ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ
ಉಚ್ಚಿಲ: ದ.ಕ.ಮೊಗವೀರ ಮಹಾಜನ ಸಂಘದ (Mogveera Mahajana Sangha) ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ (Uchila Shree Mahalaxmi Temple) ನವರಾತ್ರಿ ಪ್ರಯಕ್ತ ನಡೆದ ಉಚ್ಚಿಲ ದಸರಾ-2023ರ ದಸರಾ ದಿನದಂದು ಶೋಭಾಯಾತ್ರೆ ಮತ್ತು ದಶ ಮೂರ್ತಿಗಳ ವಿಸರ್ಜನೆ ಶಿಲ್ಪಾ ಗಂಗಾಧರ ಸುವರ್ಣ ಮಾಲಿಕತ್ವದ ಕಾಪುವಿನ ದಿ ಓಶನ್ ಬೀಚ್ ರಿಸಾರ್ಟ್ (The Ocen Beach Resort Kaup) ಬಳಿಯ ಸಮುದ್ರದಲ್ಲಿ ಬುಧವಾರ ಬೆಳಗ್ಗಿನ ಜಾವ ೩ ಗಂಟೆಗೆ ಜಲಸ್ಥಂಭನ ಗೊಳಿಸಲಾಯಿತು.
ದೇಗುಲದ ಪ್ರಧಾನ ಅರ್ಚಕರಾದ ವೇ|ಮೂ| ರಾಘವೇಂದ್ರ ಉಪಾಧ್ಯಾಯರವರು ವಿಸರ್ಜನಾ ಪೂಜೆಯನ್ನು ಜರಗಿಸಿದರು. ಇದೇ ಸಂದರ್ಭ ಗಣ್ಯರನ್ನು ಗೌರವಿಸಲಾಯಿತು.
ಉಚ್ಚಿಲ ದಸರಾ ರೂವಾರಿ ಡಾ. ಜಿ. ಶಂಕರ್ (Dr. G Shankar), ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ(MLA Gurme Suresh Shetty), ಉಡುಪಿ ಯಶ್ಪಾಲ್ ಸುವರ್ಣ (MLA Yashpal Suvarna), ಉದ್ಯಮಿ ಬಂಜಾರಾ ಪ್ರಕಾಶ್ ಶೆಟ್ಟಿ (Banjara Prakash Shetty), ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಮತ್ತಿತರ ಗಣ್ಯರು ಶೋಭಾಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
೫೦ಕ್ಕೂ ಅಧಿಕ ವಿಶೇಷವಾದ ಟ್ಯಾಬ್ಲೋಗಳು, ದಶ ವಿಗ್ರಹಗಳನ್ನೊಳಗೊಂಡ ೧೦ ವಿಶೇಷ ಟ್ಯಾಬ್ಲೋಗಳೊಂದಿಗೆ ಶೋಭಾಯಾತ್ರೆ ನಡೆಯಿತು.
ವಿವಿಧ ಭಜನಾ ತಂಡಗಳು, ಮೀನು, ವಿವಿಧ ವೇಷ ಭೂಷಣಗಳು, ಹುಲಿವೇಷಗಳು, ಚೆಂಡೆ ಬಳಗ, ನಾದ ಸ್ವರ, ನಾಸಿಕ್ ಬ್ಯಾಂಡ್ ತಂಡಗಳು ಸಹಿತ ಟ್ಯಾಬ್ಲೋ ಸೇರಿದಂತೆ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಸೇರಿದ್ದ ಜನರ ಮನಸೂರೆಗೊಳಿಸಿತು.
ಶೋಭಾಯಾತ್ರೆಯಲ್ಲಿ ಸಾಮಾಜಿಕ ಪರಿಕಲ್ಪನೆಯ ೪ ಲೈವ್ ಟ್ಯಾಬ್ಲೋಗಳು, ಸ್ವಚ್ಛತಾ ಟ್ಯಾಬ್ಲೋ, ಆರೋಗ್ಯಕ್ಕೆ ಸಂಭಂಧಿಸಿದ ಟ್ಯಾಬ್ಲೋಗಳು ಜನ ಮೆಚ್ಚಿಗೆ ಪಡೆದಿದೆ.
ಸಮಿತಿಯ ತೀರ್ಮಾನದಂತೆ ಈ ಬಾರಿ ದುಂದು ವೆಚ್ಚ ಮಾಡದೆ ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಿನ ದಸರಾ ಮಹೋತ್ಸವ ನಡೆಸಲಾಯಿತು.
ಭಾರೀ ಗಾತ್ರದ ಅನೆ ಮತ್ತು ಅಂಬಾರಿಯನ್ನು (Ambari) ಇರಿಸಿ ಅಂಬಾರಿಯಲ್ಲಿ ಮಹಾಲಕ್ಷ್ಮೀ ದೇವರ ಬಲಿಮೂತಿಯನ್ನು ಹೊತ್ತುಕೊಂಡು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಶೋಭಾಯಾತ್ರೆಗೆ ರಂಗು ತಂದಿದೆ. ಫೈಬರ್ ಮತ್ತು ಮೆಟಲ್ ಬಳಸಿ ನಿರ್ಮಿಸಲಾಗಿರುವ ಆನೆಯು ಅಂಬಾರಿ ಸಹಿತವಾಗಿ ೧ ಟನ್ನಷ್ಟು ತೂಕ ಹೊಂದಿದ್ದು, ಸುಮಾರು ೧೫ ಅಡಿ ಎತ್ತರವಿತ್ತು.
