• Home  
  • ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿ ನೆಟ್ಟು ಪ್ರತಿಭಟನೆ
- ಕರಾವಳಿ

ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿ ನೆಟ್ಟು ಪ್ರತಿಭಟನೆ

Share: ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ನಗರಿಹಳ್ಳ ಕೆರೆ ಸಮೀಪದ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿಗೈದು ಪ್ರತಿಭಟನೆ ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನಡುವಿನ ನಗರಿಹಳ್ಳ ರಸ್ತೆ ಕೆಸರಿನಿಂದ ಆವರಿಸಿದ್ದು, ಅತ್ತ ಸಾಲಿಗ್ರಾಮ ಪ.ಪಂ ಇತ್ತ ಕೋಟತಟ್ಟು ಗ್ರಾಮ ಪಂಚಾಯತ್ ಇದರ ಬಗ್ಗೆ ಮುತುವರ್ಜಿ ವಹಿಸದೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.  ಶೇಕಡಾ ೯೦ರಷ್ಟು ರಸ್ತೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯನ್ನು ಹೊಂದಿದ್ದು, ಕಳೆದ ಸಾಕಷ್ಟು ವರ್ಷಗಳಿಂದ  ರಸ್ತೆ ಅವ್ಯವಸ್ಥೆ ಆಗರವಾಗಿ ಜನ ಸಾಮಾನ್ಯರಿಗೆ ಸಂಚರಿಸಲು […]

ಸಾಲಿಗ್ರಾಮ – ಪಾರಂಪಳ್ಳಿ ಸಂಪರ್ಕಿಸುವ ನಗರಿಹಳ್ಳ ಕೆರೆ ಸಮೀಪದ ರಸ್ತೆ ಅವ್ಯವಸ್ಥೆ ವಿರುದ್ಧ ನಾಟಿಗೈದು ಪ್ರತಿಭಟನೆ

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನಡುವಿನ ನಗರಿಹಳ್ಳ ರಸ್ತೆ ಕೆಸರಿನಿಂದ ಆವರಿಸಿದ್ದು, ಅತ್ತ ಸಾಲಿಗ್ರಾಮ ಪ.ಪಂ ಇತ್ತ ಕೋಟತಟ್ಟು ಗ್ರಾಮ ಪಂಚಾಯತ್ ಇದರ ಬಗ್ಗೆ ಮುತುವರ್ಜಿ ವಹಿಸದೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

 ಶೇಕಡಾ ೯೦ರಷ್ಟು ರಸ್ತೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯನ್ನು ಹೊಂದಿದ್ದು, ಕಳೆದ ಸಾಕಷ್ಟು ವರ್ಷಗಳಿಂದ  ರಸ್ತೆ ಅವ್ಯವಸ್ಥೆ ಆಗರವಾಗಿ ಜನ ಸಾಮಾನ್ಯರಿಗೆ ಸಂಚರಿಸಲು ಕ್ಲಿಷ್ಟಕರವಾಗಿದೆ.

 ಇದೊಂದು ಸಂಪರ್ಕ ರಿಂಗ್ ರೋಡ್ ಆಗಿದ್ದು, ಕೋಟತಟ್ಟು  ವ್ಯಾಪ್ತಿಯಲ್ಲಿರುವ ನಗರಿಹಳ್ಳದಿಂದ ಆರಂಭಗೊಂಡು ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಪಾರಂಪಳ್ಳಿ ತೋಡ್ಕಟ್ಟು ಭಾಗವನ್ನು ಸಂಪರ್ಕಿಸುತ್ತದೆ.

ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸಾಕಷ್ಟು ಬಾರಿ ಪ.ಪಂ ಮನವಿ ನೀಡಿದರೂ ಇದರ ಬಗ್ಗೆ ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದ್ದಾರೆ ಎಂದು ಇಲ್ಲಿನ ಪರಿಸರದ ಸಾರ್ವಜನಿಕ ಆರೋಪಿಸಿದ್ದಾರೆ.

ಕೆಸರುಮಯ ರಸ್ತೆಯಲ್ಲಿ ನಾಟಿಗೈದರು!

ಮಂಗಳವಾರ ಮುಂಜಾನೆ ಈ ಭಾಗದ ಒಂದಿಷ್ಟು ಮಹಿಳೆಯರು ಈ ಕೆಸರು ಮಯ ರಸ್ತೆಯಲ್ಲಿ ಭತ್ತದ ನಾಟಿಗೈದು ಪ್ರತಿಭಟಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿತು.

ಸಾಕಷ್ಟು ಕೃಷಿ ಭೂಮಿ ಹಾಗೂ ಮನೆಗಳನ್ನು ಹೊಂದಿಕೊಂಡಿರುವ ಈ ನಗರಿಹಳ್ಳ ರಸ್ತೆಗೆ ಪ.ಪಂ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ ಅನುಸರಿಸುವುದರ ವಿರುದ್ಧ ಇಲ್ಲಿನ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

 ಈ ನಗರಿಹಳ ರಸ್ತೆ ತನ್ನದೆ ಆದ ವೈಶಿಷ್ಠವನ್ನು ಹೊಂದಿದೆ. ಏಕೆಂದರೆ ಇಲ್ಲಿನ ಈ ರಸ್ತೆ ಸಾಕಷ್ಟು ಮನೆ, ಕೃಷಿ ಭೂಮಿಗಳನ್ನು ಸಂಪರ್ಕಿಸುವುದಲ್ಲದೆ ಇದೊಂದು ಉತ್ತಮವಾದ ರಿಂಗ್ ರೋಡ್ ಆಗಿದೆ.

 ಸಾಮಾನ್ಯವಾಗಿ ಜನಪ್ರತಿನಿಧಿ ಇದರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕಿದ್ದು, ಸ್ಥಳೀಯಾಡಳಿತ ನಿರ್ಲಕ್ಷಕ್ಕೆ ತುತ್ತಾಗಿದೆ. ನಗರೋತ್ಧಾನದಿಂದ ಆಗಬೇಕಾದ ಕಾಮಗಾರಿಯನ್ನು ಈ ಭಾಗಕ್ಕೆ ನೀಡಿಲ್ಲ.

ಕಳೆದ ವರ್ಷ ಈ ರಸ್ತೆಗೆ ಬಂದ ಹಣವನ್ನು ಶಾಸಕರ ಅನುದಾನವನ್ನು ಬೇರೆಡೆಯ ರಸ್ತೆಗೆ ಸ್ಥಳಾಂತರಿಸಿದೆ. ಹೀಗಾದರೆ ಇಲ್ಲಿ ಸಂಚರಿಸುವವರ ಪಾಡೇನು ಶೀಘ್ರದಲ್ಲಿ ಈ ರಸ್ತೆ ಅಭಿವೃದ್ಧಿಗೊಳಿಸಲು ಮನವಿ ಮಾಡುತ್ತೇನೆ ಎಂದು ಪಾರಂಪಳ್ಳಿಯ ನಿವಾಸಿ ಬಾಲಕೃಷ್ಣ ನಕ್ಷತ್ರಿ   ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.