• Home  
  • ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ(Padubidfri Sri Mahalingeshwara Maha Ganapathi Temple “Kattadappa”)
- ಧಾರ್ಮಿಕ - ವಿಡಿಯೋ

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ(Padubidfri Sri Mahalingeshwara Maha Ganapathi Temple “Kattadappa”)

Share: ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ Photo credit : Ravi Digitals, Padubdri. (Padubidri) ಪಡುಬಿದ್ರಿ : ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಪೂಜೆಯ ವೇಳೆಗೆ  ಲಕ್ಷಗಟ್ಟಲೆ ಕಟ್ಟದಪ್ಪವನ್ನು (ಕಟಾಹಾಪೂವ) ಸಮರ್ಪಿಸಲಾಯಿತು.  ಲಕ್ಷಗಟ್ಟಲೆ ಕಟ್ಟದಪ್ಪಗಳನ್ನು ಸಿದ್ದಪಡಿಸು ವುದಕ್ಕಾಗಿ ಶನಿವಾರ ಮುಂಜಾನೆ 2.30ರಿಂದ ದೇಗುಲದ ಪ್ರಾಂಗಣದಲ್ಲಿ ಬಾಣಸಿಗ ಯೋಗೀಶ್ ರಾವ್ ನೇತೃತ್ವದಲ್ಲಿ ಕೆಲಸ ಕಾರ್ಯವನ್ನು ಆರಂಭಿಸಿದ್ದರು.   ಮುಂಜಾನೆಯ ವೇಳೆಗೆ ಶ್ರೀ ದೇವರ […]

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ

Photo credit : Ravi Digitals, Padubdri.

(Padubidri) ಪಡುಬಿದ್ರಿ : ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಪೂಜೆಯ ವೇಳೆಗೆ  ಲಕ್ಷಗಟ್ಟಲೆ ಕಟ್ಟದಪ್ಪವನ್ನು (ಕಟಾಹಾಪೂವ) ಸಮರ್ಪಿಸಲಾಯಿತು.

 ಲಕ್ಷಗಟ್ಟಲೆ ಕಟ್ಟದಪ್ಪಗಳನ್ನು ಸಿದ್ದಪಡಿಸು ವುದಕ್ಕಾಗಿ ಶನಿವಾರ ಮುಂಜಾನೆ 2.30ರಿಂದ ದೇಗುಲದ ಪ್ರಾಂಗಣದಲ್ಲಿ ಬಾಣಸಿಗ ಯೋಗೀಶ್ ರಾವ್ ನೇತೃತ್ವದಲ್ಲಿ ಕೆಲಸ ಕಾರ್ಯವನ್ನು ಆರಂಭಿಸಿದ್ದರು.

  ಮುಂಜಾನೆಯ ವೇಳೆಗೆ ಶ್ರೀ ದೇವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿ ತೆಂಗಿನಕಾಯಿಗಳನ್ನು ತುರಿದು, ಬೆಲ್ಲ ಅಕ್ಕಿಯನ್ನು ಕಡೆದು ದ್ರವೀಕೃತ ಹಿಟ್ಟು ತಯಾರಿ ಬೇಕಾದವುಗಳನ್ನೆಲ್ಲಾ ಸೇರಿಸಿಕೊಂಡು ದೊಡ್ಡ ದೊಡ್ಡ ಬಾಣಲೆಯಲ್ಲಿ ಬಾಣಸಿಗರು ಮಹಾಗಣಪ ದೇವರಿಗೆ ಪ್ರಿಯವಾದ ಅಪ್ಪಗಳನ್ನು ಸಂಜೆಯೊಳಗಾಗಿ ಸಿದ್ಧ ಪಡಿಸಿದ್ದಾರೆ. ಸುತ್ತಾರೆ.

ಶನಿವಾರ ರಾತ್ರಿ ಪೂಜೆಯ ವೇಳೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ ನಡೆದು ಶ್ರೀ ಮಹಾಗಣಪ ದೇವರ ಎದುರು ಹಾಕಿಡುವ ರಾಶಿಯ ಅಪ್ಪಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರತಿ ಸೇವಾದಾರರಿಗೆ ವಿತರಿಸಲಾಯಿತು.

  ಶ್ರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸ್ ಕಿನ್ಯಕ್ಕಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕ ಹೆಗ್ಡೆ,  ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಕಾಪು ಉಪ ತಹಶೀಲ್ದಾರ್ ಅಶೋಕ್ ಕೋಟೆಕಾರ್ ಹಾಗೂ ಊರ ಗುರಿಕಾರರು, ಅರ್ಚಕರು, ಸಿಬ್ಬಂದಿವರ್ಗ, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.