• Home  
  • ಶಿರ್ವ : ಬೈಕಿನಿಂದ ಬಿದ್ದು ವ್ಯಕ್ತಿ ಮೃತ್ಯು(Shirva: Man dies after falling from bike)
- ಅಪರಾಧ

ಶಿರ್ವ : ಬೈಕಿನಿಂದ ಬಿದ್ದು ವ್ಯಕ್ತಿ ಮೃತ್ಯು(Shirva: Man dies after falling from bike)

Share: ಶಿರ್ವ : ಬೈಕಿನಿಂದ ಬಿದ್ದು ವ್ಯಕ್ತಿ ಮೃತ್ಯು (Shirva) ಶಿರ್ವ : ಅಂಗಡಿಯಿಂದ ಸಾಮಾನು ತರಲು ಹೋಗುವಾಗ ಬೈಕಿನಿಂದ ರಸ್ತೆಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೂಡುಬೆಳ್ಳೆ ಸಮೀಪದ ತಿರ್ಲಪಲ್ಕೆ ಎಂಬಲ್ಲಿ ಘಟಿಸಿದೆ.  ಮೃತ ವ್ಯಕ್ತಿ ರಮೇಶ್‌ (54) ರವರು ಮಣಿಪುರದಲ್ಲಿ ಅಂಚೆ ಪೇದೆಯಾಗಿ ಸುಮಾರು 30 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು.  ಅಂಗಡಿಯಿಂದ ಸಾಮಾನು ತರಲು ಬೈಕಿನಲ್ಲಿ ಕನರಾಡಿ ಮನೆಯಿಂದ ಮೂಡುಬೆಳ್ಳೆಗೆ ಹೊರಟು ಹೋಗುವಾಗ ತಿರ್ಲಪಲ್ಕೆ ಎಂಬಲ್ಲಿ ಬೈಕಿನಿಂದ ಬಿದ್ದಿರುತ್ತಾರೆ. ಕೂಡಲೇ ಉಡುಪಿ […]

(Shirva) ಶಿರ್ವ : ಅಂಗಡಿಯಿಂದ ಸಾಮಾನು ತರಲು ಹೋಗುವಾಗ ಬೈಕಿನಿಂದ ರಸ್ತೆಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೂಡುಬೆಳ್ಳೆ ಸಮೀಪದ ತಿರ್ಲಪಲ್ಕೆ ಎಂಬಲ್ಲಿ ಘಟಿಸಿದೆ.

 ಮೃತ ವ್ಯಕ್ತಿ ರಮೇಶ್‌ (54) ರವರು ಮಣಿಪುರದಲ್ಲಿ ಅಂಚೆ ಪೇದೆಯಾಗಿ ಸುಮಾರು 30 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು.

 ಅಂಗಡಿಯಿಂದ ಸಾಮಾನು ತರಲು ಬೈಕಿನಲ್ಲಿ ಕನರಾಡಿ ಮನೆಯಿಂದ ಮೂಡುಬೆಳ್ಳೆಗೆ ಹೊರಟು ಹೋಗುವಾಗ ತಿರ್ಲಪಲ್ಕೆ ಎಂಬಲ್ಲಿ ಬೈಕಿನಿಂದ ಬಿದ್ದಿರುತ್ತಾರೆ. ಕೂಡಲೇ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಘೋಷಿಸಿದ್ದಾರೆ.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.