• Home  
  •  ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)
- ಧಾರ್ಮಿಕ

 ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)

Share: ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ     ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ಪರಿಕರಗಳ ಭವ್ಯ ಶೋಭಾ ಯಾತ್ರೆ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ,  ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ […]

(Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ,  ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ ಯಾತ್ರೆಯೊಂದಿಗೆ ಗುರುವಾರ ಬೆಳಿಗ್ಗೆ ಪಡುಬಿದ್ರಿ ಕಲ್ಸಂಕ ಬಳಿಯ ಗುಂಡ್ಲಾಡಿ ಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರಲಾಯಿತು.

   ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್‌ ಶೆಟ್ಟಿಯವರು ಶೋಭಾಯಾತ್ರೆಗೆ ಚಾಲನೆ ನೀಡಿದರು.

 ಮೆರವಣಿಗೆಯಲ್ಲಿ ಚೆಂಡೆ, ವಾಧ್ಯ, ಕೊಂಬು, ಕಹಳೆ,  ಭಜನಾ ತಂಡಗಳು, ಕುಣಿತ ಭಜನಾ ತಂಡಗಳು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.

   ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್‌ ಶೆಟ್ಟಿ, ಶ್ರೀಮತಿ ಆಶಾಪ್ರಕಾಶ್‌ ಶೆಟ್ಟಿ, ಗೌರವ್‌ ಪ್ರಕಾಶ್‌ ಶೆಟ್ಟಿ, ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಪ್ರಸಾದ್‌ ಶೆಟ್ಟಿ ಅಂಗಡಿಗುತ್ತು, ರಾಘವೇಂದ್ರ ನಾವಡ, ಕಂಕಣಗುತ್ತು ಶ್ರೀಮತಿ ಹಿತಾವತಿ ಮಹಾಬಲ ಭಂಡಾರಿ, ನವೀನ್ ಚಂದ್ರ ಜೆ. ಶೆಟ್ಟಿ, ಪಲ್ಲವಿ ಸಂತೋಷ್‌ ಶೆಟ್ಟಿ, ಶ್ರೀನಾಥ ಹೆಗ್ಡೆ, ನವೀನ್‌ ಎನ್‌ ಶೆಟ್ಟಿ, ವೈ. ಸುಕುಮಾರ್‌, ಜಯ ಶೆಟ್ಟಿ ಪದ್ರ, ಪಿಕೆ ಸದಾನಂದ, ವಿಶು ಕುಮಾರ್ ಶೆಟ್ಟಿ ಬಾಲ್, ವೈ. ಎನ್. ರಾಮಚಂದ್ರ ರಾವ್, ಲಕ್ಷ್ಮಣ ಶೆಟ್ಟಿ ಬಾಲ್, ರತ್ನಾಕರ ಶೆಟ್ಟಿ ನಡುಕೆರೆ, ಜಯ ಕೋಟ್ಯಾನ್, ರಮಾಕಾಂತ ರಾವ್, ಶ್ರೀಮತಿ ಮಮತಾ ಶೆಟ್ಟಿ, ಸುಧಾಕರ ಸಾಲ್ಯಾನ್, ಕೃಷ್ಣ ಬಂಗೇರ, ಸೋಮಶೇಖರ್, ವಿಠ್ಠಲ ಗುರಿಕಾರ, ಸುರೇಶ್, ಅಶೋಕ್ ಶೆಟ್ಟಿ, ಅಶೋಕ್ ಸಾಲ್ಯಾನ್, ಭರತ್ ದೇವಾಡಿಗ, ಪ್ರಕಾಶ್ ದೇವಾಡಿಗ, ರವೀಂದ್ರನಾಥ ಶೆಟ್ಟಿ, ಶ್ರೀನಾಥ್ ಹೆಗ್ಡೆ, ರವಿ ಶೆಟ್ಟಿ ಗುಂಡ್ಲಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಧನಪಾಲ್ ಶೆಟ್ಟಿ, ಹರೀಶ್ ಕೆ. ಶೆಟ್ಟಿ, ಪುಚ್ಚೊಟ್ಟು ಬೀಡು ಸೀತಾರಾಮ ಶೆಟ್ಟಿ, ಇನ್ನಾ ಕುರ್ಕಿಲ ಬೆಟ್ಟು ಸಂತೋಷ್‌ ಶೆಟ್ಟಿ, ಸೀನ ಪೂಜಾರಿ, ಅನಂತ ಪಟ್ಟಾಭಿ ರಾವ್‌, ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.