Tag: accident

ಅಪರಾಧ

ಕಲಬುರ್ಗಿಯಲ್ಲಿ ಭೀಕರ ಅಪಘಾತ; ಮಗು ಸೇರಿ ಒಂದೇ ಕುಟುಂಬದ 6 ಜನರು ದುರ್ಮರಣ (Kalaburgi Road Accident Six Death)

ಕಲಬುರ್ಗಿಯಲ್ಲಿ ಭೀಕರ ಅಪಘಾತ; ಮಗು ಸೇರಿ ಒಂದೇ ಕುಟುಂಬದ 6 ಜನರು ದುರ್ಮರಣ (Kalaburgi) ಕಲಬುರಗಿ: ಟಂಟಂ ಹಾಗೂ ಟ್ಯಾಂಕರ್ ಮಧ್ಯೆ ಡಿಕ್ಕಿಯಾಗಿ ಮೂರು ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಘಟನೆಯಲ್ಲಿ ನಜ್ಜಿನ್ ಬೇಗಂ(28), ಬೀಬಿ ಫಾತಿಮಾ (12), ಅಬೂಬಕ್ಕರ್ (4), ಬೀಬಿ ಮರಿಯಮ್ ( 3 ತಿಂಗಳ ಮಗು), ಹಮ್ಮದ್ ಪಾಷಾ (20), […]

ಅಪರಾಧ

ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ ಬಂಧನ

ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ ಬಂಧನ ಬೆಂಗಳೂರು: ಕನ್ನಡ ನಟ ನಾಗಭೂಷಣ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಘಟನೆ ಬಳಿಕ ನಟ ನಾಗಭೂಷಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಮಹಿಳೆ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ. ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ ಅವರು ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ನಾಗಭೂಷಣ ಅವರ […]

ಅಪರಾಧ

ಮಡಿಕೇರಿಯಲ್ಲಿ ರಸ್ತೆ ಅಪಘಾತ – ಉಡುಪಿ ಮೂಲದ ಮೆಡಿಕಲ್‌ ವಿದ್ಯಾರ್ಥಿ ಮೃತ್ಯು

ಮಡಿಕೇರಿಯಲ್ಲಿ ರಸ್ತೆ ಅಪಘಾತ – ಉಡುಪಿ ಮೂಲದ ಮೆಡಿಕಲ್‌ ವಿದ್ಯಾರ್ಥಿ ಮೃತ್ಯು ಮಡಿಕೇರಿ, ಸೆ 21: ಮಡಿಕೇರಿಯ ಕಾಟಕೇರಿ ಬಳಿ ಹಾಲಿನ ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಮಡಿಕೇರಿ ಮೆಡಿಕಲ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಉಡುಪಿ ಮೂಲದ ವಿಜೇಶ್‌ ಮೃತ ಯುವಕ. ಬುಧವಾರ ಸಂಜೆ ಉಡುಪಿಯಿಂದ ವಿಜೇಶ್‌ ಮತ್ತು ಶಿವಾನಂದ್‌ ಎಂಬವರು ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದು, ಈ ವೇಳೆ ಕಾಟಕೇರಿ ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ […]

ಅಪರಾಧ

ಮೂಲ್ಕಿಯಲ್ಲಿ ಭೀಕರ ಬೈಕ್-ಕಾರು ಅಪಘಾತ – ಯುವತಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರೆ ಕೊನೆಯುಸಿರೆಳೆದು ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಬಳಿ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹೋಂಡಾ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಬೈಕನ್ನು ದೂಡಿಕೊಂಡು ಹೋಗಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹಸವಾರ ಪ್ರೀತಿಕಾ ಶೆಟ್ಟಿ […]

ಅಪರಾಧ

  ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದ ಬೈಕ್-ಬಸ್ ಮುಖಾಮುಖಿ ಡಿಕ್ಕಿಯಲ್ಲಿ ಯೂಟ್ಯೂಬ್ ಬ್ಲಾಗರ್ ದುರ್ಮರಣ

ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದ ಬೈಕ್-ಬಸ್ ಮುಖಾಮುಖಿ ಡಿಕ್ಕಿಯಲ್ಲಿ ಯೂಟ್ಯೂಬ್ ಬ್ಲಾಗರ್ ದುರ್ಮರಣ ಉಡುಪಿ:  ನಂದಿಕೂರು ಮುದರಂಗಡಿ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಬೈಕ್ ಹಾಗೂ ಬಸ್ಸಿನ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕ ಕಾರ್ಕಳ ಅಜೆಕಾರು ಬೊಂಡು ಕುಮೇರಿ ನಿವಾಸಿ ಅಶ್ವಿತ್ ಶೆಟ್ಟಿ (34) ಎಂದು ತಿಳಿದುಬಂದಿದೆ.  ಯೂಟ್ಯೂಬ್ ಬ್ಲಾಗರ್ ಆಗಿರುವ ಅಶ್ವಿತ್ ಶೆಟ್ಟಿ   ಗೂಡ್ಸ್ ಟೆಂಪೋ ಬಾಡಿಗೆ ಮಾಡೆಸುತ್ತಿದ್ದರು. ಇತ್ತೀಚಿಗೆ ಇವರು ಹೊಸ […]

