಸಾಧಿಸಿದ ಸಮಾಜವಾಗಿದೆ ಎಂದರು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಅದಾನಿ ಫೌಂಡೆಶನ್ಅಧ್ಯಕ್ಷ ಕಿಶೋರ್ ಆಳ್ವ, ಕೆಎಂಎಫ್ ಮಂಗಳೂರು ಅಧ್ಯಕ್ಷ ಸುಚರಿತ ಶೆಟ್ಟಿ, ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ ಮಾತನಾಡಿದರು.

 ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ಐಕಳ ಬಾವ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

 ವೇದಿಕೆಯಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲ ಪೂಜಾರಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪೂಣೆ ಉದ್ಯಮಿ ಚಂದ್ರಹಾಸ ಶೆಟ್ಟಿ, ಪುಚ್ಚೊಟ್ಟು ಬೀಡು, ಕೃಷ್ಣ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಸಂತೋಷ್‌ ಶೆಟ್ಟಿ ಪುಣೆ, ರಾಕೇಶ್‌ ಮಲ್ಲಿ, ಸೀತಾರಾಂ ಶೆಟ್ಟಿ ಪುಚ್ಚೊಟ್ಟು ಬೀಡು, ಕ್ರೀಡಾಕೂಟದ ಸ್ಥಳದಾನಿ ಕರುಣಾಕರ ಪೂಜಾರಿ, ಸಿರಿಮುಡಿ ದತ್ತಿ ನಿಧಿಯ ಅಧ್ಯಕ್ಷ ಸಾಂತೂರು ಬಾಸ್ಕರ ಶೆಟ್ಟಿ, ಬಂಟ್ಸ್‌ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ಮಹಿಳಾ ಘಟಕಾಧ್ಯಕ್ಷೆ ಜ್ಯೋತಿ ಎಸ್‌ ಶೆಟ್ಟಿ, ಬಂಟರ ಯುವ ವಿಭಾಗದ ಅಧ್ಯಕ್ಷ ನವೀನ್‌ ಎನ್‌ ಸೆಟ್ಟಿ, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಸಂಚಾಲಕಿ ಶರ್ಮಿಳಾ ಆರ್‌ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್‌ ಚಂದ್ರ ಜೆ ಶೆಟ್ಟಿ, ಹರಿಪ್ರಸಾದ್‌ ರೈ,   ಶಶಿಕಾಂತ್ ಪಡುಬಿದ್ರಿ, ರೋಷನ್ ಕುಮಾರ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಕ್ರೀಡಾ ಜ್ಯೋತಿ

ಸಹಕಾರ ರತ್ನ ಡಾ. ಎಂ ಎನ್‌ ರಾಜೇಂದ್ರಕುಮಾರ್‌ ಕ್ರೀಡಾಜ್ಯೋತಿ ಪ್ರಜ್ವಲನೆ ನಡೆಸಿದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಬಂಟ ಕ್ರೀಡಾ ಕೂಟದ ಧ್ವಜಾರೋಹಣ ಗೈದರು.

ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯುಟಿ ಖಾದರ್‌ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು.

 ಪುಣೆ ಉದ್ಯಮಿಯಾದ ಸೀತಾರಾಮ ಶೆಟ್ಟಿ ಪುಚೊಟ್ಟು ಬೀಡು ಇವರು ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು. ಅತ್ಯಾಕರ್ಷಕ ವಾಹನ ಮೆರವಣಿಗೆಯೊಂದಿಗೆ ಕ್ರೀಡಾ ಜ್ಯೋತಿಯು ಪಡುಬಿದ್ರಿ ಪೇಟೆಯ ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬಂದಿತು.

 ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬ್ಬಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆಯಿತು.

ಡಾ. ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ಜಯ ಶೆಟ್ಟಿ ಪದ್ರ ಮತ್ತು ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು. ಪ್ರಕಾಶ್‌ ಶೆಟ್ಟಿ ಪಡುಹಿತ್ಲು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.