• Home  
  •  ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ (Shila muhurta for the work of circumambulation of Hirebettu Sri Mahalingeshwar temple)
- ಧಾರ್ಮಿಕ

 ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ (Shila muhurta for the work of circumambulation of Hirebettu Sri Mahalingeshwar temple)

Share: ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ   ಜೀರ್ಣೋದ್ಧಾರದ ವಿನ್ಯಾಸ ಪರಿಚಯಿಸುವ ವಾಕ್‌ ಥ್ರೂ ವೀಡಿಯೊ ಅನಾವರಣ (Hirebettu) ಹಿರೇಬೆಟ್ಟು: ಭಟ್ರಕೋಡಿ–ಹಿರೇಬೆಟ್ಟಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಪ್ರಾರಂಭ ಹಾಗೂ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.   ಕ್ಷೇತ್ರದ ತಂತ್ರಿವರ್ಯರಾದ ಡಾ. ಸತ್ಯಕೃಷ್ಣ ಭಟ್, ಮಂಗಳೂರು ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ […]

(Hirebettu) ಹಿರೇಬೆಟ್ಟು: ಭಟ್ರಕೋಡಿ–ಹಿರೇಬೆಟ್ಟಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಪ್ರಾರಂಭ ಹಾಗೂ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

  ಕ್ಷೇತ್ರದ ತಂತ್ರಿವರ್ಯರಾದ ಡಾ. ಸತ್ಯಕೃಷ್ಣ ಭಟ್, ಮಂಗಳೂರು ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು. ಧನುರ್ ಲಗ್ನದ ಸುಮುಹೂರ್ತದಲ್ಲಿ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ ನೆರವೇರಿಸಲಾಯಿತು.

  ಕಾರ್ಯಕ್ರಮದ ಅಂಗವಾಗಿ ಭ್ರಮರಾಂಬಿಕಾ ಮಹಿಳಾ ಭಜನಾ ಮಂಡಳಿ, ಕಬ್ಯಾಡಿ ಹಾಗೂ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪರ್ಕಳ ಇವರಿಂದ ಭಜನಾ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ವಿನ್ಯಾಸ ಹಾಗೂ ನಿರ್ಮಾಣದ ಸ್ವರೂಪವನ್ನು ಪರಿಚಯಿಸುವ ವಾಕ್‌ಥ್ರೂ ವೀಡಿಯೊವನ್ನು ಡಾ. ಸತ್ಯಕೃಷ್ಣ ಭಟ್ ಅವರು ಅನಾವರಣಗೊಳಿಸಿದರು.
  ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

  ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್, ಖಜಾಂಚಿ ಚಂದ್ರಶೇಖರ ನಾಯಕ್ ಹಾಗೂ ಸಮಿತಿಯ ಪ್ರಮುಖರಾದ ಜಯಪ್ರಕಾಶ್ ನಾಯಕ್, ಗುರುದಾಸ್ ಭಂಡಾರಿ, ಸೀತಾರಾಮ ಭಟ್, ಉಮೇಶ್ ಭಟ್, ದಿನೇಶ್ ಪ್ರಭು, ನಾರಾಯಣ ಪೂಜಾರಿ, ಉಮೇಶ್ ನಾಯಕ್, ವಸಂತರಾಯ ಪ್ರಭು, ಶೈಲೇಶ್, ಅಶೋಕ್ ನಾಯಕ್, ರಾಜೇಶ್ ಭಟ್, ಕಾಳಿದಾಸ ಭಂಡಾರಿ, ಶಂಕರ್ ನಾಯಕ್, ಶ್ರೀಧರ್ ನಾಯ್ಕ್, ಸುರೇಶ್ ನಾಯ್ಕ್, ಲಕ್ಷ್ಮೀಶ್ ಭಟ್, ಸುಧಾಕರ್ ಆಚಾರ್ಯ, ಶಾಮ್ ನಾಯ್ಕ್, ಗಣಪತಿ ಕಾಮತ್, ಕೃಷ್ಣ ನಾಯ್ಕ್, ಶ್ರೀಪತಿ ಭಟ್, ಕೇಶವ ಭಂಡಾರಿ, ಹರೀಶ್ ಶೆಟ್ಟಿ, ಶರತ್ ಹೆಗ್ಡೆ, ಮುರಳಿಧರ್ ಲಾಗ್ವಾಕರ್, ಸುಧಾಕರ್ ಲಾಗ್ವಾಕರ್, ಅಶೋಕ್ ಲಾಗ್ವಾಕರ್, ಮಣಿಕಂಠ ಭಟ್, ಶ್ರೀಧರ್ ಭಟ್, ಬಾಲಕೃಷ್ಣ ಭಟ್, ವಿಕ್ರಂ ಭಟ್, ಸುಧೀರ್ ಪೂಜಾರಿ ಹಾಗೂ ಮಹೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  ಸಮಿತಿಯ ಸದಸ್ಯರು, ಆಡಳಿತ ಮೊಕ್ತೇಸರರು, ತಂತ್ರಿವರ್ಗ, ಅರ್ಚಕ ವೃಂದ ಹಾಗೂ ಊರಿನ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.