ಸಿದ್ದರಾಮಯ್ಯ ಆಡಳಿತದಲ್ಲಿ ಕರಾವಳಿ ಅಭಿವೃದ್ಧಿ ಶೂನ್ಯ : ಗುರ್ಮೆ ಸುರೇಶ್ ಶೆಟ್ಟಿ
ಕಾಪುವಿನಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯೆ
(Kaup) ಕಾಪು : ಸಿದ್ದರಾಮಯ್ಯರಿಂದ ಈ ಅವಧಿಯಲ್ಲಿ ಕರಾವಳಿಯ ಅಭಿವೃದ್ಧಿ ಆಗಿಲ್ಲ. ಬಜೆಟ್ ಸಂದರ್ಭ ಉಭಯ ಜಿಲ್ಲೆಯ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಈಗ ಅಧಿಕಾರ ಡಿ.ಕೆ .ಶಿವಕುಮಾರ್ ರವರಿಗೆ ಹಸ್ತಾಂತರಿಸಿದ್ದಾರೆ ಇದು ಕೆಲವರಿಗೆ ಸಿಹಿ ಕಹಿಯ ಅನುಭವವಾಗಿದೆ ಎಂದು ಶುಕ್ರವಾರ ಸಂಜೆ ಕಾಪುವಿನಲ್ಲಿಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಕರಾವಳಿಯ ತಾತ್ಸಾರದ ಬಗ್ಗೆ ವಿಧಾನ ಸಭೆಯಲ್ಲಿ ವೈಯಕ್ತಿಕ ನೆಲೆಯಲ್ಲೂ ಗಮನಸೆಳೆಯಾಗಿದೆ. ಡಿಕೆಶಿಯವರಿಗೆ ಕರಾವಳಿಯ ಬಗ್ಗೆ ಸದಭಿಪ್ರಾಯವಿದೆ. ಈ ಬಾರಿಯಾದರೂ ಕರಾವಳಿಯ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಕಳಕಳಿಯ ವಿನಂತಿ ಎಂದರು.
ಕಾಂಗ್ರೆಸ್ಸಿಗೆ ಬಹುಮತವಿದೆ. ಸಿದ್ದರಾಮಯ್ಯನವರಿಗೆ ಎಲ್ಲರನ್ನೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಗುಣವಿದೆ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಮಾಡಿದ 7 ಲಕ್ಷ ಕೋಟಿಯಷ್ಟು ಸಾಲವಿದೆ. ಮುಂದೆ ಡಿಕೆಶಿಯ ಮೂಲಕವೂ ರಾಜ್ಯ ದಿವಾಳಿಯತ್ತ ಸಾಗುವುದು ಖಚಿತ.
ಯಾರು ಅಧಿಕಾರ ಪಡೆದರೂ, ಮೂಲಭೂತ ಸೌಕರ್ಯಗಳು ದೊರೆತು ಕಲ್ಯಾಣ ಕರಾವಳಿ ಅಭಿವೃದ್ಧಿ ಆಗಲಿ ಎನ್ನುವುದು ಕರಾವಳಿರ ಆಶಯ ಎಂದೂ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
