• Home  
  • ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ (Goldsmith Y. Raghavendra Acharya passes away)
- ನಿಧನ

ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ (Goldsmith Y. Raghavendra Acharya passes away)

Share: ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ ಉಚ್ಚಿಲದಲ್ಲಿ 6 ದಶಕಗಳಿಗೂ ಹೆಚ್ಚಿನ ಕಾಲ ಚಿನ್ನಾಭರಣ ತಯಾರಿಯ ಮಳಿಗೆ ಹೊಂದಿದ್ದರು. (Padubidri) ಪಡುಬಿದ್ರಿ  : ಖ್ಯಾತ ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ (90) ಅಲ್ಪಕಾಲದ ಅಸೌಖ್ಯದಿಂದ ಪಣಿಯೂರಿನ ಮನೆಯಲ್ಲಿ ಬುಧವಾರ ನಿಧನ ಹೊಂದಿದರು.   ಮೃತರು ವೈದ್ಯರಾದ ಡಾ. ವೈ. ಯಶವಂತ ಆಚಾರ್ಯ ದಾವಣಗೆರೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿಯನ್ನು ಆಗಲಿದ್ದಾರೆ.   ಸುಮಾರು 6 ದಶಕಗಳಿಗೂ ಹೆಚ್ಚಿನ ಕಾಲ ಉಚ್ಚಿಲದಲ್ಲಿ ಚಿನ್ನಾಭರಣ ತಯಾರಿಯ ಜ್ಯುವೆಲ್ಲರ್ಸ್ […]

ಉಚ್ಚಿಲದಲ್ಲಿ 6 ದಶಕಗಳಿಗೂ ಹೆಚ್ಚಿನ ಕಾಲ ಚಿನ್ನಾಭರಣ ತಯಾರಿಯ ಮಳಿಗೆ ಹೊಂದಿದ್ದರು.

(Padubidri) ಪಡುಬಿದ್ರಿ  : ಖ್ಯಾತ ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ (90) ಅಲ್ಪಕಾಲದ ಅಸೌಖ್ಯದಿಂದ ಪಣಿಯೂರಿನ ಮನೆಯಲ್ಲಿ ಬುಧವಾರ ನಿಧನ ಹೊಂದಿದರು.

  ಮೃತರು ವೈದ್ಯರಾದ ಡಾ. ವೈ. ಯಶವಂತ ಆಚಾರ್ಯ ದಾವಣಗೆರೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿಯನ್ನು ಆಗಲಿದ್ದಾರೆ.

  ಸುಮಾರು 6 ದಶಕಗಳಿಗೂ ಹೆಚ್ಚಿನ ಕಾಲ ಉಚ್ಚಿಲದಲ್ಲಿ ಚಿನ್ನಾಭರಣ ತಯಾರಿಯ ಜ್ಯುವೆಲ್ಲರ್ಸ್ ಹೊಂದಿದ್ದರು. ಬೆಳಪು ಸಿ. ಎ. ಬ್ಯಾಂಕ್ ನಲ್ಲಿ ಜ್ಯುವೆಲ್ ಅಪ್ರೈಸರ್ ಆಗಿದ್ದರು. ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಎಲ್ಲೂರು ಇದರ ಮಾಜಿ ಅಧ್ಯಕ್ಷರಾಗಿ, ಹಾಲಿ ಗೌರವಾಧ್ಯಕ್ಷರಾಗಿ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಯಕ್ಷಗಾನ ಪೋಷಕರಾಗಿದ್ದರು.

  ಉಡುಪಿ ಜಿಲ್ಲಾ ವಿಶ್ವಕರ್ಮ ಸಮ್ಮೇಳನ ಸಹಿತ ಹಲವೆಡೆ ಸ್ವರ್ಣಶಿಲ್ಪಿಯಾಗಿ ಸಮ್ಮಾನಿತರಾಗಿದ್ದರು. ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದಲ್ಲಿ ಸಕ್ರಿಯರಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.