ಮಹಾಲಕ್ಷ್ಮೀ ದೇವಸ್ಥಾನದ ದ್ವಾರದ ಬಳಿ ಶಾರದಾ ಮಾತೆ ಮತ್ತು ನವದುರ್ಗೆಯರಿಗೆ ಪುಷ್ಪಾರ್ಚನೆ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲದಿಂದ ಎರ್ಮಾಳು-ಉಚ್ಚಿಲ-ಮೂಳೂರು-ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್ವರೆಗೆ ಶೋಭಾ ಯಾತ್ರೆ ನಡೆಯಿತು.
ಶೋಭಾಯಾತ್ರೆಗೆ ಉಚ್ಚಿಲದಿಂದ ಎರ್ಮಾಳು ಹಾಗೂ ಎರ್ಮಾಳಿನಿಂದ ಕೊಪ್ಪಲಂಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನಸಾಗರವೇ ಸೇರಿತ್ತು. ಶೋಭಾ ಯಾತ್ರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.
ಕಾಶಿಯ ಗಂಗಾರತಿ ವಿಶೇಷ (Varanashi Gangarathi)
ಉತ್ತರ ಪ್ರದೇಶದ ಗಂಗಾನದಿಯ ತಟದಲ್ಲಿ ನಡೆಸುವ ಗಂಗಾರತಿ ಉಚ್ಚಿಲ ದಸರಾದಲ್ಲಿ ಬೆಳಗಿಸುವ ಮೂಲಕ ಸೇರಿದ್ದ ಭಕ್ತರು ಕಣ್ತುಂಬಿಕೊಂಡರು. ಕಾಶಿಯಿಂದ ಉಚ್ಚಿಲ ದಸರಾ ಕಾರ್ಯಕ್ರಮ ಮಾಡಲೆಂದೇ ಅಲ್ಲಿಯ ಪುರೋಹಿತರನ್ನು ಕಡೆಸಿ ಗಂಗಾರತಿ ಮಾಡಿಸಲಾಯಿತು. ಇದು ನೆರೆದ ಜನರನ್ನು ಭಕ್ತಿ ಪರವಶರನ್ನಾಗಿ ಮಾಡಿದೆ.
ದೇವಳದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ , ಉಡುಪಿ ಶಾಸಕ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉಚ್ಚಿಲ ಬಡಾಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಶಿಲ್ಪಾ ಗಂಗಾಧರ ಸುವರ್ಣ, ಗಂಗಾಧರ ಸುವರ್ಣ ಕಾಪು, ಎಂಆರ್ಜಿ ಗ್ರೂಪ್ ಅಧ್ಯಕ್ಷರಾದ ಬಂಜಾರ ಪ್ರಕಾಶ್ ಶೆಟ್ಟಿ, ಮಹಾಜನ ಸಂಘದ ಉಪಾಧ್ಯಕ್ಷರಾದ ಸುಭಾಶ್ಚಂದ್ರ ಕಾಂಚನ್, ಗಂಗಾಧರ ಸುವರ್ಣ ಎರ್ಮಾಳು, ದಿನೇಶ್ ಎರ್ಮಾಳು, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ದ.ಕ.ಮೊಗವೀರ ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಬೋಳೂರು, ಕಾಪು ನಾಲ್ಕು ಪಟ್ಣ ಸಂಯುಕ್ತ ಸಭಾದ ಅಧ್ಯಕ್ಷರಾದ ಮನೋಜ್ ಕಾಂಚನ್, ಕಾಪು ನಾಲ್ಕುಪಟ್ಣ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣ ಕರ್ಕೇರ, ದೇಗುಲದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಮೋಹನ್ ಬೇಂಗ್ರೆ, ಶಂಕರ್ ಸಾಲ್ಯಾನ್, ರವೀಂದ್ರ ಶ್ರೀಯಾನ್, ದಿನೇಶ್ ಆರ್ ಕೋಟ್ಯಾನ್, ವಿಠಲ ಕರ್ಕೇರ, ಅನಿಲ್ ಕುಮಾರ್, ಸಂಜೀವ ಮೆಂಡನ್, ಪ್ರಮುಖ ಗಣ್ಯರಾದ ಹರಿಯಪ್ಪ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್, ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ, ಬೆಣ್ಣೆಕುದ್ರು ಕ್ಷೇತ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ಕೋಟ, ಗಣೇಶ್ ಉದ್ಯಾವರ, ನಯನಾ ಗಣೇಶ್, ಪ್ರಸಾದ್ರಾಜ್ ಕಾಂಚನ್, ಮೊದಲಾದವರು ಉಪಸ್ಥಿತರಿದ್ದರು.
