ಕಾಪು: ಜ್ಞಾನ ದೀಪ ಶಿಕ್ಷಕರ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಕಾಪು ಯೋಜನಾಧಿಕಾರಿಯವರ ಕಛೇರಿಯಲ್ಲಿ ನಡೆದ ಸಭೆ
(Kaup) ಕಾಪು : ಕಾಪು ತಾಲೂಕಿನ ಜ್ಞಾನ ದೀಪ ಶಿಕ್ಷಕರ ಸಭೆಯು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರ ಕಾಪುವಿನ ಕಛೇರಿಯಲ್ಲಿನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ, ಶಾಲೆಗಳನ್ನು ಆಯ್ಕೆ ಮಾಡಿ ಶಿಕ್ಷಕರನ್ನು ನೀಡಿ ತಿಂಗಳಿಗೆ ಗೌರವ ಧನ ವನ್ನು ಶ್ರೀ ಕ್ಷೇತ್ರ ದಿಂದ ನೀಡಿಕೊಂಡು ಬರುತ್ತಿದೆ.
ಆ ಪ್ರಯುಕ್ತ ಕಾಪು ತಾಲೂಕಿನ ಜ್ಞಾನ ದೀಪ ಶಿಕ್ಷಕರ ಸಭೆ ತಾಲೂಕು ಯೋಜನಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದ್ದು, ಯೋಜನಾಧಿಕಾರಿಯವರು ಸಂಸ್ಥೆ ನಡೆದು ಬಂದ ಬಗ್ಗೆ ಮತ್ತು ಶಿಕ್ಷಕರಿಗೆ ಶಾಲೆಗಳಲ್ಲಿ ನಡೆಯುವ ತರಗತಿ ಗಳ ಬಗ್ಗೆ, ತಮ್ಮ ಶಾಲೆಗಳಿಗೆ ಮೂಲ ಭೂತ ಸೌಕರ್ಯಗಳ ಬಗ್ಗೆ ವಿಮರ್ಶೆ ನಡೆಸಲಾಯಿತು.
ಮಾತೃಶ್ರೀ ಹೇಮಾವತಿ ಅಮ್ಮನವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಿರುವ ಸಮವಸ್ತ್ರ ವನ್ನು ನೀಡಲಾಯಿತು.
ಸಭೆಯಲ್ಲಿ ಭಾಗವಹಿಸಿದ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

