ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಸಾಮೂಹಿಕ ಪ್ರಾರ್ಥನೆ, ನಿಧಿಕುಂಭಕ್ಕಾಗಿ ಭಕ್ತಾದಿಗಳಿಂದ ಚಿನ್ನ, ಬೆಳ್ಳಿ ಅರ್ಪಣೆ
PHOTO CREDIT RAVI DIGITALS PADUBIDRI
(Padubidri) ಪಡುಬಿದ್ರಿ, ಮೇ 29: ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಉಪಸ್ಥಾನಾಧಿಪತಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿನ ನಿಧಿಕುಂಭ ಸ್ಥಾಪನೆಗಾಗಿ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಭಕ್ತಾದಿಗಳು ಯಥಾಶಕ್ತಿ ಚಿನ್ನ, ಬೆಳ್ಳಿ, ನವರತ್ನಗಳನ್ನು ಶ್ರೀ ದೇವರಿಗೆ ಅರ್ಪಿಸಿದರು.
ಚಿನ್ನದ ಲೇಪನದೊಂದಿಗಿನ ಬೆಳ್ಳಿಯ ನಿಧಿಕುಂಭವನ್ನು ದಾನವಾಗಿತ್ತ ಪಡುಬಿದ್ರಿ ಶ್ರೀ ಕೃಷ್ಣಾಪುರ ಶಾಖಾ ಮಠದ ವೇ. ಮೂ. ಶ್ರೀನಿವಾಸ ಉಪಾಧ್ಯಾಯರವರು ಬಾಲಾಲಯದಲ್ಲಿ ಶ್ರೀ ಮಹಾಗಣಪತಿಗೆ ಅರ್ಪಿಸಿದರು.
ಶ್ರೀ ದೇವಸ್ಥಾನದ ಅರ್ಚಕ ವೈ. ಗುರುರಾಜ ಭಟ್ ಪ್ರಾರ್ಥನೆಯನ್ನು ಗೈದರು.
ಸಾಮೂಹಿಕವಾಗಿ ಭಕ್ತಾದಿಗಳ ಮೂಲಕ ವಿವಿಧ ನಿಧಿಗಳ ಅರ್ಪಣೆಯನ್ನು ಸಂಗ್ರಹಿಸಲಾಯಿತು.
ಇಂದು (ಗುರುವಾರ) ಸಂಜೆ ವಾಸ್ತು, ನಿಧಿಕುಂಭ ಶುದ್ಧಿ ಮುಂತಾದ ಧಾರ್ಮಿಕ ವಿಧಿಗಳು ನಡೆಯಲಿದೆ.
ನಾಳೆ (ಶುಕ್ರವಾರ) ಬೆಳಗ್ಗಿನ 7-12 ರ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ನಿಧಿಕುಂಭ ಸ್ಥಾಪನೆಯು ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿರುವುದು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರು ಎಂಆರ್‌ಜಿ ಸಂಸ್ಥೆಯ ನಿರ್ದೇಶಕ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಶ್ರೀ ದೇವಸ್ಥಾನದ ಅರ್ಚಕ ಪದ್ಮನಾಭ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ, ನವೀನ್‌ಚಂದ್ರ ಜೆ. ಶೆಟ್ಟಿ, ನವೀನ್ ಎನ್. ಶೆಟ್ಟಿ, ಪ್ರಶಾಂತ್ ಶೆಣೈ, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಮಾಕಾಂತ ರಾವ್, ಹರಿಕೃಷ್ಣ ರಾವ್, ಡಾ. ವೈ. ಎನ್. ಶೆಟ್ಟಿ, ಡಾ. ಎನ್. ಟಿ. ಅಂಚನ್, ಸುಚರಿತಾ ಅಂಚನ್, ಪಿ. ಕೆ. ಸದಾನಂದ, ವಿಶುಕುಮಾರ್ ಶೆಟ್ಟಿಬಾಲ್, ಕೃಷ್ಣ ಶೆಟ್ಟಿ ಅವರಾಲು, ಬಗ್ಗೇಡಿಗುತ್ತು ಶೇಖರ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೇಟೆಮನೆ, ಸರಾಫ್ ಸಂಪತ್ ಕುಮಾರ್ ಆಚಾರ್ಯ, ಸುರೇಶ್ ಶೆಟ್ಟಿ ಗುಂಡ್ಲಾಡಿ, ವೈ. ಗೋಪಾಲ ಶೆಟ್ಟಿ, ಮುರಳೀನಾಥ ಶೆಟ್ಟಿ, ಭಾಸ್ಕರ್ ಕೆ., ಗೀತಾಂಜಲಿ ಸುವರಣ, ಸದಾಶಿವ ಪಡುಬಿದ್ರಿ, ಸುಕುಮಾರ್ ಶ್ರೀಯಾನ್, ಅಶೋಕ್ ಸಾಲ್ಯಾನ್, ಜಿತೇಂದ್ರ ಶೆಟ್ಟಿ ಬರ್ಪಾಣಿ, ಸುಧಾ ನಾವಡ, ಕಸ್ತೂರಿ ರಾಮಚಂದ್ರ, ಸುಧಾಕರ ಸಾಲ್ಯಾನ್, ಗ್ರಾಮ ಸೀಮೆಯ ಭಕ್ತಾದಿಗಳು, ಶ್ರೀ ದೇವಸ್ಥಾನದ ಸಿಬ್ಬಂದಿ ವರ್ಗ ಮತ್ತಿತರಿದ್ದರು.