ಅಪರಾಧ ವಿಡಿಯೋ

ನಂದಿ ಕೂರು ಮುದರಂಗಡಿ ಕ್ರಾಸ್ ಬಳಿ ಬಸ್ಸ್  ಬೈಕ್  ಭೀಕರ ಅಪಘಾತ: ಬೈಕ್‌ ಸವಾರ ಗಂಭೀರ

ನಂದಿ ಕೂರು ಮುದರಂಗಡಿ ಕ್ರಾಸ್ ಬಳಿ ಬಸ್ಸ್  ಬೈಕ್  ಭೀಕರ ಅಪಘಾತ: ಬೈಕ್‌ ಸವಾರ ಗಂಭೀರ ಉಡುಪಿ: ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಬೀಕರ ಅಪಘಾತ ಬುಧವಾರ ಬೆಳಿಗ್ಗೆ ಸಂಭವಿಸಿದೆ.    ಅಡ್ವೆ ಕಡೆಯಿಂದ ಮುದರಂಗಡಿ ಕಡೆ ಚಲಿಸುತ್ತಿದ್ದ ಬೈಕ್ ಹಾಗೂ ಪಡುಬಿದ್ರಿಯಿಂದ ಕಾರ್ಕಳದ ಕಡೆ ಸಾಗುತ್ತಿದ್ದ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ  ಅಡ್ವೆ ಕಡೆಯಿಂದ ಬರುತ್ತಿದ್ದು ಏಕಾಏಕಿ ನಂದಿಕೂರು ಜಂಕ್ಷನ್ ನಲ್ಲಿ ಮುದರಂಗಡಿ […]

ಅಪರಾಧ

ಚಿಕ್ಕೋಡಿ ರಸ್ತೆ ಅಪಘಾತದಲ್ಲಿ ಭಾರತೀಯ ಯೋಧ ಸಾವು

ಚಿಕ್ಕೋಡಿ ರಸ್ತೆ ಅಪಘಾತದಲ್ಲಿ ಭಾರತೀಯ ಯೋಧ ಸಾವು ಬೆಳಗಾವಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಯೋಧ ಲಕ್ಷಣ ಮೃತ ದುರ್ದೈವಿ.  ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ ರಜೆ ಹಿನ್ನಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ್ದರು.  ಬೈಕ್ ನಲ್ಲಿ ತೆರಳುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಹ ಸವಾರ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಯೋಧನ […]

ಅಪರಾಧ

ಹೆಬ್ರಿ : ಓವರ್ ಟೆಕ್ ಬರದಲ್ಲಿ ಭೀಕರ ಅಪಘಾತ : ನಾಲ್ವರಿಗೆ ತೀವ್ರ ಗಾಯ

ಹೆಬ್ರಿ : ಓವರ್ ಟೆಕ್ ಬರದಲ್ಲಿ ಭೀಕರ ಅಪಘಾತ : ನಾಲ್ವರಿಗೆ ತೀವ್ರ ಗಾಯ ಹೆಬ್ರಿ : ಹೆಬ್ರಿಯ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ಶುಕ್ರವಾರ ಓವರ್ ಟೆಕ್ ಬರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ಬೈಕನ್ನು ಕಾರೊಂದು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸುಮಾರು ನಾಲ್ಕು ಮಂದಿ  ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರುಗಳು ಹಾಗೂ ಬೈಕ್ ನುಜ್ಜುಗುಜ್ಜಾಗಿದೆ.  ಸ್ಥಳಕ್ಕೆ  ಹೆಬ್ರಿ ಪಿಎಸ್ಐ ಮಹೇಶ್‌ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. […]

ಅಪರಾಧ

ಕಿನ್ನಿಗೋಳಿ ಮೂರು ಕಾವೇರಿಯಲ್ಲಿ ಟಿಪ್ಪರ್-ಕಾರು ನಡುವೆ ಅಪಘಾತ ; ಮೂವರು ಗಂಭೀರ

ಕಿನ್ನಿಗೋಳಿ ಮೂರು ಕಾವೇರಿಯಲ್ಲಿ ಟಿಪ್ಪರ್–ಕಾರು ನಡುವೆ ಅಪಘಾತ ; ಮೂವರು ಗಂಭೀರ  ಕಿನ್ನಿಗೋಳಿ: ಇಲ್ಲಿನ ಮೂರುಕಾವೇರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೂಡುಬಿದಿರೆ ಕಡೆಯಿಂದ  ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮೂರುಕಾವೇರಿ ಸಮೀಪದ ಮಹಮ್ಮಾಯಿ ದೇವಸ್ಥಾನದ ಬಳಿ ಕಾರಿಗೆ ಡಿಕ್ಕಿ ಹೊಡೆದಿದೆ.  ಅಪಘಾತದ ರಭಸಕ್ಕೆ ಕಾರಿನ ಒಂದು ಬದಿ ಸಂಪೂರ್ಣವಾಗಿ ಜಖಂಗೊಡಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ […]

ಕರಾವಳಿ ಪ್ರಚಲಿತ

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ.

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ. ಉಡುಪಿ: ಉದ್ಯಾವರದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕ  ಮೃತಪಟ್ಟಿದ್ದು, ತನ್ನ ಮನದಾಸೆಯಂತೆ ಆತನ ತಾಯಿ ಅಂಗಾಂಗ ದಾನ ಮಾಡುವ ಸಾರ್ಥಕತೆ ಮೆರೆದಿದ್ದಾರೆ.   ಮಲ್ಪೆಯ ನಿವಾಸಿ ಪ್ರಶಾಂತ್ ಉದ್ಯಾವರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ತೀವ್ರ ಗಾಯಗೊಂಡ ಪ್ರಶಾಂತ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಶಾಂತನ ಮೆದುಳು ನಿಷ್ಕ್ರಿಯಗೊಂಡಿತ್ತು   ಪ್ರಶಾಂತ್ ನ ಆಸೆಯಂತೆ ಪ್ರಶಾಂತ್ ನ ತಾಯಿ […]

eMedia Kannada  @2025. All Rights Reserved.